ಮಂಡ್ಯ: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ವಿರುದ್ಧ ನಾಲಿಗೆ ಹರಿಬಿಟ್ಟಿದ್ದ ದರ್ಶನ್ ಮಹಿಳಾ ಅಭಿಮಾನಿ (Darshan Fans) ವಿರುದ್ಧ ಮಂಡ್ಯದ (Mandya) ಕೆ.ಆರ್.ಪೇಟೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಕೆ.ಆರ್.ಪೇಟೆ ತಾಲೂಕು ಜೆಡಿಎಸ್ (JDS) ಘಟಕದ ಅಧ್ಯಕ್ಷ ಜಾನಕೀರಾಮ್ ಅವರು, ಮಂಗಳಾ ಎಂಬ ಮಹಿಳೆ ವಿರುದ್ಧ ದೂರು ನೀಡಿದ್ದಾರೆ. ಇದನ್ನೂ ಓದಿ: NEET ಪರೀಕ್ಷೆ ಅಕ್ರಮ ಕೇಸ್: ಇದು ಮೋದಿ ಸರ್ಕಾರದ ದೊಡ್ಡ ಹಗರಣ: ಶರಣಪ್ರಕಾಶ ಪಾಟೀಲ್
ದರ್ಶನ್ ಅಭಿಮಾನಿ ಆಗಿರುವ ಮಂಗಳಾ ಇತ್ತೀಚೆಗೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರ ವಿರುದ್ಧ ನಾಲಿಗೆ ಹರಿಬಿಟ್ಟಿದ್ದರು. ಇದನ್ನೂ ಓದಿ: ಡಿ ಗ್ಯಾಂಗ್ ಕೊಲೆ ಕೇಸ್: ನಾನು, ಸಿಎಂ ಯಾರಿಗೂ ಸೊಪ್ಪು ಹಾಕಲ್ಲ: ಗೃಹ ಸಚಿವ ಪರಮೇಶ್ವರ್
ದರ್ಶನ್ ವಿರುದ್ಧ ಕೊಲೆ ಅಪರಾಧ ಬರುವಂತೆ ಕುಮಾರಸ್ವಾಮಿ ಮಾಡಿದ್ದಾರೆ, ದುಡ್ಡು ಕೊಟ್ಟು ದರ್ಶನ್ ವಿರುದ್ಧ ಧಿಕ್ಕಾರ ಕೂಗಿಸಿದ್ದಾರೆ. ಸುಮಲತಾ (Sumalatha) ನಿಮಗೆ ಮಂಡ್ಯದಲ್ಲಿ ಸ್ಪರ್ಧಿಸೋಕೆ ಚಾನ್ಸ್ ಕೊಟ್ಟಿದ್ದಕ್ಕೆ ಡಿ ಬಾಸ್ ವಿರುದ್ಧ ಸ್ಕೆಚ್ ಹಾಕಿದ್ದಾರೆ. ಸುಮಲತಾರಿಂದ ಭಿಕ್ಷೆ ಹಾಕಿಸಿಕೊಂಡವರು ಅವರು ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದರು. ಈ ಕುರಿತ ವೀಡಿಯೋ ಸೋಷಿಯಲ್ ಮೀಡಿಯಾದಲ್ಲೂ ಹರಿದಾಡಿತ್ತು.
ದರ್ಶನ್ ಅಭಿಮಾನಿ ಮಾತಿನಿಂದ ಸಿಟ್ಟಿಗೆದ್ದ ಕಾರ್ಯಕರ್ತರು ಕೆ.ಆರ್.ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಎಫ್‌ಐಆರ್ ದಾಖಲಿಸಿ ಮಹಿಳಾ ಅಭಿಮಾನಿಯನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಡಿಕೆಶಿ ಸ್ಪರ್ಧೆ ಅಂತೇನಿಲ್ಲ; ಬೇರೆ ಆಯ್ಕೆ ಇವೆ: ಪರಮೇಶ್ವರ್