Bengaluru CityDistrictsKarnatakaLatestLeading NewsMain Post

ಮತಾಂತರ ಆಗೋನು ಸುನ್ನಿ ಕಟ್ ಮಾಡಿಸಿಕೊಳ್ಬೇಕಾ, ಬೇಡ್ವಾ ಅಂತಾ ಡಿಸಿ ಹೇಳ್ತಾನಾ: ಸಿಎಂ ಇಬ್ರಾಹಿಂ

ಬೆಂಗಳೂರು: ಮತಾಂತರ ಆಗುವವನು ಡಿಸಿ ಪರ್ಮಿಷನ್ ಕೇಳಬೇಕಾ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಪ್ರಶ್ನಿಸಿದ್ದಾರೆ.

ಮತಾಂತರ ಕಾಯ್ದೆ ಸಂಬಂಧ ಸುಗ್ರೀವಾಜ್ಞೆ ಜಾರಿ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಸರ್ಕಾರಕ್ಕೆ ಮಾಡಲು ಏನೂ ಕೆಲಸ ಇಲ್ಲವೇ? ರಾಜ್ಯದಲ್ಲಿ ಈಗಾಗಲೇ ಹಾಹಾಕಾರ ಇದೆ, ಜನ ಸಾಯುತ್ತಿದ್ದಾರೆ. ಇವರಿಗೆ ಹೊಟ್ಟೆ, ಬಟ್ಟೆ, ಮೊಟ್ಟೆ ಹಲಾಲ್ ಕಟ್, ಲೌಡ್ ಸ್ಪೀಕರ್, ಇವೇ ಆಯ್ತು. ಇವರು ಆಕ್ಟ್ ಪಾಸ್ ಮಾಡುವ ಮೊದಲೇ ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡುತ್ತಿದ್ದೇವೆ ಎಂದರು. ಇದನ್ನೂ ಓದಿ: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿ

ಯಾವುದಾದರೂ ಒಂದು ಕೇಸ್ ಬಲವಂತವಾಗಿ ಮತಾಂತರ ಮಾಡಿದ್ದಾರೆ ಅಂದ್ರೆ ಮರಣದಂಡನೆ ಕೊಡಿ. ನಿಮಗೆ ಆ ಶಕ್ತಿ ಇದೆಯಾ? ಮತಾಂತರ ಆಗುವವನು ಡಿಸಿ ಪರ್ಮಿಷನ್ ಕೇಳಬೇಕಾ? ಮತಾಂತರ ಆಗುವವನು ಸುನ್ನಿ ಕಟ್ ಮಾಡಿಸಿಕೊಳ್ಳಬೇಕಾ ಬೇಡವಾ ಅಂತಾ ಡಿಸಿ ಹೇಳ್ತಾನಾ. ಅನೇಕ ಕಡೆ ಮುಸಲ್ಮಾನರೂ ಲಿಂಗಾಯಿತರಾಗುತ್ತಿದ್ದಾರೆ. ಅದಕ್ಕೆ ನಾವೇನು ಬಾಯಿ ಬಡಿದುಕೊಳ್ತಾ ಇದ್ದೀವಾ ಎಂದು ಪ್ರಶ್ನಿಸಿದರು.

ಬಸವ ತತ್ತ್ವದಲ್ಲಿ ನನಗೆ ನಂಬಿಕೆ ಇದೆ. ನಾವು ಕೂಡಿಬಾಳಬೇಕೇ ಹೊರತು ಪ್ರತಿಯೊಂದಕ್ಕೂ ಕಾನೂನು ತರಬಾರದು ಎಂದು ಕಿಡಿಕಾರಿದ ಸಿಎಂ ಇಬ್ರಾಹಿಂ, ನಾನು ಬಿಟ್ಟ ಮೇಲೆ ಕಾಂಗ್ರೆಸ್‍ಗೆ ದರಿದ್ರ ಶುರುವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ರಮ್ಯ ಟ್ವೀಟ್ ವಾರ್ ವಿಚಾರಕ್ಕೆ ಪ್ರತಿಕ್ರಿಯಿಸಿದರು.

Leave a Reply

Your email address will not be published.

Back to top button