ಪಾಟ್ನಾ: ಎನ್‌ಡಿಎ (NDA) ಮೈತ್ರಿಕೂಟದ ಜನತಾ ದಳ (Janata Dal) (ಯುನೈಟೆಡ್) ಪಕ್ಷವು ಮೈಥಿಲಿ ಭಾಷೆಗೆ (Maithali Lnaguage) ಶಾಸ್ತ್ರೀಯ ಭಾಷಾ ಸ್ಥಾನಮಾನ (Classical Language Status) ನೀಡಬೇಕು ಎಂದು ಸೋಮವಾರ ಒತ್ತಾಯಿಸಿದೆ.
ಇತ್ತೀಚಿಗಷ್ಟೇ ಕೇಂದ್ರ ಸರ್ಕಾರವು ಮರಾಠಿ, ಬಂಗಾಳಿ, ಪಾಲಿ, ಪ್ರಾಕೃತ ಮತ್ತು ಅಸ್ಸಾಮಿ ಭಾಷೆಗಳಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡುವಂತೆ ನಿರ್ಧರಿಸಿದ ಬೆನ್ನಲ್ಲೇ ಮರಾಠಿ, ಬಂಗಾಳಿ, ಪಾಲಿ, ಪ್ರಾಕೃತ ಮತ್ತು ಅಸ್ಸಾಮಿಗಳಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನಿರ್ಧರಿಸಿದ ಬೆನ್ನಲ್ಲೇ ಜೆಡಿಯು ಈ ಬೇಡಿಕೆಯಿಟ್ಟಿದೆ.ಇದನ್ನೂ ಓದಿ: ’ಸಿಂಗಂ ಅಗೇನ್’ ಟ್ರೈಲರ್ ಔಟ್- ಸೀತೆ ಪಾತ್ರದಲ್ಲಿ ಕರೀನಾ ಕಪೂರ್
ಜನತಾ ದಳ ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಸಂಜಯ್ ಕುಮಾರ್ ಝಾ (Sanjay Kumar Jha) ಮಾತನಾಡಿ, ಶೀಘ್ರದಲ್ಲೇ ಕೇಂದ್ರ ಸಚಿವ ಧಮೇಂದ್ರ ಪ್ರಧಾನ್ (Dharmendra Pradhan) ಅವರನ್ನು ಭೇಟಿಯಾಗಿ ಈ ಬೇಡಿಕೆಗೆ ಒತ್ತಾಯಿಸುವುದಾಗಿ ಹೇಳಿದರು.
ಇದಕ್ಕೆ ಸಂಬಂಧಿಸಿದಂತೆ ಸಂಜಯ್ ಕುಮಾರ್ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನಾನು ಶೀಘ್ರದಲ್ಲೇ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಭೇಟಿ ಮಾಡುತ್ತೇನೆ. ಭೇಟಿ ಮಾಡಿ ಮೈಥಿಲಿ ಭಾಷೆಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡಬೇಕಾಗಿ ಕೇಳಿಕೊಳ್ಳುತ್ತೇನೆ ಎಂದು ತಿಳಿಸಿದರು. ಮೈಥಿಲಿ ಭಾಷೆಯ ಸಂರಕ್ಷಣೆ ಮತ್ತು ಪ್ರಚಾರವು ಮೊದಲಿನಿಂದಲೂ ನನ್ನ ಮೊದಲ ಆದ್ಯತೆಯಾಗಿದೆ.
ಮೈಥಿಲಿ ಭಾಷೆ ಸುಮಾರು 1,300 ವರ್ಷಗಳಷ್ಟು ಹಳೆಯದು. ಅದರ ಸಾಹಿತ್ಯವು ಸ್ವಾತಂತ್ರ್ಯವಾಗಿ ಮತ್ತು ನಿರಂತರವಾಗಿ ಅಭಿವೃದ್ಧಿಯಾಗುತ್ತಾ ಬಂದಿದೆ. ಜೊತೆಗೆ ಮೈಥಿಲಿ ಭಾಷೆ ಸುಮಾರು 1300 ವರ್ಷಗಳಷ್ಟು ಹಳೆಯದು. ಆದ್ದರಿಂದ, ಇದನ್ನು ಶಾಸ್ತ್ರೀಯ ಭಾಷೆಯ ವರ್ಗಕ್ಕೆ ಸೇರಿಸಬೇಕು ಎಂದರು.
मैथिली भाषा का संरक्षण एवं संवर्धन शुरू से मेरी शीर्ष प्राथमिकता रही है। इसे शास्त्रीय भाषा (Classical Language) की कोटि में शामिल करने का आधार मैंने वर्ष 2018 में ही तैयार करवा दिया था। मेरे प्रयासों से केंद्र सरकार द्वारा गठित मैथिली के विद्वानों की विशेषज्ञ समिति ने 31 अगस्त… pic.twitter.com/HpajdImbkb
— Sanjay Kumar Jha (@SanjayJhaBihar) October 7, 2024
ಕೇಂದ್ರದ ಎನ್‌ಡಿಎ ಸರ್ಕಾರ ಹಾಗೂ ಬಿಹಾರ ರಾಜ್ಯ ಮೈಥಿಲಿ ಭಾಷೆಯ ಸಂರಕ್ಷಣೆ ಮತ್ತು ಪ್ರಚಾರಕ್ಕಾಗಿ ಎಲ್ಲಾ ಕೆಲಸಗಳನ್ನು ಮಾಡಿದೆ ಎಂಬುದರಲ್ಲಿ ಸಂದೇಹವಿಲ್ಲ. ಮೈಥಿಲಿ ಲಿಪಿಯ ಸಂರಕ್ಷಣೆ, ಪ್ರಚಾರ ಮತ್ತು ಅಭಿವೃದ್ಧಿಗಾಗಿ ಮೈಥಿಲ್ ವಿದ್ವಾಂಸರನ್ನು ಆಹ್ವಾನಿಸುವ ಮೂಲಕ ಜಾವಡೇಕರ್ ಅವರು ನನ್ನ ಜ್ಞಾಪಕ ಪತ್ರವನ್ನು ಸ್ವೀಕರಿಸಿದರು. ಪರಿಣಿತ ಸಮಿತಿಯ ರಚನೆಗೆ ಸೂಚನೆಗಳನ್ನು ನೀಡಿದರು ಮತ್ತು ಅದಕ್ಕೆ ಹೆಸರುಗಳನ್ನು ಸೂಚಿಸುವ ಜವಾಬ್ದಾರಿಯನ್ನು ನನಗೆ ವಹಿಸಿದ್ದಾರೆ ಎಂದು ಬರೆದಿದ್ದಾರೆ.ಇದನ್ನೂ ಓದಿ: ’ಸಿಂಗಂ ಅಗೇನ್’ ಟ್ರೈಲರ್ ಔಟ್- ಸೀತೆ ಪಾತ್ರದಲ್ಲಿ ಕರೀನಾ ಕಪೂರ್
ಕೂಲಂಕಷವಾಗಿ ಚರ್ಚಿಸಿದ ನಂತರ ಸಮಿತಿಯು ತನ್ನ ವರದಿಯನ್ನು ಅಂತಿಮಗೊಳಿಸಿ ಸಚಿವರಿಗೆ ಸಲ್ಲಿಸಿದೆ ಎಂದು ತಿಳಿಸಿದ್ದಾರೆ.