ಹೈದರಾಬಾದ್: ತನ್ನ ಪತಿಯೊಂದಿಗೆ ಅನೈತಿಕವಾಗಿ ಸಂಬಂಧ ಹೊಂದಿದ್ದಳೆಂದು ಶಂಕಿಸಿ, ಮಹಿಳೆಯೊಬ್ಬಳು ತನ್ನ ಸ್ನೇಹಿತೆ ಮೇಲೆಯೇ ಐವರಿಂದ ಅತ್ಯಾಚಾರ ಮಾಡಿಸಿದ್ದಾಳೆ. ಬಳಿಕ ಕೃತ್ಯವನ್ನು ವೀಡಿಯೋ ಮಾಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಹೈದರಾಬಾದ್‌ನ ಗಚ್ಚಿಬೌಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಗಾಯತ್ರಿ ಮತ್ತು ಇತರೆ ಐವರು ಅತ್ಯಾಚಾರ ಆರೋಪಿಗಳಾದ ಉಲ್ಸಲಾ ಮನೋಜ್ ಕುಮಾರ್ (22), ಸೈಯದ್ ಮಸ್ತಾನ್ (25), ಶೇಖ್ ಮುಜಾಹಿದ್(25), ಶೇಖ್ ಮೌಲಾ ಅಲಿ(32), ಮತ್ತು ಪೃದ್ವಿ ವಿಷ್ಣು ವರ್ಧನ್(22) ಅನ್ನು ಬಂಧಿಸಲಾಗಿದೆ.
Advertisement
Advertisement
ಏನಿದು ಘಟನೆ?: ಆರೋಪಿ ಮಹಿಳೆ ಗಾಯತ್ರಿ ಹಾಗೂ ಆಕೆಯ ಪತಿ ಶ್ರೀಕಾಂತ್ ಕೊಂಡಾಪುರ ಶ್ರೀರಾಮನಗರದಲ್ಲಿ ವಾಸವಾಗಿದ್ದರು. ವೃತ್ತಿಯಲ್ಲಿ ಶ್ರೀಕಾಂತ್ ಉಪನ್ಯಾಸಕರಾಗಿ ಹಾಗೂ ಆರೋಪಿ ಪತ್ನಿ ಗಾಯತ್ರಿ ಸ್ಫರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಈ ನಡುವೆ ಸಾಮಾಜಿಕ ಮಾಧ್ಯಮದ ಮೂಲಕ ಆಂಧ್ರ ಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಶ್ರೀಹರ್ಷಿತಾ (25) ಪರಿಚಯವಾಗಿದ್ದರು. ಇಬ್ಬರೂ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರಿಂದ ಆಗಾಗ್ಗೆ ಇಬ್ಬರೂ ಪರಸ್ಪರ ಚಾಟ್ ಮತ್ತು ಫೋನ್ ಮಾಡಿ ಮಾತನಾಡುತ್ತಿದ್ದರು.
Advertisement
Advertisement
ಈ ನಡುವೆ ಕಾರಣಾಂತರಗಳಿಂದ ಯುವತಿ ಶ್ರೀಹರ್ಷಿತಾ ಅವರು ಗಚ್ಚಿಬೌಲಿಯಲ್ಲಿ ಗಾಯತ್ರಿ ವಾಸವಿದ್ದ ಕಾಲೋನಿಗೇ ಸ್ಥಳಾಂತರಗೊಂಡಿದ್ದರು. ಅಂದಿನಿಂದ ಶ್ರೀಹರ್ಷಿತಾ ಆಗಾಗ ಗಾಯತ್ರಿ ಮನೆಗೆ ಬಂದು ಮಾತನಾಡುತ್ತಿದ್ದರು. ಇದೇ ವೇಳೆ ಹರ್ಷಿತಾಗೆ ಗಾಯತ್ರಿ ಪತಿ ಶ್ರೀಕಾಂತ್‌ನೊಂದಿಗೆ ಪರಿಚಯವಾಗಿತ್ತು. ಇವರಿಬ್ಬರ ಪರಿಚಯ ದಿನೇ ದಿನೇ ಗಾಢವಾಗಿದ್ದು, ಇದನ್ನು ಗಮನಿಸಿದ ಶ್ರೀಕಾಂತ್ ಪತ್ನಿ ಗಾಯತ್ರಿ ತನ್ನ ಪತಿ ಮತ್ತು ಹರ್ಷಿತಾ ನಡುವೆ ವಿವಾಹೇತರ ಸಂಬಂಧವಿದೆ ಎಂದು ಶಂಕಿಸಿದ್ದಾರೆ. ಅಲ್ಲದೆ ಇದಕ್ಕೆ ಪ್ರತಿಯಾಗಿ ತಾನು ಸೇಡು ತೀರಿಸಿಕೊಳ್ಳಲು ಹೊಂಚು ಹಾಕಿದ್ದಾಳೆ.
ನಂತರ ಆಕೆಯ ಮೇಲೆ ಅತ್ಯಾಚಾರ ಮಾಡುವಂತೆ ಐವರು ಪುರುಷರಿಗೆ ಹಣದ ಆಮಿಷ ಒಟ್ಟಿದ್ದಾಳೆ. ಪಕ್ಕಾ ಪ್ಲಾನ್ ಮಾಡಿ ಇದೇ ಮೇ 26ರಂದು ಹರ್ಷಿತಾಳನ್ನು ಮನೆಗೆ ಬರುವಂತೆ ಮಾಡಿ, ಅತ್ಯಾಚಾರ ಮಾಡಿಸಿದ್ದಾಳೆ. ಮನೆಗೆ ಬಂದಕೂಡಲೇ ಐವರು ಯುವಕರಿಗೆ ಹಣ ನೀಡಿ ಗಾಯತ್ರಿ ತನ್ನ ಮನೆಗೆ ಕರೆತಂದಿದ್ದಳು. ಸಂತ್ರಸ್ತೆ ಮನೆಗೆ ಹೋಗುತ್ತಿದ್ದಂತೆ ಐವರು ಯುವಕರು ಹರ್ಷಿತಾ ಮೇಲೆ ಹಲ್ಲೆ ನಡೆಸಿ ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದಾರೆ. ಅಲ್ಲದೆ ಸ್ವತಃ ಗಾಯತ್ರಿ ಈ ಸಾಮೂಹಿಕ ಅತ್ಯಾಚಾರ ಎಸಗುತ್ತಿರುವುದನ್ನು ವೀಡಿಯೋ ಕೂಡ ಮಾಡಿಕೊಂಡಿದ್ದಾಳೆ.
ಸಂತ್ರಸ್ತೆ ಕಿರುಚದಂತೆ ತಡೆಯಲು ಆಕೆಯ ಬಾಯಿಗೆ ಬಟ್ಟೆ ತುರುಕಿ ಆಕೆಯ ಖಾಸಗಿ ಭಾಗಗಳ ಮೇಲೆ ದಾಳಿ ಮಾಡಿದ್ದಾಳೆ. ಅಲ್ಲದೆ ಯಾರಿಗಾದರೂ ಹೇಳಿದರೆ ಈ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ. ತೀವ್ರವಾಗಿ ಗಾಯಗೊಂಡು ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಸಂತ್ರಸ್ತೆಯನ್ನು ಗಚ್ಚಿಬೌಲಿಯ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ನಂತರ ಸಂತ್ರಸ್ತೆ ಗಚ್ಚಿಬೌಲಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಗಾಯತ್ರಿ ಹಾಗೂ ಇತರೆ ನಾಲ್ವರು ಯುವಕರನ್ನು ಬಂಧಿಸಿ, ವಶಕ್ಕೆ ಪಡೆದಿದ್ದಾರೆ. ನಾಲ್ಕು ಅತ್ಯಾಚಾಕ ಆರೋಪಿಗಳ ಪೈಕಿ ಓರ್ವ ಆರೋಪಿ ಯುವತಿಗೆ ಸಹೋದರ ಸಂಬಂಧಿ ಕೂಡ ಇದ್ದ ಎನ್ನಲಾಗಿದೆ.