ನವದೆಹಲಿ: ಜೆಟ್ ಇಂಧನ ದರ ಶೇ.2ರಷ್ಟು ಹೆಚ್ಚಿಸಲಾಗಿದೆ. ವಿಮಾನ ಇಂಧನ ದರ ಹೆಚ್ಚಳವಾಗಿರುವ ಕಾರಣ ಪ್ರಯಾಣದ ಟಿಕೆಟ್ ದರ ಕೂಡಾ ದುಬಾರಿ ಆಗಿದೆ.
ಏವಿಯೇಷನ್ ಟರ್ಬೈನ್ ಇಂಧನ (ಎಟಿಎಫ್) ವಿಮಾಗಳಿಗೆ ಬಳಸಲಾಗುತ್ತದೆ. ಈ ಇಂಧನಕ್ಕೆ ಪ್ರತಿ ಕಿಲೋ ಲೀಟರ್ಗೆ ರೂ. 2,258.54 ಅಥವಾ ಶೇ. 2 ರಷ್ಟು ಹೆಚ್ಚಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಕಿಲೋ ಲೀಟರ್ಗೆ ರೂ. 1,12,924.83 ಕ್ಕೆ ಏರಿಸಲಾಗಿದೆ.
Advertisement
Advertisement
ವಿಮಾನಯಾನ ಸಂಸ್ಥೆಯ ನಿರ್ವಹಣಾ ವೆಚ್ಚದ ಶೇ.40 ರಷ್ಟನ್ನು ಹೊಂದಿರುವ ಜೆಟ್ ಇಂಧನವು ಈ ವರ್ಷ ಗರಿಷ್ಠ ಮಟ್ಟಕ್ಕೆ ಏರಿದೆ. ಇಂದು ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆಟೋ ಇಂಧನ ದರಗಳು ಲೀಟರ್‌ಗೆ 6.40 ರೂ. ಏರಿಕೆಯಾಗಿದೆ. ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳ ದರ ಅಧಿಸೂಚನೆಯ ಪ್ರಕಾರ ಬೆಲೆಗಳು ನಿಗದಿಯಾಗಿವೆ. ಇದನ್ನೂ ಓದಿ: ಮಗ ಅಳುತ್ತಿದ್ದರೂ ನನ್ನ ಮೇಲೆ ಅತ್ಯಾಚಾರ ಮಾಡಿದ್ರು- ಉಕ್ರೇನ್ ಮಹಿಳೆ
Advertisement
ವಿಮಾನ ಇಂಧನ ದರವು 2022ರ ಆರಂಭದಿಂದಲೇ ಹದಿನೈದು ದಿನಕ್ಕೊಮ್ಮೆ ಏರಿಕೆ ಕಾಣುತ್ತಿದೆ. ಜನವರಿ 1ರಂದು ಏಳನೇ ಬಾರಿಗೆ ದರ ಏರಿಕೆ ಕಂಡಿತ್ತು.