ಮೈಸೂರು: ವರುಣಾ ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ವಿಜಯೇಂದ್ರಗೆ ಟಿಕೆಟ್ ಕೊಡದೇ ಇರಬಾರದು. ಇದೊಂದು ಧರ್ಮಯುದ್ದ ಇದ್ದಂತೆ. ಪಕ್ಷಾತೀತವಾಗಿ ವಿಜಯೇಂದ್ರಗೆ ಬೆಂಬಲಿಸಿ ಎಂದು ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜಿಟಿ ದೇವೇಗೌಡ ಹೇಳಿದ್ದಾರೆ.
ಶ್ರೀನಿವಾಸ್ ಪ್ರಸಾದ್ ಹೈಕಮಾಂಡ್ ಮೇಲೆ ಒತ್ತಡ ಹಾಕಬೇಕು. ಬೆಂಬಲಿಗರು ಹಾಗೂ ಕಾರ್ಯಕರ್ತರು ಈಗಾಗಲೇ ಮನಸ್ಸು ಮಾಡಿದ್ದಾರೆ. ಗಲಾಟೆ ಮಾಡಿಯಾದರೂ ವಿಜಯೇಂದ್ರಗೆ ಟಿಕೆಟ್ ಕೊಡಿಸಬೇಕು ಎಂದು ಬಿ ಎಸ್ ಯಡಿಯೂರಪ್ಪ ಅವರನ್ನು ಬೆಂಬಲಿಸಿದ್ದಾರೆ ಎಂದರು.
Advertisement
ವಿಜಯೇಂದ್ರಗೆ ಟಿಕೆಟ್ ಕೈ ತಪ್ಪಿದ ಕಾರಣ ವರುಣಾದಲ್ಲಿ ಹರೀಶ್ ಗೌಡ ನಿಲ್ಲುತ್ತಾರೆ ಎನ್ನುವ ಮಾತುಗಳಿಗೆ ಪ್ರತಿಕ್ರಿಯಿಸಿದ ಅವರು, ಈ ಬಾರಿ ನನ್ನ ಪುತ್ರ ಹರೀಶ್ ಗೌಡ ನಿಲ್ಲುವುದು ಬೇಡ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾನು ಪುತ್ರ ಹರೀಶ್ ಗೌಡ ಕೆಲಸ ಮಾಡುತ್ತೇವೆ. ವರುಣ ಕ್ಷೇತ್ರದಿಂದ ಅಭಿಷೇಕ್ ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದರು.
Advertisement
ಜಿಟಿ ಹರೀಶ್ ಗೌಡ ಪ್ರತಿಕ್ರಿಯಿಸಿ, ವರುಣಾ ಕ್ಷೇತ್ರದಿಂದ ನಿಲ್ಲುವಂತೆ ಕಾರ್ಯಕರ್ತರು ಒತ್ತಾಯ ಮಾಡುತ್ತಿದ್ದಾರೆ. ವರುಣಾದಲ್ಲಿ ನಿಲ್ಲುವ ಬಗ್ಗೆ ನನಗೆ ಯಾವುದೇ ಚಿಂತನೆ ಇಲ್ಲ. ನನಗೆ ಈವರೆಗೂ ಯಾರು ಸಂಪರ್ಕ ಮಾಡಿಲ್ಲ. ಕುಮಾರಣ್ಣ ವರುಣಾದಲ್ಲಿ ನಿಲ್ಲೋಕೆ ಸೂಚನೆ ನೀಡಬೇಕು. ಆದರೆ ಈವರೆಗೂ ಯಾವುದೇ ಸೂಚನೆ ಬಂದಿಲ್ಲ ಎಂದು ಅವರು ಹೇಳಿದರು.
Advertisement
ನಮ್ಮ ತಂದೆಯ ನಿಲುವಿಗೆ ನಾನು ಬದ್ಧನಾಗಿದ್ದು, ನಾನು ವರುಣಾದಲ್ಲಿ ಯಾವುದೇ ಕೆಲಸ ಕಾರ್ಯ ಮಾಡಿಲ್ಲ. ಅಲ್ಲಿನ ಜನರು ನನ್ನ ಮೇಲೆ ಪ್ರೀತಿ ಇಟ್ಟಿರುವುದಕ್ಕೆ ನಾನು ಚಿರಋಣಿ. ಆದ್ರೆ ಅಲ್ಲಿನ ಜನರನ್ನ ನಾನು ಕ್ಷಮೆಯಾಚಿಸುತ್ತೇನೆ. ಮುಂದಿನ ದಿನಗಳಲ್ಲಿ ನಿಮ್ಮ ಜೊತೆ ಸೇರಿ ಕೆಲಸ ಮಾಡುತ್ತೇನೆ. ನನ್ನ ತಂದೆಯೂ ನಿಮ್ಮ ಜೊತೆ ಇರುತ್ತಾರೆ ಎಂದು ಜಿ.ಟಿ.ಹರೀಶ್ ಗೌಡ ಹೇಳಿದರು.