ಬೆಂಗಳೂರು: ಬಿಜೆಪಿಯವರಿಗೆ (BJP) ಲವ್ ಮಾಡಿ ಗೊತ್ತಿಲ್ಲ, ಲವ್ (Love) ಬಗ್ಗೆ ಏನೂ ಗೊತ್ತಿಲ್ಲ. ನಳಿನ್ ಕುಮಾರ್ ಕಟೀಲ್ (Nalin Kumar Kateel) ಪೋಲಿ ಹುಡುಗರ ಥರ ಮಾತಾಡಿದ್ದಾರೆ. ಜನ ಚುನಾವಣೆಯಲ್ಲಿ ಇಂಥವರನ್ನ ಒದ್ದು ಹೊರಗೆ ಹಾಕ್ಬೇಕು ಎಂದು ಜೆಡಿಎಸ್ (JDS) ರಾಜಾಧ್ಯಕ್ಷ ಸಿ.ಎಂ ಇಬ್ರಾಹಿಂ (CM Ibrahim) ವಾಗ್ದಾಳಿ ನಡೆಸಿದ್ದಾರೆ.
ನಗರದ ಜೆ.ಪಿ ಭವನದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, `ರಸ್ತೆ ಮತ್ತು ಚರಂಡಿಯಂತಹ ಸಣ್ಣ ಸಮಸ್ಯೆಗಳ ಬಗ್ಗೆ ಮಾತನಾಡಬೇಡಿ, ಆದರೆ ಲವ್ ಜಿಹಾದ್ (Love Jihad) ನಂತಹ ದೊಡ್ಡ ವಿಷಯಗಳ ಬಗ್ಗೆ ಮಾತನಾಡಿ’ ಎಂದು ತಮ್ಮ ಕಾರ್ಯಕರ್ತರಿಗೆ ಕರೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಅಯ್ಯಪ್ಪನ ದರ್ಶನ ಪಡೆದು ಹಿಂದಿರುಗುವಾಗ ಅಪಘಾತ – ಬಾಲಕ ದುರ್ಮರಣ
Advertisement
Advertisement
ಬಿಜೆಪಿ ಅಜೆಂಡಾ, ಸಂಸ್ಕೃತಿ ಏನು ಅಂತಾ ಕಟೀಲ್ ತೋರಿಸಿಕೊಂಡಿದ್ದಾರೆ. ಬಿಜೆಪಿಯಲ್ಲಿ ಕೆಲವರಿಗೆ ಮದ್ವೆನೇ ಆಗಿಲ್ಲ, ಇನ್ನು ಲವ್ ಬಗ್ಗೆ ಏನು ಗೊತ್ತು? ಮೊದಲು ಯುಪಿ ಸಿಎಂಗೆ ಲವ್ ಮಾಡೋಕೆ ಹೇಳಿ, ಆಮೇಲೆ ಜಿಹಾದ್ ಬಗ್ಗೆ ನೋಡಿ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಕಟೀಲ್‌ಗೆ ಛೀ, ಥೂ ಎಂದ ವಿಶ್ವನಾಥ್
Advertisement
ನಳಿನ್ ಕುಮಾರ್ ಕಟೀಲ್ ಪೋಲಿ ಹುಡುಗರ ಥರ ಮಾತಾಡಿದ್ದಾರೆ. ಮುಂದೆ ಬೆಳೆಯೋ ಮಕ್ಕಳಿಗೆ ರಾಜ್ಯಾಧ್ಯಕ್ಷರು ಯಾವ ರೀತಿ ಸಂದೇಶ ನೀಡಿದ್ದಾರೆ? ಏನು ಪಾಠ ಮಾಡ್ತಿದ್ದಾರೆ? ಅಂತಾ ಇದರಲ್ಲಿ ಗೊತ್ತಾಗ್ತಿದೆ. ಚುನಾವಣೆಯಲ್ಲಿ ಇಂಥವರನ್ನ ಜನರೇ ಒದ್ದು ಹೊರಗೆ ಹಾಕ್ಬೇಕು ಎಂದು ಕರೆ ನೀಡಿದ್ದಾರೆ.
Advertisement
ಕಟೀಲ್ ಬಾಂಬೆಯಲ್ಲಿ ಪಿಟೀಲು ಬಾರಿಸಿದ್ರು: ಕಟೀಲ್ ಅವರೇ ನಿಮ್ಮ ಪಕ್ಷದ 12 ಜನ ಬಾಂಬೆಗೆ ಹೋಗಿ ಪಿಟೀಲು ಬಾರಿಸಿದ್ರಲ್ಲ. ಎಲ್ಲಿ ಪಿಟೀಲು ಬಾರಿಸೋಕೆ ಹೋಗಿದ್ರಿ? ಆಮೇಲೆ ತಡೆಯಾಜ್ಞೆ ತಂದ್ರಲ್ಲ, ಆ ವೀಡಿಯೋಗಳನ್ನ ಪರದೆ ಮೇಲೆ ತರಲು ಸಿದ್ಧವಾಗಿದ್ದೀರಾ? ಸದಾನಂದಗೌಡರು (Sadananda Gowda) ಸೇರಿದಂತೆ ಇತರರು ತೆಗೆದುಕೊಂಡಿರೋ ತಡೆಯಾಜ್ಞೆಯನ್ನ ತೆರವುಗೊಳಿಸಿ, ಜನರ ಮುಂದೆ ವೀಡಿಯೋಗಳನ್ನ ತನ್ನಿ ನೋಡೋಣ. ಆಗ ಜಿಹಾದಾ, ಕಟೀಲಾ, ಪಿಟೀಲಾ ಅನ್ನೋದು ಗೊತ್ತಾಗುತ್ತೆ ಎಂದು ಲೇವಡಿ ಮಾಡಿದ್ದಾರೆ.
ಗೌಡರ ಗೂಟ ಭದ್ರವಾಗಿದೆ: ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Election 2023) ಸಂಬಂಧಿಸಿದಂತೆ ಮಾತನಾಡಿ, ಕೇಂದ್ರ ಸಚಿವ ಅಮಿತ್ ಶಾ (Amit Shah) ನಮ್ಮನ್ನ ಬೈತಿದ್ದಾರೆ. ಆದ್ರೆ ಗೌಡರ ಗೂಟ ಭದ್ರವಾಗಿದೆ, ಹೀಗಾಗಿ ಬಿಜೆಪಿ ಹೆದರುತ್ತಿದೆ. ನಾವು ಸ್ಟ್ರಾಂಗ್ ಇದ್ದೀವಿ ಅಂತಾ ನಮ್ಮನ್ನ ಟಾರ್ಗೆಟ್ ಮಾಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಮಿಲ್ಕಿ ಬ್ಯೂಟಿ ತಮನ್ನಾ – ವಿಜಯ್ ವರ್ಮಾ ಲವ್ ಸ್ಟೋರಿ ಶುರುವಾಗಿದ್ದು ಹೇಗೆ.?
ಇದೇ ವೇಳೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಮಾತನಾಡಿ, 2ನೇ ಹಂತದ ಪಂಚರತ್ನ ಯಾತ್ರೆ ಗುರುವಾರದಿಂದ (ಜ.5) ಆರಂಭವಾಗಲಿದೆ. ಜನವರಿ 13ರ ವರೆಗೆ ಬೀದರ್ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಪಂಚರತ್ನ ಯಾತ್ರೆ ನಡೆಯಲಿದೆ. ಸಂಕ್ರಾಂತಿ ಬಳಿಕ ಜನವರಿ 17 ರಿಂದ ಬಿಜಾಪುರ, ಕೊಪ್ಪಳ, ಯಾದಗಿರಿ ಸೇರಿದಂತೆ ಫೆಬ್ರವರಿ 5ರ ವರೆಗೆ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಪಂಚರತ್ನ ಯಾತ್ರೆ ಜರುಗಲಿದೆ ಎಂದು ತಿಳಿಸಿದ್ದಾರೆ.
ಪಂಚರತ್ನ ಯಾತ್ರೆಯಲ್ಲಿ ರಾಜಕೀಯ ಹೇಳಿಕೆ ಕೊಡಲ್ಲ. ಜನರ ಸಮಸ್ಯೆ ಬಗ್ಗೆ ಮಾತ್ರ ಮಾತಾಡ್ತೀನಿ. ಈ ಬಾರಿ ಹಳೇ ಕರ್ನಾಟಕದಲ್ಲಿ 35 ಸ್ಥಾನ ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.