ರಾಂಚಿ: ಸೇನೆಯಲ್ಲಿ ಮುಸ್ಲಿಮರಿಗೆ (Muslims) (ಸಶಸ್ತ್ರ ಪಡೆ) ಶೇ.30 ರಷ್ಟು ಮೀಸಲಾತಿ ನೀಡಬೇಕು ಎಂದು ಜನತಾ ದಳ (ಯುನೈಟೆಡ್) (JDU) ಮುಖಂಡ ಗುಲಾಮ್ ರಸೂಲ್ ಬಲ್ಯಾವಿ (Gulam Rasool Balyawi) ಒತ್ತಾಯಿಸಿದ್ದಾರೆ.
ಬಿಜೆಪಿ (BJP) ವಿರುದ್ಧ ವಾಗ್ದಾಳಿ ನಡೆಸಿದ ಅವರು, ಪಕ್ಷವು ತನ್ನ ಅಪರಾಧಗಳನ್ನು ಮುಚ್ಚಿಡಲು ಸೇನೆಯ ಹಿಂದೆ ಅಡಗಿದೆ. ಸೈನಿಕರ ಶೌರ್ಯ ಮತ್ತು ಧೈರ್ಯದ ಲಾಭವನ್ನು ಬಿಜೆಪಿ ಪಡೆದುಕೊಂಡಿದೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಗೆಳತಿ ಹತ್ಯೆಗೈದು ಫ್ರಿಡ್ಜ್‌ನಲ್ಲಿಟ್ಟ – ಕೆಲವೇ ಗಂಟೆಯಲ್ಲೇ ಬೇರೊಬ್ಬಳನ್ನು ಮದುವೆಯಾದ
ಬಿಜೆಪಿ ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ಸೇನೆಯ ಹಿಂದೆ ಅಡಗಿಕೊಂಡಿದೆ. ಬಿಜೆಪಿಯವರು ಮತಕ್ಕಾಗಿ ಸೈನಿಕರ ರಕ್ತದೊಂದಿಗೆ ರಾಜಿ ಮಾಡಿಕೊಂಡಿದ್ದಾರೆ. ಅವರು ನಮ್ಮ ಪಡೆಗಳ ತ್ಯಾಗ, ಶೌರ್ಯ ಮತ್ತು ಹುತಾತ್ಮರ ಲಾಭವನ್ನು ಪಡೆದುಕೊಂಡಿದ್ದಾರೆ. ಸೇನೆಯ ಮೇಲೆ ನಮಗೆ ನಂಬಿಕೆ ಇದೆ. ಸಶಸ್ತ್ರ ಪಡೆಗಳಲ್ಲಿ ಮುಸ್ಲಿಮರಿಗೆ ಶೇಕಡಾ 30 ರಷ್ಟು ಮೀಸಲಾತಿ ನೀಡಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ 40 ಸಿಆರ್‌ಪಿಎಫ್ ಯೋಧರು ಹುತಾತ್ಮರಾದರು. ಪುಲ್ವಾಮಾ ಭಯೋತ್ಪಾದಕ ದಾಳಿಗೆ ಫೆ.14ಕ್ಕೆ ನಾಲ್ಕು ವರ್ಷ. ಈ ವೇಳೆ ಹುತಾತ್ಮ ಯೋಧರಿಗೆ ಗೌರವ ನಮನ ಸಲ್ಲಿಸುವ ವೇಳೆ ಜೆಡಿಯು ನಾಯಕ ಈ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಏರ್‌ಬಸ್-ಬೋಯಿಂಗ್ ಜೊತೆ ಮೆಗಾ ಡೀಲ್: ವಿಶ್ವದಾಖಲೆ ನಿರ್ಮಿಸಿದ ಏರ್ ಇಂಡಿಯಾ
2019ರ ಫೆಬ್ರವರಿ 14ರಂದು ಜಮ್ಮು-ಶ್ರೀನಗರ ಹೆದ್ದಾರಿಯ ಪುಲ್ವಾಮದ ಅವಂತಿಪುರದಲ್ಲಿ ಪಾಕಿಸ್ತಾನದ ಜೈಷ್–ಇ– ಮೊಹಮ್ಮದ್ ಉಗ್ರ ಸಂಘಟನೆ ದಾಳಿ ಮಾಡಿತ್ತು. ಪುಲ್ವಾಮದ ಅವಂತಿಪುರ ಹೆದ್ದಾರಿಯಲ್ಲಿ ಒಟ್ಟು 70 ವಾಹನಗಳಲ್ಲಿ 2500 ಸಿಆರ್‌ಪಿಎಫ್ ಸಿಬ್ಬಂದಿ ಪ್ರಯಾಣಿಸುತ್ತಿದ್ದರು. 70 ವಾಹನಗಳು ಸರತಿ ಸಾಲಿನಲ್ಲಿ ತೆರಳುತ್ತಿದ್ದವು. ಈ ಸಾಲಿನಲ್ಲಿ ನಿರ್ದಿಷ್ಟ ಬಸ್‌ವೊಂದರ ಬಳಿಗೆ ಸ್ಫೋಟಕ ತುಂಬಿದ್ದ ಕಾರು ತರುವಲ್ಲಿ ಯಶಸ್ವಿಯಾಗಿದ್ದ ಉಗ್ರರು ಎರಡು ಬಸ್‌ಗಳನ್ನು ಸ್ಫೋಟಿಸಿದ್ದರು. ಜೈಷ್–ಇ– ಮೊಹಮ್ಮದ್ ಉಗ್ರರು ನಡೆಸಿದ್ದ ಬಾಂಬ್ ಸ್ಫೋಟದಲ್ಲಿ ಸಿಆರ್‌ಪಿಎಫ್‌ನ 40 ಯೋಧರು ಹುತಾತ್ಮರಾದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k