ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಗ್ಯಾರಂಟಿ ಯೋಜನೆ ರದ್ದು ಆಗುತ್ತೆ ಎಂಬ ಶಾಸಕ ಬಾಲಕೃಷ್ಣ (Balakrishna) ಹೇಳಿಕೆ ವಿರುದ್ಧ ಚುನಾವಣೆ ಆಯೋಗಕ್ಕೆ ಜೆಡಿಎಸ್ ದೂರು ನೀಡಿದೆ.
ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ನೇತೃತ್ವದಲ್ಲಿ ಶಾಸಕರಾದ ಸ್ವರೂಪ್, ಸುರೇಶ್ ಬಾಬು, ಕರೆಮ್ಮ ನಾಯಕ್ ಒಳಗೊಂಡ ನಿಯೋಗ ಮುಖ್ಯ ಚುನಾವಣೆ ಆಯುಕ್ತರಿಗೆ ದೂರು ನೀಡಿದ್ದಾರೆ. ದೂರಿನ ಬಳಿಕ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಚುನಾವಣೆ ಮುಂಚೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ 5 ಗ್ಯಾರಂಟಿ ಘೋಷಣೆ ಮಾಡಿತ್ತು. ಗ್ಯಾರಂಟಿ ಹಿನ್ನಲೆ ಜನ ಕಾಂಗ್ರೆಸ್ ಅವರನ್ನ ಆಯ್ಕೆ ಮಾಡಿದ್ರು. ಇತ್ತೀಚೆಗೆ ಶಾಸಕ ಬಾಲಕೃಷ್ಣ ಹೇಳಿಕೆ ಬಹಿರಂಗವಾಗಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲದೇ ಹೋದರೆ ಗ್ಯಾರಂಟಿ ರದ್ದು ಮಾಡೋ ಬಗ್ಗೆ ಮಾತಾಡಿದ್ದಾರೆ. ಲೋಕಸಭೆ ಚುನಾವಣೆ ದೃಷ್ಟಿಯಿಂದ ಹಲವಾರು ಸಮಯದಲ್ಲಿ ಗ್ಯಾರಂಟಿ ಮುಂದಿಟ್ಟುಕೊAಡು ಬ್ಲ್ಯಾಕ್‌ಮೇಲ್ ಸಂಸ್ಕೃತಿ ಪ್ರಾರಂಭ ಮಾಡಿದ್ದಾರೆ. ಇದು ಖಂಡನೀಯ. ಹೀಗಾಗಿ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದೇವೆ. ಕೂಡಲೇ ಶಾಸಕರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದೇವೆ ಎಂದರು. ಇದನ್ನೂ ಓದಿ: ಲೋಕಸಭಾ ಚುನಾವಣೆ ಬಳಿಕ ಗ್ಯಾರಂಟಿ ರದ್ದತಿಗೆ ಕಾಂಗ್ರೆಸ್‍ನಲ್ಲಿ ಚರ್ಚೆ, ಬಾಲಕೃಷ್ಣರಿಂದ ಬಯಲು: ಹೆಚ್‍ಡಿಕೆ
Advertisement
Advertisement
ದೇಶ ವಿಭಜನೆ ಕುರಿತ ಸಂಸದ ಡಿ.ಕೆ.ಸುರೇಶ್ ಹೇಳಿಕೆ ಬಗ್ಗೆ ಮಾತನಾಡಿ, ಡಿ.ಕೆ.ಸುರೇಶ್ ಅವರದ್ದು ಅಸೂಕ್ಷ್ಮ ಹೇಳಿಕೆ. ಜವಾಬ್ದಾರಿಯುತ ಸ್ಥಾನದಲ್ಲಿ ಇರೋರು ಹೀಗೆ ಮಾತಾಡೋದು ಸರಿಯಲ್ಲ. ಸಂಸದರ ಇಂತಹ ಬಾಲಿಶ ಹೇಳಿಕೆ ಖಂಡನೀಯ. ಭಾರತವನ್ನು ಎರಡು ಭಾಗ ಮಾಡೋ ಹೇಳಿಕೆ ಕೊಟ್ಟರೆ ಇದಕ್ಕೆ ಏನ್ ಹೇಳಬೇಕು ಎಂದು ಕಿಡಿಕಾರಿದರು.
Advertisement
ಯಾರೇ ಜನಪ್ರತಿನಿಧಿಗಳಾದರೂ ಮುಂದೆ ಹೀಗೆ ಮಾತಾಡಬಾರದು. ಕೇಂದ್ರದಿಂದ ಅನುದಾನ ಬರುವಲ್ಲಿ ಅನ್ಯಾಯವಾಗಿದ್ರೆ ಕಾಂಗ್ರೆಸ್ ನಾಯಕರು ಮೋದಿ ಅವರ ಸಮಯ ಪಡೆದು ಅವರ ಬಳಿ ವಿಷಯ ಪ್ರಸ್ತಾಪ ಮಾಡಿ ಮನವರಿಕೆ ಮಾಡಿಕೊಡಲಿ. ಕೇಂದ್ರ ಸರ್ಕಾರದಿಂದ ಅನುದಾನ ಹಂಚಿಕೆ ಆಗೋದು ಹಣಕಾಸು ಆಯೋಗದ ನಿರ್ಣಯದ ಮೇಲೆ. ಹಣಕಾಸು ಆಯೋಗದ ರಿಪೋರ್ಟ್ ಮೇಲೆ ಕೇಂದ್ರ ಸರ್ಕಾರ ಅನುದಾನ ನಿರ್ಧಾರ ಮಾಡುತ್ತೆ. ಯುಪಿಎ ಅವಧಿಯಲ್ಲಿ ಮನಮೋಹನ್ ಸಿಂಗ್ ಕೊಟ್ಟಿರುವ ಅನುದಾನ ಎಷ್ಟು ಅಂತ ಕಾಂಗ್ರೆಸ್ ಅವರು ತೆಗೆಯಲಿ. ಮನಮೋಹನ್ ಸಿಂಗ್ ಸರ್ಕಾರಕ್ಕಿಂತ ಮೋದಿ ಸರ್ಕಾರದಲ್ಲಿ ರಾಜ್ಯಕ್ಕೆ ಜಾಸ್ತಿ ಅನುದಾನ ಕೊಟ್ಟಿದೆ. ಮೋದಿ ಸಮಯ ಪಡೆದು ಅವರ ಬಳಿ ಹೋಗಿ ಮಾತಾಡಿ. ಅದು ಬಿಟ್ಟು ಹೀಗೆ ದೇಶ ವಿಭಜನೆ ಮಾತಾಡೋದು ಸರಿಯಲ್ಲ ಎಂದು ಟೀಕಿಸಿದರು. ಇದನ್ನೂ ಓದಿ: ಕೆಲಸ ಮಾಡ್ಬೇಕು ಅಂದ್ರೆ ವೋಟ್ ಹಾಕ್ಬೇಕು ಅನ್ನೋದರಲ್ಲಿ ತಪ್ಪೇನಿದೆ?: ಬಾಲಕೃಷ್ಣ ಸಮರ್ಥನೆ
Advertisement
ಮಂಡ್ಯಕ್ಕೆ ಕುಮಾರಸ್ವಾಮಿ ಕೊಡುಗೆ ಏನು ಎಂಬ ಸಚಿವ ಚಲುವರಾಯಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಅದಕ್ಕೆ ಮಂಡ್ಯದ ಜನರೇ ಉತ್ತರ ಕೊಡ್ತಾರೆ. ಇವರ ಹೇಳಿಕೆಗಳಿಗೆ ಜನರು ಉತ್ತರ ಕೊಡೋ ಸಮಯ ದೂರ ಇಲ್ಲ. ಮಂಡ್ಯದಲ್ಲಿ ಲೋಕಸಭೆ ಚುನಾವಣೆ ಎದುರಿಸುತ್ತೇವೆ. ಈ ಬಾರಿ ಮಂಡ್ಯದಲ್ಲಿ ಜನರು ಜೆಡಿಎಸ್ ಕೈ ಹಿಡಿಯುತ್ತಾರೆ. ಚಲುವಣ್ಣನ ಬಗ್ಗೆ ನಾನು ಮಾತಾಡೊಲ್ಲ ಎಂದು ಕೌಂಟರ್ ಕೊಟ್ಟರು.