ಉಡುಪಿ: ಚಿನ್ನದಂಗಡಿಗೆ ಭಾರೀ ಗಾತ್ರದ ಹೆಬ್ಬಾವು ನುಗ್ಗಿ ಆತಂಕ ಸೃಷ್ಟಿಸಿದ ಘಟನೆ ನಗರದ ನೋವೆಲ್ಟಿ ಜ್ಯುವೆಲ್ಲರಿಯಲ್ಲಿ ನಡೆದಿದೆ.
Advertisement
ಚಿನ್ನದಂಗಡಿಯ ಮೇಲ್ಛಾವಣಿಯಲ್ಲಿ ಅವಿತಿದ್ದ ಎಂಟು ಅಡಿಯಷ್ಟು ಉದ್ದದ ಹೆಬ್ಬಾವು ಸಿಬ್ಬಂದಿಗೆ ಕಾಣಿಸಿಕೊಂಡಿದೆ. ಹೆಬ್ಬಾವನ್ನು ನೋಡುತ್ತಿದ್ದಂತೆ ಅಲ್ಲಿದ್ದ ಗ್ರಾಹಕರು ಮತ್ತು ಸಿಬ್ಬಂದಿ ಭಯಭೀತರಾಗಿ ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಕೂಡಲೇ ಅಂಗಡಿ ಮಾಲೀಕರು ಉರಗತಜ್ಞ ಗುರುರಾಜ್ ಸನಿಲ್ ಅವರಿಗೆ ಕರೆಮಾಡಿ ಕರೆಸಿದ್ದಾರೆ. ತಕ್ಷಣ ಆಗಮಿಸಿದ ಗುರುರಾಜ್ ಹೆಬ್ಬಾವನ್ನು ರಕ್ಷಣೆ ಮಾಡಿದರು. ಇದನ್ನೂ ಓದಿ: 299 ರೂ. ಚೂಡಿದಾರ್ ಕೊಳ್ಳಲು ಹೋಗಿ 1ಲಕ್ಷ ಕಳೆದುಕೊಂಡ ಮಹಿಳೆ
Advertisement
Advertisement
ಇಲಿಯನ್ನು ಹುಡುಕುತ್ತಾ ಹೆಬ್ಬಾವು ಮಳಿಗೆಯೊಳಗೆ ಬಂದಿದೆ. ಹಾವು ಹಿಡಿಯುವ ವೇಳೆ ಕೈಗೆ ಸುತ್ತಿಕೊಂಡಿದೆ. ನಂತರ ಹಾವನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಯಿತು. ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಗುರುರಾಜ್ ಸನಿಲ್, ಹೆಬ್ಬಾವು ಕಚ್ಚುವ ಹಾವಲ್ಲ. ಜನ ಭಯಗೊಳ್ಳಬಾರದು. ಹಾವನ್ನು ರಕ್ಷಣೆ ಮಾಡಿ ಕಾಡಿಗೆ ಬಿಡಲಾಗಿದೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಪತ್ನಿಗಾಗಿ ಅಪ್ಪು ಹೇಳುತ್ತಿದ್ದ ಹಾಡು ಯಾವುದು ಗೊತ್ತಾ?
Advertisement