ಹೆಚ್ಚು ಮಸಾಲೆ ಇಷ್ಟ ಪಡದವರಿಗೆ ಜೀರಾ ರೈಸ್ ತುಂಬಾ ಇಷ್ಟ. ಏಕೆಂದರೆ ಇದಕ್ಕೆ ಹೆಚ್ಚು ಮಸಾಲಾ ಮತ್ತು ತರಕಾರಿಗಳನ್ನು ಹಾಕದೆ ಸಿಂಪಲ್ ಮತ್ತು ರುಚಿಕರವಾಗಿ ಮಾಡಬಹುದು. ಇದನ್ನು ನಾವು ಹೆಚ್ಚು ಹೋಟೆಲ್‌ಗೆ ಹೋಗಿ ತಿನ್ನುತ್ತೇವೆ. ಆದರೆ ಇಂದು ನೀವೇ ನಿಮ್ಮ ಮನೆಯಲ್ಲಿ ಸುಲಭವಾಗಿ ಹೇಗೆ ಜೀರಾ ರೈಸ್ ಮಾಡಬಹುದು ಎಂದು ಹೇಳಿಕೊಡುತ್ತಿದ್ದೇವೆ. ಇದನ್ನು ಟೆಸ್ಟ್ ಮಾಡಿದ್ರೆ ನೀವು ಹೋಟೆಲ್‌ನಲ್ಲಿ ತಿನ್ನುವ ಅಗತ್ಯವೇ ಇರುವುದಿಲ್ಲ.
ಬೇಕಾಗಿರುವ ಪದಾರ್ಥಗಳು:
* ಬೇಯಿಸಿದ ಬಾಸ್ಮತಿ ರೈಸ್ – 3 ಕಪ್
* ಎಣ್ಣೆ – 1 ಟೀಸ್ಪೂನ್
* ತುಪ್ಪ – 1 ಟೀಸ್ಪೂನ್
* ಜೀರಿಗೆ – 1 ಟೀಸ್ಪೂನ್
* ಕೊತ್ತಂಬರಿ ಸೊಪ್ಪು – 2 ಟೇಬಲ್ಸ್ಪೂನ್
* ರುಚಿಗೆ ತಕ್ಕಷ್ಟು ಉಪ್ಪು
* ಹಸಿರು ಮೆಣಸಿನಕಾಯಿ – 1
* ಏಲಕ್ಕಿ – 1
ಮಾಡುವ ವಿಧಾನ:
* ದೊಡ್ಡ ಬಾಣಲೆಗೆ ತುಪ್ಪ ಹಾಕಿ ಅದು ಬಿಸಿಯಾದ ಮೇಲೆ ಜೀರಿಗೆ, ಹಸಿರು ಮೆಣಸಿನಕಾಯಿ, ಏಲಕ್ಕಿ ಹಾಕಿ ಫ್ರೈ ಮಾಡಿ.
* ಈಗ ಬೇಯಿಸಿದ ಬಾಸ್ಮತಿ ರೈಸ್ ಸೇರಿಸಿ. ನಂತರ ಉಪ್ಪು ಹಾಕಿ ನಿಧಾನವಾಗಿ ಮಿಶ್ರಣ ಮಾಡಿ.
* ಅಂತಿಮವಾಗಿ ಕಟ್ ಮಾಡಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ. ದಾಲ್ ನೊಂದಿಗೆ ಜೀರಾ ರೈಸ್ ಆನಂದಿಸಿ.