ಮಂಗಳೂರು: ಯುವಕನೊಬ್ಬನ ಅಚಾತುರ್ಯದಿಂದ ಜೀಪ್ ಅಡ್ಡಾದಿಡ್ಡಿ ಚಲಿಸಿ, ಸರಣಿ ಅಪಘಾತಕ್ಕೀಡಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ನಡೆದಿದೆ.
ಜೀಪ್ ಚಾಲಕ ರಸ್ತೆ ಬದಿ ವಾಹನ ನಿಲ್ಲಿಸಿ, ಕೀ ಬಿಟ್ಟು ಹೋಗಿದ್ದೆ ಘಟನೆಗೆ ಪ್ರಮುಖ ಕಾರಣವಾಗಿದ್ದು, ಈ ವೇಳೆ ಸ್ಥಳದಲ್ಲಿ ಇದ್ದ ಯುವಕ ಕುತೂಹಲದಿಂದ ಜೀಪ್ ಸ್ಟಾರ್ಟ್ ಮಾಡಿದ್ದಾನೆ. ಆದರೆ ವಾಹನ ಗೇರ್ ನಲ್ಲೇ ಇದ್ದ ಪರಿಣಾಮ ಜೀಪು ಅಡ್ಡಾದಿಡ್ಡಿ ಚಲಿಸಿದೆ.
ಎರಡು ಕಾರು, ನಾಲ್ಕು ಬೈಕಿಗೆ ಡಿಕ್ಕಿಯಾಗಿದ್ದ ಜೀಪು ಮಗು ಎತ್ತಿಕೊಂಡಿದ್ದ ಮಹಿಳೆಗೆ ಡಿಕ್ಕಿಯಾಗಿ ಬಳಿಕ ಮೈ ಮೇಲಿಂದ ಹರಿದು ಹೋಗಿದೆ. ಈ ವೇಳೆ ಸಮಯ ಪ್ರಜ್ಞೆ ತೋರಿದ ಮಹಿಳೆ ತನ್ನ ಕೈಲಿದ್ದ ಮಗುವನ್ನು ದೂರಕ್ಕೆ ತಳ್ಳಿದ್ದಾರೆ. ಪರಿಣಾಮ ಸಂಭವಿಸ ಬೇಕಾಗಿದ್ದ ದುರಂತ ತಪ್ಪಿದ್ದು, ಜೀಪು ಮಹಿಳೆಯ ಮೇಲೆ ಹರಿದು ಹೋಗಿದ್ದರು ಕೂಡ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪರಾಗಿದ್ದಾರೆ. ಬಳಿಕ ಜೀಪು ನಿಂತಿದ್ದು, ಯುವಕನ ಈ ಕೃತ್ಯಕ್ಕೆ ಸ್ಥಳೀಯರು ಆಕ್ರೋಶಗೊಂಡು ಹೊಡೆತ ನೀಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv