ನವದೆಹಲಿ: ಜೆಇಇ ಮೇನ್ಸ್ (JEE Mains) ಪರೀಕ್ಷೆಯ (Exam) ವೆಬ್‌ಸೈಟ್ ಹ್ಯಾಕ್ (Hack) ಮಾಡಿದ್ದ ರಷ್ಯಾ (Russia) ಪ್ರಜೆಯನ್ನು ಸಿಬಿಐ (CBI) ಬಂಧಿಸಿದೆ.
ಆರೋಪಿ ಮಿಖಾಯಿಲ್ ಶಾರ್ಗಿನ್‌ನನ್ನು ಸಿಬಿಐ ಪೊಲೀಸರು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದಾರೆ. ಈತನ ಕುರಿತು ಸಿಬಿಐ ಲುಕೌಟ್ ನೋಟಿಸ್ ಹೊರಡಿಸಿತ್ತು. ಕಜಕಿಸ್ತಾನದಿಂದ ಆತ ದೆಹಲಿಗೆ ಲ್ಯಾಂಡ್ ಆದ ಕೂಡಲೇ ವಶಕ್ಕೆ ಪಡೆದು ಬಂಧಿಸಲಾಗಿದೆ. ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ಈತನೇ ಮುಖ್ಯ ಹ್ಯಾಕರ್ ಆಗಿದ್ದ ಎಂದು ಸಿಬಿಐ ಮೂಲಗಳು ತಿಳಿಸಿವೆ.
Advertisement
Advertisement
ಕಳೆದ ವರ್ಷ ಸಪ್ಟೆಂಬರ್‌ನಲ್ಲಿ ನಡೆದಿದ್ದ ಜೆಇಇ ಮೇನ್ಸ್ ಆನ್‌ಲೈನ್ ಪರೀಕ್ಷೆಯಲ್ಲಿ ಅಕ್ರಮ ನಡೆದಿತ್ತು. ಈ ಪರೀಕ್ಷೆಯಲ್ಲಿ ಸುಮಾರು 10 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಟಿಸಿಎಸ್ ಸಾಫ್ಟ್‌ವೇರ್ ಹ್ಯಾಕ್ ಮಾಡಿ ಪ್ರಶ್ನೆಪತ್ರಿಕೆಯನ್ನು ಸೋರಿಕೆ ಮಾಡಿದ್ದ. ಇದನ್ನೂ ಓದಿ: ಬಡತನ, ನಿರುದ್ಯೋಗ, ಸಂಪತ್ತಿನ ಅಸಮಾನತೆ ಅಪಾಯಕಾರಿಯಾಗುತ್ತಿದೆ – RSS ಬೇಸರ
Advertisement
ಇದಾದ ಬಳಿಕ ಉತ್ತರ ಪ್ರದೇಶದ ನೋಯ್ಡಾದಲ್ಲಿರುವ ಅಫಿನಿಟಿ ಎಜುಕೇಶನ್ ಹೆಸರಿನ ಖಾಸಗಿ ಕೋಚಿಂಗ್ ಸಂಸ್ಥೆಯ ಸಿಬ್ಬಂದಿ ತಲಾ 12-15 ಲಕ್ಷ ರೂ.ವರೆಗೆ ಪ್ರಶ್ನೆ ಪತ್ರಿಕೆಯನ್ನು ಮಾರಾಟ ಮಾಡಿದ್ದ.
Advertisement
ಈ ಅಕ್ರಮ ಪ್ರಕರಣದಲ್ಲಿ ಹಲವರು ವಿದೇಶಿ ವ್ಯಕ್ತಿಗಳ ಕೈವಾಡ ಇದ್ದು ತನಿಖೆ ನಡೆಯುತ್ತಿದೆ. ಅಕ್ರಮದಲ್ಲಿ ಭಾಗಿಯಾದ 20 ವಿದ್ಯಾರ್ಥಿಗಳು ಮೂರು ವರ್ಷ ಪರೀಕ್ಷೆ ಬರೆಯದಂತೆ ನಿರ್ಬಂಧ ವಿಧಿಸಲಾಗಿದೆ. ಇದನ್ನೂ ಓದಿ: PFI ಜೊತೆ SDPIಗೆ ಯಾವುದೇ ಸಂಬಂಧವಿಲ್ಲ – ಚುನಾವಣಾ ಆಯೋಗ ಸ್ಪಷ್ಟನೆ