ವಿಜಯಪುರ: ಒಬ್ಬ ಪ್ರಧಾನಿಯಾಗಿ ಮೋದಿ ರಾಜ್ಯದ ಸಮಸ್ಯೆಯ ಕುರಿತು ಚರ್ಚಿಸೋದನ್ನು ಬಿಟ್ಟು ಜೆಡಿಎಸ್ ಬಗ್ಗೆ ಅಭಿಪ್ರಾಯ ಕೊಡೋದಕ್ಕೆ ದೆಹಲಿಯಿಂದ ಇಲ್ಲಿಗೆ ಬರಬೇಕಾಯಿತಾ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಜೆಡಿಎಸ್‍ಗೆ ಮತ ಹಾಕಬೇಡಿ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ತಿರುಗೇಟು ನೀಡಿದ ಎಚ್‍ಡಿಕೆ, ಕಾಂಗ್ರೆಸ್ ನವರು ಜೆಡಿಎಸ್ ಗೆ ಮತ ನೀಡಿದ್ರೆ ಬಿಜೆಪಿ ಬರುತ್ತೆ ಅಂತಾರೆ. ಮೋದಿ ಅವರು ಜೆಡಿಎಸ್ ಗೆ ಮತ ನೀಡಿದ್ರೆ ಕಾಂಗ್ರೆಸ್ ಬರುತ್ತೆ ಅಂತಾರೆ. ಇವರಿಬ್ಬರೇ ಚುನಾವಣೆ ನಿರ್ಧಾರ ಮಾಡಿಕೊಂಡ ಹಾಗೆ ಕಾಣುತ್ತೆ. ಕಳೆದ 4 ವರ್ಷದ ಅಧಿಕಾರಾವಧಿಯಲ್ಲಿ ರಾಜ್ಯದ ಅಭಿವೃದ್ಧಿಗೆ ಮೋದಿ ರಾಜ್ಯದ ಜನರ ಬಳಿ ಮತ ಕೇಳುವ ನೈತಿಕತೆ ಉಳಿಸಿಕೊಂಡಿಲ್ಲ ಅಂತ ಕಿಡಿಕಾರಿದ್ರು. ಇದನ್ನೂ ಓದಿ: ಮೋದಿಯವರು ಹೇಳಿದಂತೆ ಸಿದ್ದರಾಮಯ್ಯ ಪಕ್ಷಾಂತರಿ ಸಿಎಂ: ಕುಮಾರಸ್ವಾಮಿ
Advertisement
ನಮ್ಮ ಪಕ್ಷದ ಬಗ್ಗೆ ಮಾತನಾಡಿ ಪ್ರಚಾರ ಮಾಡುತ್ತಿದ್ದಾರೆ. ಓವೈಸಿಯಿಂದ ಪ್ರಚಾರ ಮಾಡಿಸಿದ್ದರೆ, ಉಗ್ರವಾದಿಗಳನ್ನು ರಾಜ್ಯಕ್ಕೆ ಕರೆ ತಂದು ಪ್ರಚಾರ ನಡೆಸಿದ್ದಾರೆಂದು ಪ್ರಧಾನಿ ಮೋದಿ ಆರೋಪಿಸುತ್ತಿದ್ದಾರೆ. ಮೋದಿ, ಅಮಿತ್ ಷಾ, ಯೋಗಿ ಅದಿತ್ಯಾನಾಥರಿಂದ ರಾಜ್ಯಕ್ಕೆ ಯಾವ ರೀತಿಯ ಕೊಡುಗೆಯಿದೆ. ನೀವು ಹೊರ ರಾಜ್ಯಗಳಿಂದ ಬಂದು ಪ್ರಚಾರ ನಡೆಸಿದ್ದೀರಿ. ಸಿದ್ದರಾಮಯ್ಯ ಅವರೇ ಹೇಳಿದ್ದಾರೆ ಬಿಜೆಪಿ ಅವರು ಟೆರರಿಸ್ಟ್ ಗಳೆಂದು. ರಾಜ್ಯದ ರಕ್ಷಣೆಗೆ ನಿಂತವರು ನಾವು. ಭಾಷಣದಲ್ಲಿ ರಾಜ್ಯದ ಮಹಾನುಭಾವರ ಹೆಸರು ಹೇಳಿದಾಕ್ಷಣ ಜನ ಮರಳಾಗುವುದಿಲ್ಲ. ಅವರ ಹೆಸರು ಹೇಳುವ ನೀವು ಆಯಾ ಜಿಲ್ಲೆಗಳ ಸಮಸ್ಯೆಗೆ ನಿಮ್ಮ ಸರ್ಕಾರ ಯಾವಾಗ ನೆರವಿಗೆ ಬಂದಿದೆಯೆಂದು ತರಾಟೆಗೆ ತಗೆದುಕೊಂಡರು. ಇದನ್ನೂ ಓದಿ: ಈ ಸಲ ಕಪ್ ನಮ್ದೆ, ಸಮ್ಮಿಶ್ರ ಸರ್ಕಾರ ಇಲ್ಲ: ಎಚ್‍ಡಿಕೆ
Advertisement
Advertisement
ಕಲಬುರಗಿ ತೊಗರಿ ರೈತರಿಗೆ ನಿಮ್ಮ ಕೊಡುಗೆಯೇನು ಎಂಬುದನ್ನು ಮೊದಲು ತಿಳಿಸಿ. ನಿಮ್ಮ ಡ್ರಾಮಾ ಕರ್ನಾಟಕ ಜನತೆ ಮುಂದೆ ನಡೆಯುವುದಿಲ್ಲ. ಜೆಡಿಎಸ್ ವಿರುದ್ಧ ಮಾತನಾಡಿ, ಹೊಗಳಿ ಮಾತನಾಡುವುದ್ರಿಂದ ಜನರ ಹಾದಿ ತಪ್ಪಿಸಲು ನಿಮ್ಮಿಂದ ಹಾಗೂ ಕಾಂಗ್ರೆಸ್ ನಿಂದಲೂ ಸಾಧ್ಯವಿಲ್ಲ. ನಮ್ಮನ್ನು ಹೊಗಳಿ ತೆಗಳಿ ನೀವು ಮತವನ್ನು ಪಕ್ಷದ ಪರ ಪಡಿತೇವೆ ಎಂದು ತಿಳಿದಿದ್ರೆ ಅದು ಆಗಲ್ಲ. ರಾಜ್ಯದ ಜನ ದಡ್ಡರಲ್ಲ. ಪ್ರತಿಯೊಂದನ್ನು ಯೋಚನೆ ಮಾಡ್ತಿದ್ದಾರೆ. ನಿಮ್ಮ ಪೊಳ್ಳು ಮಾತುಗಳಿಗೆ ವೈಯಕ್ತಿಕ ಟೀಕೆ ಮೂಲಕ ಮತ ಪಡೆಯಲು ಹೊರಟ ನೀವು ದೇಶದ ಜನರ ದಾರಿ ತಪ್ಪಿಸಿದ್ದೀರಿ. ರಾಜ್ಯದ ಜನ ನಿಮಗೆ ತಕ್ಕ ಉತ್ತರ ನೀಡ್ತಾರೆ ಅಂತ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಪ್ರಧಾನಿಯವರು ನನಗೆ ಬೌಲಿಂಗ್ ಮಾಡೋಕೆ ಆಗಲ್ಲ: ಮೋದಿಗೆ ಕುಮಾರಸ್ವಾಮಿ ಟಾಂಗ್
Advertisement
ಬೆಂಗಳೂರಿನ ಕೆಂಗೇರಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ರಾಜ್ಯದಲ್ಲಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ತೆಗೆಯಬೇಕದಾರೆ ನೀವು ಬಿಜೆಪಿಗೆ ಮತ ಹಾಕಬೇಕು. ಜೆಡಿಎಸ್‍ಗೆ ಮತ ಹಾಕಿದ್ದರೆ ಕಾಂಗ್ರೆಸ್ ಸೋಲಿಸಲು ಆಗುವುದಿಲ್ಲ ಎಂದು ಮೋದಿ ಭಾಷಣ ಮಾಡಿದ್ದರು.