ತುಮಕೂರು: ಜೆಡಿಎಸ್ ಕಾರ್ಯಕರ್ತರು ನಮೋ ಭಾರತ್ ಕಾರ್ಯಕರ್ತತೆಯನ್ನು ಟ್ವಿಟ್ಟರ್ ಖಾತೆಯಲ್ಲಿ ಅಶ್ಲೀಲ ಪದಗಳಿಂದ ನಿಂದಿಸಿ ಟ್ರೋಲ್ ಮಾಡಿದ್ದಾರೆ.
ತುಮಕೂರಿನ ನಮೋಭಾರತ್ ಕಾರ್ಯಕರ್ತೆ ಶಕುಂತಲಾ ರಾಜ್ ಎಂಬವರಿಗೆ ಅಶ್ಲೀಲ ಪದಗಳಿಂದ ನಿಂದನೆ ಮಾಡಲಾಗಿದೆ. ಶಕುಂತಲಾ ರಾಜ್ ತುಮಕೂರು ಬಿಜೆಪಿ ಅಭ್ಯರ್ಥಿ ವೈ.ಬಸವರಾಜು ಅವರ ಗೆಲುವಿನ ವಿಜಯೋತ್ಸವದಲ್ಲಿ ಡಾನ್ಸ್ ಮಾಡಿದ ದೃಶ್ಯಾವಳಿಗಳನ್ನ ಟ್ವಿಟ್ಟರ್ ರಲ್ಲಿ ಹಾಕಿಕೊಂಡಿದ್ದರು. ಇದಕ್ಕೆ ಕಾಮೆಂಟ್ ಮಾಡುವ ನೆಪದಲ್ಲಿ ಮಂಡ್ಯ ಮೂಲದ ಪರಿಕ್ಷೀತ್ ಗೌಡ ಹಾಗೂ ಪ್ರಿಯದರ್ಶಿನಿ ಗೌಡ ಎಂಬವವರು ಅಶ್ಲೀಲ ಪದಗಳಿಂದ ಅವಹೇಳನ ಮಾಡಿದ್ದಾರೆ. ಅಲ್ಲದೆ ಅದನ್ನ ಟ್ರೋಲ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ಟ್ರೋಲ್ ಮಾಡಿದ್ದರಿಂದ ನೊಂದಿರುವ ಶಕುಂತಲಾ ರಾಜ್ ಎಸ್‍ಪಿ ಅವರಿಗೆ ದೂರು ಸಲ್ಲಿಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿರುವ ಶಕುಂತಲಾ ರಾಜ್, ವಿಜಯೋತ್ಸವದ ಸಂದರ್ಭದಲ್ಲಿ ಎಲ್ಲ ಕಾರ್ಯಕರ್ತೆಯರೊಂದಿಗೆ ಹೆಜ್ಜೆ ಹಾಕಿರುವ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದೆ. ಅಂದು ರಾತ್ರಿ ಸುಮಾರು ಎರಡು ಗಂಟೆಯವರೆಗೂ ಮಂಡ್ಯದ ಮೂಲಕ ಯುವಕ ಸೇರಿದಂತೆ ಹಲವರು ಅಸಂವಿಧಾನಿಕ ಪದ ಬಳಸಿ ನನ್ನನ್ನು ನಿಂದಿಸಿದ್ದಾರೆ. ಇವುಗಳಲ್ಲಿ ಕೆಲ ಖಾತೆಗಳು ಫೇಕ್ ಆಗಿದೆ. ಈ ಸಂಬಂಧ ದೂರು ಸಲ್ಲಿಸಿದ್ದೇನೆ ಎಂದು ತಿಳಿಸಿದ್ದಾರೆ.
ನಿಜಕ್ಕೂ ನನ್ನ ಜೀವದಲ್ಲಿ ಇಷ್ಟೊಂದು ಖುಷಿಯಾಗಿದ್ದದ್ದು ವಿಜಯೋತ್ಸವದ ದಿನದಂತೆ ಅನ್ನಿಸುತ್ತೆ..
ಮರೆಯಲಾಗದ ದಿನ… pic.twitter.com/2DUiOcNE6f
— ಶಕುಂತಲ / Shakunthala (@ShakunthalaHS) May 26, 2019