ಬೆಂಗಳೂರು: ಒಂದು ಕಡೆ ಸಚಿವ ಸಂಪುಟ ರಚನೆಗೆ ಕಾಂಗ್ರೆಸ್ ನಾಯಕರು ದೆಹಲಿಗೆ ತೆರಳಿದ್ದಾರೆ. ಇತ್ತ ಜೆಡಿಎಸ್ ಶಾಸಕರು ಸಚಿವ ಸಂಪುಟಕ್ಕಾಗಿ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಅಧಿಕಾರಿ ದೇವೇಗೌಡರ ಮನೆಯ ಮುಂದೆ ಲಾಬಿ ಮಾಡುತ್ತಿದ್ದಾರೆ.
ಜೆಡಿಎಸ್‍ನಲ್ಲಿ ಸಂಪುಟ ರಚನೆ ಸರ್ಕಸ್ ಬಹುತೇಕ ಅಂತ್ಯವಾಗಿದ್ದು, ಈಗ ವೀರಶೈವ ಲಿಂಗಾಯತ ಸಮುದಾಯಕ್ಕೆ ದೇವೇಗೌಡರ ಬಿಗ್ ಶಾಕ್ ನೀಡಿದ್ದಾರೆ. ಹಿರಿಯ ಮುಖಂಡ ಬಸವರಾಜ್ ಹೊರಟ್ಟಿಗೆ ಕೈ ಸಚಿವ ಸ್ಥಾನ ತಪ್ಪುವ ಸಾಧ್ಯತೆ ಇದೆ.
Advertisement
Advertisement
ದೇವೇಗೌಡರು ಪರಿಷತ್ ಸದಸ್ಯರಿಗೆ ಸಚಿವ ಸ್ಥಾನ ಇಲ್ಲ ಎಂದು ತಿಳಿದಿದ್ದಾರೆ. ಈ ವಿಚಾರವನ್ನು ನೇರವಾಗಿ ಹೊರಟ್ಟಿಗೆ ಸ್ಪಷ್ಟಪಡಿಸಿದ್ದಾರೆ. ಈ ವೇಳೆ ದೇವೇಗೌಡರು ಹೊರಟ್ಟಿಯಿಂದ ಪಕ್ಷಕ್ಕೆ ಏನೂ ಅನುಕೂಲವಾಗಿಲ್ಲ ಎಂದಿದ್ದಾರೆ. ಇದರಿಂದ ಬಸವರಾಜ ಹೊರಟ್ಟಿ ಬೇಸರಗೊಂಡಿದ್ದು, ಉತ್ತರ ಕರ್ನಾಟಕದಲ್ಲಿ ಎಲ್ಲರೂ ಪಕ್ಷ ಬಿಟ್ಟರೂ ಪಕ್ಷ ಕಟ್ಟಿ ಅಲ್ಲೇ ಉಳಿದುಕೊಂಡೆ. ಇದಕ್ಕೆ ನನಗೆ ಸಿಗುತ್ತಿರುವ ಬಹುದೊಡ್ಡ ಗಿಫ್ಟ್ ಎಂದು ಆಪ್ತರಲ್ಲಿ ಹೊರಟ್ಟಿ ತನ್ನ ನೋವನ್ನು ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
Advertisement
ಚಿತ್ರದುರ್ಗದಲ್ಲಿ ಮಾತನಾಡಿದ ಹೊರಟ್ಟಿ, ದೇವೇಗೌಡರು, ಕುಮಾರಸ್ವಾಮಿ ಯಾರು ನನ್ನ ಏನು ಕೇಳಿಲ್ಲ. ನನಗೆ ಯಾವ ಸ್ಥಾನವನ್ನು ಕೊಟ್ಟರು ನಿಭಾಯಿಸುವ ಶಕ್ತಿ ಇದೆ. ಮಂತ್ರಿಯಾಗಬೇಕು ಎಂಬ ಅನೋಭಾವನೆ ಇದೆ. ಆದರೆ ಎಲ್ಲರೂ ಯೋಗ್ಯರಿದ್ದಾರೆ. ಇಂತಹ ಕ್ಲಿಷ್ಟವಾದ ಪರಿಸ್ಥತಿಯಲ್ಲಿ ಮುಖ್ಯಮಂತ್ರಿ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳಲು ನಾವೆಲ್ಲರೂ ಸಹಕಾರ ಮಾಡಿದರೆ ಮಾತ್ರ ಒಳ್ಳೆಯ ಸರ್ಕಾರ ರಚಿಸಬಹುದು ಎಂದು ಹೇಳಿದ್ದಾರೆ.
Advertisement