ರಾಮನಗರ: ಹಲಾಲ್, ಹಿಜಬ್ ಗಲಾಟೆ ನಡುವೆ ರಾಮನಗರ (Ramanagara) ಜಿಲ್ಲೆಯಲ್ಲಿ ಮತ್ತೊಂದು ವಿವಾದ ಶುರುವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಸ್ವಗ್ರಾಮ ದೊಡ್ಡ ಆಲಹಳ್ಳಿಯಲ್ಲಿ ಪಡಿತರ ಚೀಟಿ (Ration Card) ಹಿಂಭಾಗ ಏಸು ಕ್ರಿಸ್ತ (Jesus Christ), ಲಕ್ಷ್ಮಿ ದೇವಿ ಫೋಟೋ ಮುದ್ರಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಪಡಿತರ ಚೀಟಿ ಹಿಂಭಾಗ ಏಸು ಕ್ರಿಸ್ತನ ಫೋಟೋ ಮುದ್ರಿಸಲಾಗಿರುವ ಫೋಟೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗಿದೆ. ಈ ಫೋಟೋ ವೈರಲ್ (Photo Viral) ಆಗುತ್ತಿದ್ದಂತೆ ಹಿಂದೂಪರ ಸಂಘಟನೆಗಳು ಆಕ್ರೋಶ ಹೊರ ಹಾಕಿವೆ. ಅಷ್ಟೇ ಅಲ್ಲದೇ ಸರ್ಕಾರದಿಂದ ನೀಡಲಾಗುವ ಪಡಿತರ ಚೀಟಿ ಹಿಂಭಾಗ ಏಸು ಕ್ರಿಸ್ತ, ಲಕ್ಷ್ಮಿ ದೇವಿ ಫೋಟೋ ಮುದ್ರಿಸಿರುವ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಲು ಶ್ರೀರಾಮ ಸೇನೆ (Sri Rama Sene) ಮುಂದಾಗಿದೆ. ಇದನ್ನೂ ಓದಿ: ಹೈಕಮಾಂಡ್ ಕೈ ಕಾಲು ಕಟ್ಟಿ ಹಾಕಿ, ಖರ್ಗೆ ಕೈಯಲ್ಲಿ ಕೆಲಸ ಮಾಡಿಸ್ತಾರೆ: ಸುಧಾಕರ್
Advertisement
Advertisement
ಈ ಬಗ್ಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಿಲ್ಲಾ ಉಪನಿರ್ದೇಶಕಿ ರಮ್ಯಾ ಮಾತನಾಡಿ, ಇದು ಸರ್ಕಾರದಿಂದ ಮುದ್ರಣವಾಗಿರುವ ಕಾರ್ಡ್ ಅಲ್ಲ, ಸ್ಥಳೀಯ ಸೈಬರ್‌ನಲ್ಲಿ ಮುದ್ರಣ ಮಾಡಲಾಗಿದೆ. ಆದರೆ ರೇಷನ್ ಕಾರ್ಡ್‍ನಲ್ಲಿ ಪ್ರಿಂಟ್ ಮಾಡಲಾಗಿಲ್ಲ. ಲ್ಯಾಮಿನೇಷನ್ ಮಾಡುವವರು ಈ ರೀತಿ ಪ್ರಿಂಟ್ ಮಾಡಿದ್ದಾರೆ. ನಮಗೆ ಈ ಬಗ್ಗೆ ದೂರು ಬಂದಿದೆ. ಈ ಕುರಿತು ಸೈಬರ್ ಸೆಂಟರ್‌ಗಳ ಮೇಲೆ ನಿಗಾ ವಹಿಸುತ್ತೇವೆ. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮವಹಿಸುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ನನ್ನ ವಿರುದ್ಧ ಒಂದೇ ಒಂದು ಭ್ರಷ್ಟಾಚಾರದ ಕೇಸ್ ಕಾಂಗ್ರೆಸ್ ಸಾಬೀತು ಮಾಡಲಿ- ಅಶ್ವಥ್ ನಾರಾಯಣ ಸವಾಲ್