ಹಾಸನ: ರೆಬೆಲ್ ಸ್ಟಾರ್ ಅಂಬರೀಶ್ ನಮ್ಮ ಪಕ್ಷದಲ್ಲಿದ್ದವರು. ಅವರ ಮೇಲೆ ಅಭಿಮಾನ ಇಟ್ಟಿರುವೆ. ಅವರ ರಾಜಕೀಯ ಆರಂಭದಲ್ಲಿ ನಮ್ಮ ಪಕ್ಷ ಅವರೊಂದಿಗೆ ಇತ್ತು ಅಂತ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬರೀಶ್ ಅವರಿಗೆ ದೇವೇಗೌಡರು ಮತ್ತು ನಮ್ಮ ಬಗ್ಗೆ ಅಭಿಮಾನ ಇದೆ. ನಿನ್ನೆ ಭೇಟಿ ಮಾಡಿ ಚರ್ಚಿಸಿದ್ದೇನೆ. ನನ್ನನ್ನು ತಮ್ಮನಿಗಿಂತಲೂ ಹೆಚ್ಚಾಗಿ ಪ್ರೀತಿಸುತ್ತಾರೆ. ಜನಹಿತಕ್ಕಾಗಿ ಜೆಡಿಎಸ್ ಅಧಿಕಾರಕ್ಕೆ ಬರಬೇಕು ಎನ್ನುವುದು ಅವರ ಅಭಿಲಾಷೆ. ರಾಜ್ಯದಲ್ಲಿಯ ರಾಜಕೀಯ ಆಗುಹೋಗು ಗಮನಿಸಿ ಸೂಕ್ತ ತೀರ್ಮಾನಕೈಗೊಳ್ಳುತ್ತಾರೆ ಎನ್ನುವ ಭರವಸೆ ಇದೆ. ಹಲವು ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ. ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಬೇಕು ಎನ್ನುವ ಭಾವನೆ ಅವರ ಮನಸ್ಸಿನಲ್ಲಿದೆ ಅಂತ ಹೇಳಿದ್ರು. ಇದನ್ನೂ ಓದಿ: ಕಾಂಗ್ರೆಸ್ ನಿಂದ ದೂರ ಉಳಿದಿರೋ ಅಂಬರೀಶ್ ಜೆಡಿಎಸ್ ಸೇರ್ತಾರಾ?
Advertisement
Advertisement
ಇದೇ ವೇಳೆ ಅಂಬರೀಶ್ ಭೇಟಿ ಕುರಿತು ಸಿಎಂ ವ್ಯಂಗ್ಯಕ್ಕೆ ಪ್ರತಿಕ್ರಿಯಿಸಿದ ಹೆಚ್‍ಡಿಕೆ, ಅವರಲ್ಲಿ ಈಗ ವ್ಯಂಗ್ಯ, ಕೋಪ, ಆಕ್ರೋಶ ಎಲ್ಲವೂ ಎದ್ದು ಕಾಣುತ್ತಿದೆ. ಜನ ಈಗಾಗಲೇ ಸಿದ್ದರಾಮಯ್ಯ ಬಗ್ಗೆ ತೀರ್ಮಾನ ಮಾಡಿದ್ದಾರೆ. ಅಂಬರೀಶ್ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಆದ್ರೆ 2007ರಲ್ಲಿ ಚಾಮುಂಡೇಶ್ವರಿ ಬೈ ಎಲೆಕ್ಷನ್‍ನಲ್ಲಿ ಸಿಎಂ ಪರ ಪ್ರಚಾರಕ್ಕೆ ಅಂಬರೀಶ್ ಹೋಗದಿದ್ದರೆ 10 ಸಾವಿರ ಮತಗಳಿಂದ ಸೋಲುತ್ತಿದ್ದರು. ಅಂಬರೀಶ್ ನಿಂದ ಸಿಎಂ ಚುನಾವಣೆಯಲ್ಲಿ ಮರುಜೀವ ಪಡೆದ್ರು. ಆದ್ರೆ ಅವರನ್ನು ಮಂತ್ರಿ ಸ್ಥಾನದಿಂದ ತೆಗೆದಿದ್ದು ಅವರಿಗೆ ನೋವಾಗಿದೆ. ಆ ಭಾವನೆ ಅವರಲ್ಲಿ ಇನ್ನೂ ಇದೆ. ನನ್ನ ಅಂಬರೀಶ್ ಭೇಟಿಗೆ ಸಿಎಂ ವ್ಯಂಗ್ಯಕ್ಕೆ ಮುಖ್ಯಮಂತ್ರಿ ತಕ್ಕದಾದ ಬೆಲೆ ತೆರಲಿದ್ದಾರೆ ಅಂತ ಸಿಎಂ ವಿರುದ್ಧ ಗುಡುಗಿದರು. ಇದನ್ನೂ ಓದಿ: ಅಂಬಿ-ಹೆಚ್‍ಡಿಕೆ ಭೇಟಿ: ಪಾಪ ಮೀಟ್ ಆಗ್ಲಿ ಬಿಡಿ ಬೇಡ ಅಂದೋರು ಯಾರು?-ಸಿಎಂ