ತುಮಕೂರು: ದೇಶದಲ್ಲಿ ಸ್ವಾತಂತ್ರ್ಯದ ಅಮಲಿನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಈಗ ದೇಶ ಭಕ್ತಿಯ ಅಮಲಿನಲ್ಲಿ ಅಧಿಕಾರಕ್ಕೆ ಬರಲು ಮೋದಿ ಬಹಳ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಮಹಾಘಟಬಂಧನ ಕೋಮುವಾದವನ್ನ ಮಣಿಸುವ ಅಮಲಿನಲ್ಲಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೋದಿ ಸರ್ಕಾರ ಯುವಕರಿಗೆ ಹಲವು ಆಸೆಗಳನ್ನು ಒಡ್ಡಿ ಅಧಿಕಾರಕ್ಕೆ ಬಂದಿತ್ತು. ಆದರೆ ಅವರಿಗೆ ನೀಡಿದ್ದ ಯಾವುದೇ ಆಸೆ ಈಡೇರಿಲ್ಲ. ಅಲ್ಲದೇ ದೇಶಗಳಲ್ಲಿ ಸೈನ್ಯದ ದುರುಪಯೋಗ ಆಗಿದ್ದು, ಇದು ಎಷ್ಟರ ಮಟ್ಟಿಗೆ ಸರಿ ಎಂಬುವುದು ನನ್ನ ಪ್ರಶ್ನೆ ಆಗಿದೆ. ಈ ಹಿಂದೆ ಸ್ವಾತಂತ್ರ್ಯದ ಅಮಲಿನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದರೆ, ಈಗ ದೇಶ ಭಕ್ತಿಯ ಅಮಲಿನಲ್ಲಿ ಅಧಿಕಾರಕ್ಕೆ ಬರಲು ಮೋದಿ ಬಹಳ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಮಹಾಘಟಬಂಧನ ಕೋಮುವಾದವನ್ನ ಮಣಿಸುವ ಅಮಲಿನಲ್ಲಿದೆ ಎಂದರು.
Advertisement
Advertisement
ಜೆಡಿಎಸ್‍ಗೆ 12 ಲೋಕಸಭಾ ಕ್ಷೇತ್ರ ಬಿಟ್ಟುಕೊಡಬೇಕು ಎಂಬ ಬೇಡಿಕೆ ಇಟ್ಟಿದ್ದೇವೆ. 7 ಕ್ಷೇತ್ರಕ್ಕೆ ತೃಪ್ತಿಪಟ್ಟುಕೊಂಡಿದ್ದೇವೆ ಎಂಬ ವರದಿ ಸತ್ಯಕ್ಕೆ ದೂರವಾದದ್ದು ಎಂದು. ಈಗಲೂ ಜೆಡಿಎಸ್ 12 ಕ್ಷೇತ್ರಕ್ಕಾಗಿ ಬೇಡಿಕೆ ಇಟ್ಟಿದ್ದು, ಅಂತಿಮವಾಗಿ ಅದು 9 ಆಗಬಹುದು, 8 ಆಗಬಹುದು. ಅಂತಿಮ ಚರ್ಚೆಯ ಬಳಿಕವೇ ಸ್ಪಷ್ಟನೆ ನೀಡಲಿದ್ದೇವೆ ಎಂದರು.
Advertisement
ದುಡುಕಿನ ತೀರ್ಮಾನ ಬೇಡ: ಇದೇ ವೇಳೆ ನಟ ಅಂಬರೀಷ್ ಪತ್ನಿ ಸುಮಲತಾ ಮಂಡ್ಯದ ಸೊಸೆ, ಮಗಳಾಗಿದ್ದಾರೆ ಎಂದ ಅವರು, ಚುನಾವಣೆ ವಿಚಾರದಲ್ಲಿ ದುಡುಕಿನ ನಿರ್ಧಾರ ಮಾಡಬಾರದು. ಆದರೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಅವರಿಗೆ ಬಿಟ್ಟಿದ್ದು. ಸುಮಲತಾ ಸ್ಪರ್ಧೆ ಮಾಡುವುದರಿಂದ ಜೆಡಿಎಸ್‍ಗೆ ಯಾವುದೇ ರೀತಿಯ ತೊಂದರೆ ಆಗಲ್ಲ ಎಂದರು.
Advertisement
ದೇಶದಲ್ಲಿ ಕುಟುಂಬ ರಾಜಕಾರಣ ಅನ್ನುವುದು ಅರ್ಥಹೀನವಾಗಿದೆ. ಯಡಿಯೂರಪ್ಪರ ಮನೆಯವರೂ ಕುಟುಂಬ ರಾಜಕಾರಣ ಮಾಡುತ್ತಾರೆ. ಸಿದ್ದರಾಮಯ್ಯ ನವರು ಕುಟುಂಬ ರಾಜಕಾರಣ ಮಾಡುತ್ತಾರೆ ಎಂದರು. ಅಲ್ಲದೇ ಚೌಕಿದಾರ್ ಚೋರ್ ಅನ್ನುವ ಪದಕ್ಕೆ ಹೇಗೆ ಅರ್ಥ ಇಲ್ಲವೋ ಹಾಗೆಯೇ ಮಹಾಘಟ ಬಂಧನ್ ಮಹಾ ಠಕ್ ಬಂಧನ್ ಅನ್ನುವ ಮಾತಿಗೂ ಬೆಲೆ ಇಲ್ಲ ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ಹೇಳಿರುವ ಚೌಕಿದಾರ್ ಚೋರ್ ಅನ್ನುವ ಮಾತಿಗೆ ಬೆಲೆ ಇಲ್ಲ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv