ಯುಗಾದಿ ಹಬ್ಬದ (Ugadi Festival) ಸಂಭ್ರಮಕ್ಕೆ ಸಾಥ್ ನೀಡುವ ರೇಷ್ಮೆ ಸೀರೆಗಳಲ್ಲಿ ನಾರಿಮಣಿಯರು ಆಕರ್ಷಕವಾಗಿ ಕಾಣಿಸುವುದು ತೀರಾ ಸುಲಭ. ಅದಕ್ಕಾಗಿ ಒಂದಿಷ್ಟು ಸ್ಟೈಲಿಂಗ್‌ಗೆ ಐಡಿಯಾಗಳನ್ನು ಫಾಲೋ ಮಾಡಬೇಕು. ಈ ಕುರಿತಂತೆ ಒಂದಿಷ್ಟು ಸಿಂಪಲ್ ಟಿಪ್ಸ್ ನೀಡಿದ್ದಾರೆ. ನೀವು ಧರಿಸುತ್ತಿರುವ ರೇಷ್ಮೆ ಸೀರೆ ಯಾವ ಡಿಸೈನ್ ಹೊಂದಿದೆ? ಯಾವ ಬಗೆಯ ಬಾರ್ಡರ್ ಹೊಂದಿದೆ? ಸಾದಾ, ಪ್ರಿಂಟ್ಸ್, ಹ್ಯಾಂಡ್‌ವರ್ಕ್ ಮಾಡಲಾಗಿದೆಯಾ? ಇಲ್ಲವೇ ಸಿಂಪಲ್ ರೇಷ್ಮೆ ಸೀರೆಯಾ ಎಂಬುದನ್ನು ಮನಗಂಡು ಸ್ಟೈಲಿಂಗ್ ಡಿಸೈಡ್ ಮಾಡುವುದು ಉತ್ತಮ.
ನೀವು ಸೀರೆಗೆ ಹೊಸ ಲುಕ್ ನೀಡಲು ಬಯಸುತ್ತಿರುವಿರಾದಲ್ಲಿ ಕಾಂಟ್ರಾಸ್ಟ್ ಬ್ಲೌಸ್ ಮ್ಯಾಚ್ ಮಾಡಿ. ಸಾದಾ ರೇಷ್ಮೆ ಸೀರೆಯಾದಲ್ಲಿ, ಡಿಸೈನರ್ ಹ್ಯಾಂಡ್‌ವರ್ಕ್ ಅಥವಾ ಡಿಸೈನರ್ ಬ್ಲೌಸ್ ಮ್ಯಾಚ್ ಮಾಡಿ. ಗ್ರ‍್ಯಾಂಡ್ ಸೀರೆಯಾದಲ್ಲಿ ಆದಷ್ಟೂ ಸಿಂಪಲ್ ಬ್ಲೌಸ್ ಧರಿಸಿ. ಇನ್ನು, ಗ್ಲಾಮರಸ್ ಲುಕ್ ಬೇಕಾದಲ್ಲಿ ಸಮ್ಮರ್ ಬ್ಲೌಸ್ ಧರಿಸಿ. ಇದನ್ನೂ ಓದಿ:ವಿಜಯಲಕ್ಷ್ಮಿ ಅಕ್ಕ ಹೋರಾಟ ನೋಡಿ ಅವರೊಂದಿಗೆ ನಿಲ್ಲಬೇಕು ಅನ್ನಿಸಿತು: ದರ್ಶನ್ ಕೇಸ್ ಬಗ್ಗೆ ಧನ್ವೀರ್ ಮಾತು
ಹಬ್ಬದಂದು ಉಡುವ ರೇಷ್ಮೆ ಸೀರೆಯ ಜ್ಯುವೆಲರಿಗಳು ಆಂಟಿಕ್ ಅಥವಾ ಟ್ರೆಡಿಷನಲ್ ಇದ್ದಲ್ಲಿ ಫೆಸ್ಟಿವ್ ಲುಕ್ ನಿಮ್ಮದಾಗುವುದು. ಹಾರ, ನೆಕ್ಲೇಸ್, ಕಡ, ಇಯರಿಂಗ್ಸ್, ಮಾಂಗ್‌ಟೀಕಾ, ಮಾಟಿ, ಕಮರ್‌ಬಾಂದ್ ನಿಮ್ಮ ರೇಷ್ಮೆ ಸೀರೆಯ ಲುಕ್ ಅನ್ನು ಮತ್ತಷ್ಟು ಸುಂದರವಾಗಿಸುವುದು. ನೋಡಲು ಸುಂದರವಾಗಿ ಕಾಣಿಸುವಿರಿ. ಒಟ್ಟಿನಲ್ಲಿ ಹಬ್ಬದ ದಿನದಂದು ಒಂದಿಷ್ಟು ಸಿಂಪಲ್ ಮೇಕೋವರ್ ಐಡಿಯಾಗಳನ್ನು ಪಾಲಿಸಿದಲ್ಲಿ, ನೀವೂ ಕೂಡ ಸೆಲೆಬ್ರೆಟಿಯಂತೆ ಕಾಣಿಸುವುದರಲ್ಲಿ ಯಾವುದೇ ಸಂಶಯವಿಲ್ಲ.