– ಭೈರತಿ ಸುರೇಶ್‍ರೊಂದಿಗೆ ಜಮೀರ್ ಡೀಲ್ ಮಾಡಿಕೊಂಡಿದ್ರು
– ಜಮೀರ್ ಸಿಎಂ ಅಭ್ಯರ್ಥಿ ಅಂತ ಘೋಷಣೆ ಮಾಡಿ
ಬೆಂಗಳೂರು: 2023 ರಲ್ಲಿ ಜೆಡಿಎಸ್ ಪಕ್ಷ ಏಕಾಂಗಿಯಾಗಿ ಅಧಿಕಾರಕ್ಕೆ ಬರುತ್ತೆ. ಇದು ದೈವದ ಆಟ ಯಾರು ಇದನ್ನು ತಡೆಯೋಕೆ ಆಗುವುದಿಲ್ಲ. ಕಾಂಗ್ರೆಸ್ ಮುಳುಗುತ್ತಿರುವ ಹಡಗು. ನಮ್ಮ ಟಾರ್ಗೆಟ್ 123. ನಾವು ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದು ಜೆಡಿಎಸ್ ವಕ್ತಾರ ಟಿ.ಎ ಶರವಣ ಭವಿಷ್ಯ ನುಡಿದಿದ್ದಾರೆ.
Advertisement
ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಸಿದ್ದರಾಮಯ್ಯಗೆ 5 ಪ್ರಶ್ನೆ ಕೇಳಿದ್ರು. ಆದ್ರೆ ಯಾವುದಕ್ಕೂ ಉತ್ತರ ಕೊಟ್ಟಿಲ್ಲ. ಕಾಂಗ್ರೆಸ್‍ಗೆ ಅಲ್ಪಸಂಖ್ಯಾತರ ಬಗ್ಗೆ ಮಾತಾಡೋ ನೈತಿಕತೆ ಇಲ್ಲ. ಸಿದ್ದರಾಮಯ್ಯ ಉತ್ತರ ಕೊಡೋ ಬದಲಾಗಿ ಕುಮಾರಸ್ವಾಮಿ ಮೇಲೆ ವೈಯಕ್ತಿಕವಾಗಿ ಅಟ್ಯಾಕ್ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ನಿಮ್ಮ ಹೊಟ್ಟೆಕಿಚ್ಚಿನಿಂದ ಹಾಳಾಗ್ತಿರೋದು ನೀವೇ ಸಿದ್ದರಾಮಯ್ಯ ಅಲ್ಲ – ಹೆಚ್‍ಡಿಕೆ ವಿರುದ್ಧ ಜಮೀರ್ ಗುಡುಗು
Advertisement
Advertisement
ಡೀಲ್ ಮಾಡಿದ್ದು ಯಾರು?
ಭೈರತಿ ಸುರೇಶ್ ಅವರನ್ನು ಎಂಎಲ್‍ಸಿ ಮಾಡೋಣ ಎಂದು ಜಮೀರ್ ಅಹ್ಮದ್ ಹೇಳಿದ್ರು. ಆದ್ರೆ ಅವತ್ತು ಅವ್ರ ಕುಲಬಾಂಧವರನ್ನು ಗೆಲ್ಲಿಸಬೇಕು ಅಂತ ಜಮೀರ್‍ಗೆ ಅನ್ನಿಸಿಲ್ಲವಾ? ಭೈರತಿ ಸುರೇಶ್‍ರೊಂದಿಗೆ ಜಮೀರ್ ಡೀಲ್ ಮಾಡಿಕೊಂಡಿದ್ರು. ಇವತ್ತು ಸಮುದಾಯ ಬಗ್ಗೆ ಪ್ರೀತಿ ಉಕ್ಕಿ ಬರುತ್ತಿದೆ. ಇದಕ್ಕೆ ಜಮೀರ್ ಉತ್ತರ ಕೊಡಬೇಕು. ವಿಧಾನಸೌಧದ ಒಳಗೆ ಜಮೀರ್ ಅವರನ್ನು ಬಿಟ್ಟಿರಲಿಲ್ಲ. ಕುಮಾರಸ್ವಾಮಿ ಅವತ್ತು ನಿಮ್ಮ ಹೆಗಲ ಮೇಲೆ ಕೈ ಹಾಕಿ ಎಂಎಲ್‍ಎ ಮಾಡ್ತೀನಿ ಅಂತ ಕರೆದುಕೊಂಡು ಬಂದಿದ್ದರು. ನಿಮ್ಮ ಮೂಲ ಬೇರು ಯಾವುದು? ಅದನ್ನು ಮರೆತು ಹೋದ್ರಾ? ಅಂದು ಕುಮಾರಸ್ವಾಮಿ ಅವರನ್ನು ಇಂದ್ರ, ಚಂದ್ರ ಸರ್ವಸ್ವ ಅಂತ ಹೇಳಿದ್ರು. ಇವತ್ತು ಅವ್ರ ವಿರುದ್ಧ ಮಾತಾಡ್ತೀರಾ? ಜಮೀರ್‍ಗೆ ತಾಕತ್ ಇದ್ದರೆ ಕಾಂಗ್ರೆಸ್‍ನಲ್ಲಿ ಅಲ್ಪಸಂಖ್ಯಾತರಿಗೆ ಸಿಎಂ ಸ್ಥಾನ ಎಂದು ಘೋಷಣೆ ಮಾಡಿಸಲಿ. ಅಥವಾ ಡಿಸಿಎಂ ಸ್ಥಾನ ಘೋಷಣೆ ಮಾಡಲಿ ಅದು ಇಲ್ಲವೆಂದಿದ್ದರೆ ಪರಿಷತ್ ವಿಪಕ್ಷ ಸ್ಥಾನ ಇಬ್ರಾಹಿಗೆ ಕೊಡಲಿ ನೋಡೋಣ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಕುಮಾರಸ್ವಾಮಿ ಒಬ್ಬ ಡೀಲರ್: ಜಮೀರ್ ವಾಗ್ದಾಳಿ
Advertisement
ಯಾವುದರಲ್ಲಿ ಎಷ್ಟು ಡೀಲ್ ಮಾಡಿದ್ದೀರಿ ಎಂಬುದು ನಮಗೆ ಗೊತ್ತು. ದೇವೇಗೌಡರು ದೇವರು ಎಂದು ಹೇಳಿದ್ರಿ, ಇವತ್ತು ಅವರ ವಿರುದ್ಧವೇ ಮಾತನಾಡಿದ್ದೀರಿ. ಇನ್ನು ಮುಂದೆ ಜಮೀರ್‍ಗೆ ಕುಮಾರಸ್ವಾಮಿ ಉತ್ತರ ಕೊಡಬೇಡಿ. ನಾವು ಅವ್ರಿಗೆ ಉತ್ತರ ಕೊಡ್ತೀವಿ. ಎರಡು ಬಾರಿ ಸೋತು ಮನೆಯಲ್ಲಿ ಜಮೀರ್ ಇದ್ದರು. ಶಾಸಕನಾಗಿ ಮಾಡೋಕೆ ಯಾರು ಕಾರಣ? ಸಿದ್ದರಾಮಯ್ಯ ಇವತ್ತು ನಾಯಕ ಅಂತೀರಾ? ಇಲ್ಲಿ ಇದ್ದಾಗ ಕುಮಾರಣ್ಣ, ಈಗ ಸಿದ್ದರಾಮಣ್ಣ, ಮುಂದೆ ಯಾರನ್ನು ಅಣ್ಣಾ ಅಂತಾರೋ ಗೊತ್ತಿಲ್ಲ. ಸಿದ್ದರಾಮಯ್ಯ ಅಲ್ಪಸಂಖ್ಯಾತ ನಾಯಕರನ್ನು ಮುಗಿಸಿ ಆಯ್ತು. ನಿಮ್ಮನ್ನು ಸಿದ್ದರಾಮಯ್ಯ ಮುಗಿಸುತ್ತಾರೆ. ದೇವೇಗೌಡ ಫ್ಯಾಕ್ಟರಿಯಲ್ಲಿ ಎಷ್ಟೋ ಜನ ಬಂದು ಹೋಗಿದ್ದಾರೆ. ತೊಡೆ ತಟ್ಟಿದವರು ಪರಪ್ಪನ ಅಗ್ರಹಾರಕ್ಕೆ ಹೋಗಿ ಬಂದಿದ್ದಾರೆ. ಬಾಯಿಗೆ ಬಂದಂತೆ ಮಾತನಾಡಬೇಡಿ. ಯೋಚನೆ ಮಾಡಿ ಹೇಳಿಕೆ ಕೊಡಿ ಎಂದು ಜಮೀರ್ ವಿರುದ್ಧ ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಕುಮಾರಸ್ವಾಮಿ ಮಾತು ವೇದವಾಕ್ಯ ಅಲ್ಲ: ಸಿದ್ದರಾಮಯ್ಯ
ಇಕ್ಬಾಲ್ ಅನ್ಸಾರ್ ಅವ್ರನ್ನು ಮಂತ್ರಿ ಮಾಡಿದ್ದು ಯಾರು? ಕಾಂಗ್ರೆಸ್ ನಿಂದ ಸೋತು ಹೋಗಿದ್ರು. ಕುಮಾರಸ್ವಾಮಿ ಟಿಕೆಟ್ ಕೊಟ್ಟು ಗೆಲ್ಲಿಸಿದ್ರು. ಕುಮಾರಸ್ವಾಮಿ ಹೆಸರಿನಲ್ಲಿ ಅನ್ಸಾರಿ ಪ್ರಮಾಣ ವಚನ ಸ್ವೀಕಾರ ಮಾಡಿದ್ರು. ಇವತ್ತು ಅದನ್ನು ಮರೆತು ಮಾತನಾಡುತ್ತಿದ್ದೀರಿ. ಸಿದ್ದರಾಮಯ್ಯರಿಗೆ ಅಲ್ಪಸಂಖ್ಯಾತರ ಮೇಲೆ ಪ್ರೀತಿ ಇದ್ದರೆ ಜಮೀರ್ ನ್ನು ಸಿಎಂ ಅಭ್ಯರ್ಥಿ ಅಂತ ಘೋಷಣೆ ಮಾಡಿ. ಸಿದ್ದರಾಮಯ್ಯ 5 ವರ್ಷ ಅಲ್ಪಸಂಖ್ಯಾತರಿಗೆ ಏನ್ ಕೆಲಸ ಮಾಡಿದ್ರು? ಅಕ್ಕಿ ಕೊಟ್ಟೆ, ಆ ಭಾಗ್ಯ, ಈ ಭಾಗ್ಯ ಅಂತೀರಾ ಅಷ್ಟೇ. ಸಿದ್ದರಾಮಯ್ಯ ಅಲ್ಪಸಂಖ್ಯಾತ ನಾಯಕರನ್ನು ಮುಗಿಸಿದ್ದಾರೆ. ಜಮೀರ್ ಅವರನ್ನು ಮುಗಿಸುತ್ತಾರೆ. ಹೀಗಾಗಿ ಜಮೀರ್ ಎಚ್ಚರವಾಗಿ ಇರಿ. ನಮ್ಮದು ಸಣ್ಣ ಪಕ್ಷ ನಾವು ಸಿಎಂ ಮಾಡೋದು ಬಿಡಿ. ನಿಮ್ಮದು ರಾಷ್ಟ್ರೀಯ ಪಕ್ಷ ನೀವು ಅಲ್ಪಸಂಖ್ಯಾತರಿಗೆ ಸಿಎಂ ಸ್ಥಾನ ಕೊಡಿ ಎಂದು ಸವಾಲೆಸೆದರು.