ಇನ್ಶುರೆನ್ಸ್ ಹಣಕ್ಕೆ ಕಳ್ಳತನದ ಕತೆ – ಜ್ಯುವೆಲ್ಲರಿ ಮಾಲೀಕ ಅರೆಸ್ಟ್

Public TV
2 Min Read
ARREST 6

ಬೆಂಗಳೂರು: ನಗರದ ಕೆ.ಆರ್. ಮಾರ್ಕೆಟ್ (KR Market) ಫ್ಲೈಓವರ್‌ನಲ್ಲಿ ಜು.15 ರಂದು ನಡೆದಿದ್ದ ದರೊಡೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. 3 ಕೆ.ಜಿ 780 ಗ್ರಾಂ ತೂಕದ ಸುಮಾರು 1.70 ಕೋಟಿ ರೂ. ಮೌಲ್ಯದ ಚಿನ್ನವನ್ನು ದರೋಡೆಕೋರರು ದೋಚಿದ್ದಾರೆ ಎಂದು ಮಾಲೀಕನೇ ಕತೆ ಕಟ್ಟಿರುವುದು ಬೆಳಕಿಗೆ ಬಂದಿದೆ.

ಇನ್ಶುರೆನ್ಸ್ ದುಡ್ಡಿನ ದುರಾಸೆಗೆ ಬಿದ್ದು ಚಿನ್ನದಂಗಡಿ (Jewelery Shop) ಮಾಲೀಕನೇ ಕಳ್ಳತನವಾಗಿದೆ ಎಂದು ಕತೆ ಕಟ್ಟಿದ್ದಾನೆ ಎಂದು ತನಿಖೆ ವೇಳೆ ಬಯಲಾಗಿದೆ. ಕೇಸರ್ ಚಿನ್ನದಂಗಡಿ ಮಾಲೀಕ ಈ ಪ್ಲಾನ್ ಮಾಡಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಈ ಪ್ರಕರಣದಲ್ಲಿ ಮಾಲೀಕ ಸೇರಿ ಇಬ್ಬರು ಅಪ್ರಾಪ್ತರನ್ನು ಪೊಲೀಸರು (Police) ಬಂಧಿಸಿದ್ದಾರೆ. ಇದನ್ನೂ ಓದಿ: ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ ಕೇಸ್‌ – ಮಹಿಳಾ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚನೆ?

ಆರೋಪಿ ನಿಜವಾಗಿಯೂ ಕಳ್ಳತನವಾದಂತೆ ಬಿಂಬಿಸಿದ್ದ. ಬ್ಯಾಗ್ ಕಸಿದುಕೊಂಡು ಸ್ಕೂಟರ್ ಹತ್ತಿಕೊಂಡು ಹೋಗಿದ್ದಾರೆ ಎಂದು ಕತೆ ಕಟ್ಟಿದ್ದ. ಬಳಿಕ ಮಾರ್ಕೆಟ್ ಫ್ಲೈಓವರ್ ಮೂಲಕ ಸ್ಕೂಟರ್‌ನಲ್ಲಿ ತೆರಳಿದ್ದಾರೆ ಎಂದು ಪೊಲೀಸರಿಗೆ ಅನುಮಾನ ಬರದಂತೆ ಪ್ಲಾನ್ ಮಾಡಿ ದೂರು ನೀಡಿದ್ದ.

ಸಿಸಿಟಿವಿ ಇಲ್ಲದ ಮಾರ್ಕೆಟ್ ಫ್ಲೈಓವರ್ ಮೇಲೆ ಚಿನ್ನ ದರೋಡೆಯಾಗಿದ್ದರ ಬಗ್ಗೆ ಕಾಟನ್‍ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡದ್ದರು. ಬಳಿಕ ಮಾಲೀಕ ರಾಜು ಜೈನ್‍ನನ್ನು ವಿಚಾರಣೆ ಮಾಡಿದ್ದರು. ಅಲ್ಲದೇ ಚಿನ್ನ ತೆಗೆದುಕೊಂಡು ಹೋಗಿದ್ದ ಹುಡುಗರನ್ನು ವಿಚಾರಣೆ ಸಹ ಮಾಡಿದ್ದರು. ಇಷ್ಟಾದರೂ ಯಾವುದೇ ಸುಳಿವು ಸಹ ಸಿಕ್ಕಿರಲಿಲ್ಲ.

ಬಳಿಕ ಚಿನ್ನದಂಗಡಿಯ ಹುಡುಗ ಸೈಡ್‍ಗೆ ಹೋಗಿ ವಾಟ್ಸಪ್ ಕಾಲ್ ಮಾಡಿದ್ದರ ಮೇಲೆ ಅನುಮಾನಗೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಹೊರಗೆ ಬಂದಿದೆ. ತನಿಖೆ ವೇಳೆ ಹುಡುಗರಿಗೆ ಪೊಲೀಸರ ಜೊತೆ ಹೇಗೆ ವರ್ತಿಸಬೇಕು ಎಂದು 15 ದಿನಗಳ ಕಾಲ ಹೇಳಿ ಕೊಟ್ಟಿದ್ದ ಎಂಬ ರೋಚಕ ವಿಚಾರ ಬೆಳಕಿಗೆ ಬಂದಿದೆ.

ಚಿನ್ನದ ವ್ಯಾಪಾರಿ ತಮ್ಮ ಸ್ಕೂಟರ್‍ನಲ್ಲಿ ಚಿನ್ನ ಇಟ್ಟುಕೊಂಡು ಫ್ಲೈಓವರ್‍ನಲ್ಲಿ ಹೋಗುತ್ತಿದ್ದ ವೇಳೆ ಮತ್ತೊಂದು ಬೈಕ್‍ನಲ್ಲಿ ಬಂದಿದ್ದ ಇಬ್ಬರು ಅರೋಪಿಗಳು, ಫ್ಲೈಓವರ್ ಮೇಲೆ ಚಲಿಸುತಿದ್ದ ಬೈಕ್‍ಗೆ ಅಡ್ಡ ಬಂದು ಬ್ಯಾಗ್ ಕಸಿದು ಪರಾರಿಯಾಗಿದ್ದಾರೆ ಎಂದು ಆರೋಪಿಗಳು ಕತೆ ಕಟ್ಟಿದ್ದರು. ಇದನ್ನೂ ಓದಿ: ಫೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ ಯೋಜನೆ ರದ್ದು ಮಾಡಲು ಸಾಧ್ಯವಿಲ್ಲ: ಡಿಕೆಶಿ

Web Stories

Share This Article