ಬೆಂಗಳೂರು: ಅತೃಪ್ತರನ್ನು ತೃಪ್ತಿ ಪಡಿಸಲು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಪಂಚಸೂತ್ರಗಳನ್ನು ರೂಪಿಸಿದ್ದಾರೆ.
ದೇವೇಗೌಡರ ಸಮ್ಮಿಶ್ರ ಸರ್ಕಾರ ಸುಸೂತ್ರವಾಗಿ ನಡೆಯಲು ಹಾಗೂ ಪಕ್ಷ ಸಂಘಟನೆಗೆ ತೃಪ್ತ ಅಸ್ತ್ರ ಅನುಸರಿಸಲು ಮುಂದಾಗಿದ್ದು, ಸಚಿವ ಸ್ಥಾನದಿಂದ ಅಸಮಾಧಾನದಿಂದರುವ ಶಾಸಕರಿಗೆ ಪ್ರಮುಖ, ನಿಗಮ-ಮಂಡಳಿ ಮತ್ತು ಸಿಎಂ ಸಂಸದೀಯ ಕಾರ್ಯದರ್ಶಿ ಸ್ಥಾನ ನೀಡಿ ಸಮಾಧಾನ ಮಾಡಲು ದೇವೇಗೌಡರು ಚಿಂತನೆ ಮಾಡಿದ್ದಾರೆ. ಇದರ ಜೊತೆಗೆ ಪಕ್ಷ ಕೈ ಬಿಟ್ಟಿರುವ ಜಾತಿಗಳ ಕ್ರೂಢೀಕರಣಕ್ಕೂ ದೇವೇಗೌಡರು ಯೋಚಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಮಾಜಿ ಸಿಎಂ ತಂತ್ರಕ್ಕೆ ಎಚ್ಡಿಡಿ ಸಲಹೆಯಂತೆ ಎಚ್ಡಿಕೆಯಿಂದ ಹೊಸ ಬಾಣ!
Advertisement
ದೇವೇಗೌಡರು ಜಾತಿಗಳ ಪ್ರಮುಖ ನಾಯಕರ ಮೂಲಕ ಜಾತಿಗಳ ಮತ ಕ್ರೂಢೀಕರಣಕ್ಕೆ ನಿರ್ಧಾರ ಮಾಡಿದ್ದು, ಮುಸ್ಲಿಂ, ಲಿಂಗಾಯತ, ಕುರುಬ ಮತ್ತು ದಲಿತ ಮತಗಳನ್ನು ಕ್ರೂಢೀಕರಣ ಮಾಡಲಿದ್ದಾರೆ. ಮಂಗಳವಾರ ನಡೆದ ಸಭೆಯಲ್ಲಿ ಈ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಲೋಕಸಭಾ ಚುನಾವಣೆಗೆ ದೇವೇಗೌಡರು ರೂಪಿಸಿರುವ ಪಂಚಸೂತ್ರ ಇದಾಗಿದೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.
Advertisement