– ಬೆಳ್ಳಿ, ಕ್ಯಾಶ್ ಮುಟ್ಟಲಿಲ್ಲ, ದೊಡ್ಡ ದೊಡ್ಡ ಚಿನ್ನದ ಸರ ದೋಚಿದ್ರು
ಮೈಸೂರು: ಹುಣುಸೂರು (Hunsur) ಪಟ್ಟಣದಲ್ಲಿ ಮಟ ಮಟ ಮಧ್ಯಾಹ್ನ ನಡೆದ ದರೋಡೆ ಪ್ರಕರಣ ಇದೀಗ ತೀವ್ರತೆ ಪಡೆದುಕೊಂಡಿದ್ದು, ಪೊಲೀಸರು ತನಿಖೆಗೆ 5 ವಿಶೇಷ ತಂಡ ರಚಿಸಿದ್ದಾರೆ. ಈ ಮಧ್ಯೆ ಜ್ಯುವೆಲರಿ ಶಾಪ್ ಮಾಲೀಕ (Jewelry shop owner) ರಶೀದ್ ʻಪಬ್ಲಿಕ್ ಟಿವಿʼ ಜೊತೆಗೆ ಮಾತನಾಡಿದ್ದು, ರೋಚಕ ಸಂಗತಿಗಳನ್ನ ಹಂಚಿಕೊಂಡಿದ್ದಾರೆ.
5 ಜನ ದರೋಡೆಕೋರರು (Robbery) ಬಂದಿದ್ದರು. ಇಬ್ಬರ ಕೈಯಲ್ಲಿ ಎರಡೆರಡು ಗನ್ ಇದ್ವು. ಮತ್ತೆ ಮೂವರ ಕೈಯಲ್ಲಿ ಒಂದೊಂದು ಗನ್ ಇತ್ತು. ಗನ್ ತೋರಿಸಿ ಬೆದರಿಸಿದ್ದಾರೆ. ಕೇವಲ ದೊಡ್ಡ ದೊಡ್ಡ ಬಂಗಾರದ ಸರಗಳನ್ನ ದರೋಡೆ ಮಾಡಿದ್ದಾರೆ. ಹತ್ತೇ ನಿಮಿಷದಲ್ಲಿ ಕೈಗೆ ಸಿಕ್ಕಿದ್ದ ದೊಡ್ಡ ದೊಡ್ಡ ಚಿನ್ನದ ಸರ (Gold chain) ದೋಚಿಕೊಂಡು ಹೋಗಿದ್ದಾರೆ ಅಂತ ವಿವರಿಸಿದ್ದಾರೆ.

ಬೆಳ್ಳಿ (Silver) ಮತ್ತು ಕ್ಯಾಶ್ ಯಾವುದನ್ನೂ ದರೋಡೆಕೋರರು ಮುಟ್ಟಿಲ್ಲ. ದರೋಡೆ ಮಾಡಿ ಹೋಗುವಾಗ ಯಾರು ಹಿಂಬಾಲಿಸದಂತೆ ಹೆದರಿಸಲು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹುಣಸೂರು ದರೋಡೆ ಕೇಸ್ – ಹಿಂದಿ ಮಾತನಾಡ್ತಿದ್ದ, ಕೈಯಲ್ಲಿ ಗನ್ ಹಿಡಿದಿದ್ದ: ಎಸ್ಪಿ ವಿಷ್ಣುವರ್ಧನ್
5 ವಿಶೇಷ ತನಿಖಾ ತಂಡ ರಚನೆ
ಇನ್ನೂ ದರೋಡೆ ಬಗ್ಗೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ʻಪಬ್ಲಿಕ್ ಟಿವಿʼ ಜೊತೆ ವಿವರವಾಗಿ ಮಾತನಾಡಿದ್ದು, 5 ಜನರಿಂದ ದರೋಡೆ ನಡೆದಿದೆ. ಗನ್ ತೋರಿಸಿ ದರೋಡೆ ಮಾಡಿದ್ದು ಇಬ್ಬರು ಮುಖ ಮುಚ್ಚಿಕೊಂಡಿದ್ದಾರೆ. ಮತ್ತೆ ಮೂವರು ಮುಖ ಮುಚ್ಚಿಕೊಂಡಿಲ್ಲ. ಎಷ್ಟು ಪ್ರಮಾಣದ ಚಿನ್ನಾಭರಣ ದೋಚಿದ್ದಾರೆ ಎಂಬ ಮಾಹಿತಿ ಇನ್ನೂ ಲಭ್ಯವಿಲ್ಲ. ತನಿಖೆಗೆ ಐದು ತಂಡ ರಚನೆ ಮಾಡಿದ್ದೇವೆ. ದ್ವಿಚಕ್ರ ವಾಹನದಲ್ಲಿ ಬಂದಿದ್ದ ದರೋಡೆಕೋರರು, ಹಿಂದಿ ಮಾತಾಡುತ್ತಿದ್ದರು. ಎಲ್ಲರ ಕೈಯಲ್ಲೂ ಗನ್ ಇದ್ವು ಎಂದು ಹೇಳಿದ್ದಾರೆ. ಸದ್ಯ ತನಿಖೆ ಪ್ರಗತಿಯಲ್ಲಿದೆ. ಇದನ್ನೂ ಓದಿ: ಮೈಸೂರು | ಹುಣಸೂರಿನಲ್ಲಿ ಹಾಡಹಗಲೇ ಗನ್ ತೋರಿಸಿ ಚಿನ್ನದಂಗಡಿ ದರೋಡೆ

ಮಟ ಮಟ ಮಧ್ಯಾಹ್ನ ಏನಾಯ್ತು?
ರಾಜ್ಯದಲ್ಲಿ ಬ್ಯಾಂಕ್‌ಗಳು, ಎಟಿಎಂಗಳ ಬಳಿಕ ಇದೀಗ ಜ್ಯುವೆಲ್ಲರಿ ಶಾಪ್‌ಗಳ ದರೋಡೆ ಶುರುವಾಗಿದೆ. ಮೈಸೂರು ಜಿಲ್ಲೆಯ ಹುಣಸೂರು ನಗರದಲ್ಲಿ ಚಿನ್ನದ ಅಂಗಡಿ ದರೋಡೆ ಆಗಿದೆ. ಹುಣಸೂರು ಬಸ್ ನಿಲ್ದಾಣದ ಹಿಂಭಾಗದ ಸ್ಕೈ ಗೋಲ್ಡ್ ಅಂಡ್ ಡೈಮಂಡ್ಸ್ ಆಭರಣ ಅಂಗಡಿಗೆ ನುಗ್ಗಿದ 5 ಜನ ದರೋಡೆಕೋರರು, ಅಪಾರ ಪ್ರಮಾಣದ ಚಿನ್ನಾಭರಣ ಲೂಟಿ ಮಾಡಿದ್ದಾರೆ.
ಅಂದಹಾಗೆ, ಕೇರಳ ಮೂಲಕದ ಈ ಸ್ಕೈ ಜ್ಯುವೆಲ್ಲರಿ ಶಾಪನ್ನ ಇದೇ ವರ್ಷದ ಏಪ್ರಿಲ್ 27ರಂದು ಡಾಲಿ ಧನಂಜಯ್ ಉದ್ಘಾಟನೆ ಮಾಡಿದ್ದರು. ಇದನ್ನೂ ಓದಿ: ಹುಬ್ಬಳ್ಳಿ ಏರ್‌ಪೋರ್ಟ್ ಆವರಣದಲ್ಲಿ ಚಿರತೆ ಓಡಾಟ – ದೃಶ್ಯ ಸೆರೆ

