ನವದೆಹಲಿ: ಕೆನರಾ ಬ್ಯಾಂಕ್‍ಗೆ ವಂಚಿಸಿರುವ ಆರೋಪದ ಮೇಲೆ ಜೆಟ್ ಏರ್‌ವೇಸ್ (Jet Airways) ಸಂಸ್ಥಾಪಕ ನರೇಶ್ ಗೋಯಲ್ (78) ಅವರನ್ನು ಜಾರಿ ನಿರ್ದೇಶನಾಲಯ (Enforcement Directorate) ಬಂಧಿಸಿದೆ. ಮುಂಬೈನ (Mumbai) ಇಡಿ ಕಚೇರಿಯಲ್ಲಿ ತೀವ್ರ ವಿಚಾರಣೆ ನಡೆಸಿದ ಬಳಿಕ ಅಕ್ರಮ ಹಣ ವರ್ಗಾವಣೆ ತಡೆಗಟ್ಟುವಿಕೆ ಕಾಯ್ದೆ (ಪಿಎಂಎಲ್‍ಎ) ಅಡಿಯಲ್ಲಿ ಗೋಯಲ್ (Naresh Goyal) ಅವರನ್ನು ಇಡಿ ಬಂಧಿಸಿದೆ.
ಗೋಯಲ್ ಅವರು 538 ಕೋಟಿ ರೂ. ಹಣವನ್ನು ಅಕ್ರಮವಾಗಿ ವರ್ಗಾಯಿಸಿದ್ದಾರೆ ಎನ್ನಲಾಗಿದೆ. ಅವರನ್ನು ಮುಂಬೈನ ಪಿಎಂಎಲ್‍ಎ ವಿಶೇಷ ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತದೆ. ಬಳಿಕ ಇಡಿ ಹೆಚ್ಚಿನ ವಿಚಾರಣೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.
Advertisement
ಕೆನರಾ ಬ್ಯಾಂಕ್‍ಗೆ 538 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಟ್ ಏರ್‌ವೇಸ್ ಸಂಸ್ಥಾಪಕ ಗೋಯಲ್ ಮತ್ತು ಅವರ ಪತ್ನಿ ಅನಿತಾ ಸೇರಿದಂತೆ ಕಂಪನಿಯ ಕೆಲವು ಮಾಜಿ ಅಧಿಕಾರಿಗಳ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಎಫ್‍ಐಆರ್ ದಾಖಲಿಸಿದೆ. ಇದರ ಆಧಾರದ ಮೇಲೆ ಇಡಿ ವಿಚಾರಣೆ ನಡೆಸುತ್ತಿದೆ. ಇದನ್ನೂ ಓದಿ: Aditya L1 Launch: ಸೂರ್ಯ ಶಿಕಾರಿಗೆ ಹೊರಟ ಆದಿತ್ಯ
Advertisement
Advertisement
ಜೆಟ್ ಏರ್‌ವೇಸ್ ಲಿಮಿಟೆಡ್‍ಗೆ (ಜೆಐಎಲ್) 848.86 ಕೋಟಿ ಮೊತ್ತದ ಸಾಲವನ್ನು ಮಂಜೂರು ಮಾಡಲಾಗಿತ್ತು. ಅದರಲ್ಲಿ 538.62 ಕೋಟಿ ರೂ. ಬಾಕಿ ಇದೆ ಎಂದು ಆರೋಪಿಸಿ ಕೆನರಾ ಬ್ಯಾಂಕ್‍ನ ಆಡಳಿತ ಮಂಡಳಿ ನೀಡಿದ ದೂರಿನ ಆಧಾರದ ಮೇಲೆ ಎಫ್‍ಐಆರ್ ದಾಖಲಿಸಲಾಗಿದೆ.
Advertisement
ಜಿಐಎಲ್‍ನ ವಿಧಿವಿಜ್ಞಾನ ಲೆಕ್ಕಪರಿಶೋಧನೆಯ ಪ್ರಕಾರ, ಸಂಬಂಧಿತ ಕಂಪನಿಗಳಿಗೆ ಒಟ್ಟು ಕಮಿಷನ್ ವೆಚ್ಚದಲ್ಲಿ 1,410 ಕೋಟಿ ರೂ. ಗಳನ್ನು ಪಾವತಿಸಿರುವುದು ಕಂಡುಬಂದಿದೆ. ಹಣವನ್ನು ಅಕ್ರಮವಾಗಿ ಬೇರೆಡೆಗೆ ವರ್ಗಾಹಿಸಿರುವುದು ಪತ್ತೆಯಾಗಿದೆ ಎಂದು ಕೆನರಾ ಬ್ಯಾಂಕ್ ತನ್ನ ವರದಿಯಲ್ಲಿ ತಿಳಿಸಿತ್ತು. ಜಿಐಎಲ್ ಕಂಪನಿ ತನ್ನ ಅಧೀನ ಕಂಪನಿಗಳಿಗೆ ಸಾಲದ ಹಣವನ್ನು ಸಾಲ ಮತ್ತು ಮುಂಗಡಗಳು ಸೇರಿದಂತೆ ಹೂಡಿಕೆಗಳ ರೂಪದಲ್ಲಿ ಬೇರೆಡೆಗೆ ತಿರುಗಿಸಿದೆ ಎಂದು ತಿಳಿಬಂದಿದೆ. ಇದನ್ನೂ ಓದಿ: ಭಾರತಕ್ಕೆ ಗೌರವ ತರುವ ಕೆಲಸವನ್ನ ಕರ್ನಾಟಕದಿಂದ ಇಸ್ರೋ ಮಾಡ್ತಿದೆ: ಡಿಕೆಶಿ
Web Stories