ಹಾಸನ: ತೈಲ ದರಗಳ ಏರಿಕೆ ಖಂಡಿಸಿ ಕಾಂಗ್ರೆಸ್ ಹಮ್ಮಿಕೊಂಡಿರುವ ಸೋಮವಾರದ ಭಾರತ್ ಬಂದ್‍ಗೆ ನಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನಾಳೆ ಭಾರತ್ ಬಂದ್‍ಗೆ ದೇಶದಲ್ಲಿ ಬಿಜೆಪಿ ಹೊರತುಪಡಿಸಿ ಎಲ್ಲಾ ಪ್ರಾದೇಶಿಕ ಪಕ್ಷಗಳು ಬೆಂಬಲ ನೀಡುತ್ತಿದ್ದು, ನಮ್ಮ ಪಕ್ಷದ ಬೆಂಬಲವೂ ಇದೆ. ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿದೆ. ಪೆಟ್ರೋಲ್, ಡೀಸೆಲ್ ಬೆಲೆಗಳು ಯಾವುದೇ ಅಡೆ-ತಡೆ ಇಲ್ಲದೆ ಏರಿಕೆಯಾಗುತ್ತಿವೆ. ಇದರಿಂದಾಗ ಜನಸಾಮಾನ್ಯನ ಮೇಲೆ ಹೊರೆ ಹೆಚ್ಚುತ್ತಿದೆ. ಹೀಗಾಗಿ ನಾವು ಬಂದ್‍ಗೆ ಬೆಂಬಲ ನೀಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.
Advertisement
Advertisement
ಸೋಮವಾರ ನಾನು ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ದೆಹಲಿಗೆ ಪ್ರಯಾಣ ಬೆಳೆಸಿ, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗುತ್ತೇವೆ. ಭೇಟಿ ವೇಳೆ ನೆರೆ ಹಾವಳಿಯಿದಾಗಿ ಆಗಿರುವ ಹಾನಿ ಕುರಿತು ಅಂಕಿ-ಅಂಶಗಳನ್ನು ನೀಡಿ, ಪರಿಹಾರಕ್ಕಾಗಿ ಮನವಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಕರ್ನಾಟಕದಲ್ಲಿ ಬಹುತೇಕ ಬಂದ್ ಖಚಿತ – ಬೆಳಗ್ಗೆ 6 ರಿಂದ ಮಧ್ಯಾಹ್ನ 3 ಗಂಟೆವರೆಗೆ ಸಾರಿಗೆ ಸ್ತಬ್ಧ
Advertisement
ಸೋಮವಾರದ ಭಾರತ್ ಬಂದ್‍ಗೆ ಜೆಡಿಎಸ್ ಸಂಪೂರ್ಣ ಬೆಂಬಲ ನೀಡಿದ್ದು, ಜಿಲ್ಲಾ ಕಾಂಗ್ರೆಸ್ ಹಾಗೂ ಲಾರಿ ಮಾಲೀಕರ ಸಂಘವೂ ಬೆಂಬಲ ನೀಡಿದೆ. ಹೀಗಾಗಿ ನಾಳೆ ಸಾರಿಗೆ ಬಸ್ ಹಾಗೂ ಲಾರಿ ಸಂಚಾರ ಸ್ಥಗಿತವಾಗಲಿದೆ. ಶಾಲಾ-ಕಾಲೇಜುಗಳೀಗೆ ರಜೆ ಘೋಷಣೆ ಇನ್ನೂ ನಿಗದಿಯಾಗಿಲ್ಲ. ನಾಳಿನ ಬಂದ್ ಸಂಪೂರ್ಣವಾಗಿ ಯಶಸ್ವಿಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv