ಚಿಕ್ಕಮಗಳೂರು: ಹೊರನಾಡಿಗೆ ತೆರಳುತ್ತಿದ್ದಾಗ ನಿಯಂತ್ರಣ ತಪ್ಪಿ ಜೀಪ್(Jeep) ಹಳ್ಳಕ್ಕೆ ಬಿದ್ದ ಪರಿಣಾಮ ಚಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕಳಸ(Kalasa) ತಾಲೂಕಿನಲ್ಲಿ ನಡೆದಿದೆ.
ಹೊಸಗದ್ದೆಯಿಂದ ಹೊರನಾಡಿಗೆ(Horanadu) ಹೋಗುವಾಗ ಮಂಗಳವಾರ ಸಂಜೆ ಮಾರ್ಗಮಧ್ಯೆ ಈ ದುರ್ಘಟನೆ ಸಂಭವಿಸಿದೆ. ಜೀಪ್ ಪಲ್ಟಿಯಾದ ಬಳಿಕ ಹಳ್ಳದ ನೀರಿಗೆ ಬಿದ್ದಿದೆ.
Advertisement
ಜೀಪಿನಲ್ಲಿ ಧರ್ಮೇಂದ್ರ ಅವರ ಪತ್ನಿ ಅಕ್ಷತಾ(35) ಒಬ್ಬರೇ ಇದ್ದು, ಅವರೇ ಚಲಾಯಿಸುತ್ತಿದ್ದರು. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಹೋಗಿ ಅಕ್ಷತಾ ಅವರನ್ನು ಮೇಲಕ್ಕೆ ಎತ್ತಿದರೂ ಕೂಡ ಅಷ್ಟರಲ್ಲಿ ಪ್ರಾಣ ಹೋಗಿತ್ತು. ಮೃತ ಅಕ್ಷತಾಗೆ 12 ಹಾಗೂ 6 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬೀದರ್‌ನಲ್ಲೊಬ್ಬ ಮಾದರಿ ರೈತ- 2 ಎಕರೆಯಲ್ಲಿ ಹೀರೇಕಾಯಿ ಬೆಳೆದು ಕಮಾಲ್
Advertisement
Advertisement
ಕಂದಕಕ್ಕೆ ಉರುಳಿದ ಕಾರು:
ಕೋಲಾರದಿಂದ(Kolara) ಧರ್ಮಸ್ಥಳಕ್ಕೆ(Dharmasthala) ಹೊರಟದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಸುಮಾರು 20 ಅಡಿ ಆಳದ ಕಂದಕಕ್ಕೆ ಬಿದ್ದ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟಿಯ ಮಲಯಮಾರುತ ಬಳಿ ನಡೆದಿದೆ.
Advertisement
ಅದೃಷ್ಟವಶಾತ್ ಕಾರಿನಲ್ಲಿದ್ದ ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಾಲಕನ ನಿಯಂತ್ರಣ ತಪ್ಪುತ್ತಿದ್ದಂತೆ ಕಾರು ಸುಮಾರು 20 ಅಡಿ ಆಳದ ಪ್ರಪಾತಕ್ಕೆ ಬಿದ್ದಿದೆ. ಕಾರಿನಲ್ಲಿ ಐವರು ಪ್ರಯಾಣಿಕರು ಪ್ರಯಾಣಿಸುತ್ತಿದ್ದು ಅದೃಷ್ಟವಶಾತ್ ಯಾರಿಗೂ ಯಾವುದೇ ತೊಂದರೆಯಾಗಿಲ್ಲ.
ಎಲ್ಲರಿಗೂ ಸಣ್ಣ-ಪುಟ್ಟ ಗಾಯವಾಗಿದ್ದು ಎಲ್ಲರಿಗೂ ಮೂಡಿಗೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.