– ಜೆಡಿಎಸ್‍ಗೆ ತಲೆನೋವಾದ ಮಂಡ್ಯ ಲೋಕಸಭೆ ಟಕೆಟ್ ಹಂಚಿಕೆ
ಮಂಡ್ಯ: ಲೋಕಸಭಾ ಉಪಚುನಾವಣೆ ಘೋಷಣೆಯಾದ ಮಂಡ್ಯ ಜಿಲ್ಲೆಯಿಂದ ಯಾರನ್ನು ಕಣಕ್ಕಿಳಿಸಬೇಕೆಂಬುದು ಜೆಡಿಎಸ್‍ಗೆ ತಲೆನೋವು ಆರಂಭವಾಗಿದೆ. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಶಿವರಾಮೇಗೌಡರು ಯೋಚಿಸುತ್ತಿದ್ದು, ಜೆಡಿಎಸ್ ಟಿಕೆಟ್‍ಗಾಗಿ ಪ್ರಯತ್ನ ಮಾಡುತ್ತಿದ್ದಾರೆ. ಇತ್ತ ಲಕ್ಷ್ಮಿ ಅಶ್ವಿನ್ ಗೌಡ ಅವರಿಗೆ ಜೆಡಿಎಸ್ ಟಿಕೆಟ್ ನೀಡುವ ಸಾಧ್ಯತೆಗಳಿವೆ. ಎಲ್.ಆರ್.ಶಿವರಾಮೇಗೌಡ ಎಂಬ ಹೆಸರಿನ ಫೇಸ್‍ಬುಕ್ ಪೇಜಿನಲ್ಲಿ ಬರೆದುಕೊಂಡಿರುವ ಕೆಲವು ಸಾಲುಗಳು ಜೆಡಿಎಸ್ ನಲ್ಲಿ ಅಸಮಾಧಾನದ ಹೊಗೆ ಕಾಣಿಸಿಕೊಂಡಿದೆ ಎಂದು ಹೇಳುತ್ತಿವೆ.
ಫೇಸ್‍ಬುಕ್ ನಲ್ಲಿ ಏನು ಬರೆಯಲಾಗಿದೆ?
ಯಾರಿ ಸ್ವಾಮಿ, ಈ ಲಕ್ಷ್ಮಿಅಶ್ವಿನಿ ಗೌಡ? ಎಷ್ಟು ವರ್ಷದಿಂದ ರಾಜಕೀಯದಲ್ಲಿ ಇದ್ದಾರೆ? ನಮ್ಮ ನಾಯಕರು ಶ್ರೀ ಎಲ್.ಆರ್.ಶಿವರಾಮೇ ಗೌಡರು ಸುಮಾರು 25 ವರ್ಷಗಳಿಂದ ರಾಜಕೀಯ ಜೀವನ ನಡೆಸುತ್ತಿದ್ದಾರೆ. ನಿನ್ನೆ ಮೊನ್ನೆ ಬಂದವರಿಗೆಲ್ಲ ಲೋಕಸಭಾ ಚುನಾವಣೆಗೆ ಟಿಕೆಟ್ ಬೇಕು ಅಂದ್ರೆ… ಹೆಂಗೆ ನೀವೇ ಹೇಳಿ… ಅಂತಾ ಬರೆಯಲಾಗಿದೆ.
Advertisement
Advertisement
ಮಂಡ್ಯ ಜಿಲ್ಲೆಯ ಮುಂದಿನ ಜೆಡಿಎಸ್ ಲೋಕಸಭಾ ಅಭ್ಯರ್ಥಿ ಎಂದು ಬಿಂಬಿತವಾಗಿರುವ ಎಲ್.ಆರ್.ಶಿವರಾಮೇಗೌಡರಿಗೆ ಟಿಕೆಟ್ ಕೊಡಲಿ. ಎಲ್ಲ ನಮ್ಮ ಜೆಡಿಎಸ್ ನಾಯಕರು ಸಂಪೂರ್ಣ ಸಪೋರ್ಟ್ ಮಾಡಿ. ಜೈ ದೇವೇಗೌಡಜೀ, ಜೈ ಕುಮಾರಣ್ಣ ಎಂದು ಮತ್ತೊಂದು ಪೋಸ್ಟ್ ಕೂಡ ಮಾಡಲಾಗಿದೆ.
Advertisement
ಶಿವರಾಮೇಗೌಡರೇ ಈ ರೀತಿಯ ಸಾಲುಗಳನ್ನು ಬರೆದ್ರಾ ಎನ್ನುವ ಸಂಶಯ ಕೂಡ ಹುಟ್ಟಿಕೊಂಡಿದೆ. ಈ ಫೇಸ್‍ಬುಕ್ ಪೇಜ್ ಶಿವರಾಮೇಗೌಡರ ಅಧಿಕೃತ ಖಾತೆಯೇ ಅಥವಾ ಅಭಿಮಾನಿಗಳದ್ದಾ? ಎಂಬ ಗೊಂದಲವು ಹುಟ್ಟಿಕೊಂಡಿದೆ. ಈ ಬಗ್ಗೆ ಶಿವರಾಮೆಗೌಡರು ಇದೂವರೆಗೂ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಮಂಡ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳುತ್ತಾ ಎಂಬುದರ ಬಗ್ಗೆ ಪ್ರಶ್ನೆಯೂ ಹುಟ್ಟಿಕೊಂಡಿದೆ.
Advertisement
2017ರಲ್ಲಿ ಐಆರ್‍ಎಸ್ ವೃತ್ತಿಗೆ ರಾಜೀನಾಮೆ ನೀಡಿ ಲಕ್ಷ್ಮಿ ಅಶ್ವಿನ್ ಗೌಡ ಜೆಡಿಎಸ್ ಸೇರ್ಪಡೆಗೊಂಡು ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಒಂದು ಮಾಜಿ ಸಂಸದೆ ರಮ್ಯಾ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ರೆ ಲಕ್ಷ್ಮಿ ಅಶ್ವಿನ್ ಗೌಡರನ್ನು ಎದುರಾಳಿಯಾಗಿ ನಿಲ್ಲಿಸುವುದು ಜೆಡಿಎಸ್ ನ ಲೆಕ್ಕಾಚಾರ ಎಂಬ ಸುದ್ದಿ ಬಲವಾಗಿ ಹರಿದಾಡಿತ್ತು. ಆದ್ರೆ ಶಿವಾರಮೇಗೌಡರು ಜೆಡಿಎಸ್‍ನ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ 25 ವರ್ಷಗಳಿಂದ ರಾಜಕೀಯದಲ್ಲಿ ಗುರುತಿಸಿಕೊಂಡಿರುವ ನನಗೆ ಟಿಕೆಟ್ ನೀಡಬೇಕೆಂಬುವುದು ಶಿವರಾಮೇಗೌಡ ಅಭಿಮಾನಿಗಳ ವಾದ. 2012ರ ಬ್ಯಾಚ್‍ನ ಐಆರ್‍ಎಸ್ ಆಫೀಸರ್ ಆಗಿದ್ದ ಲಕ್ಷ್ಮಿ ಅಶ್ವಿನ್ ಗೌಡ, ರೈಲ್ವೆ ಇಲಾಖೆಯಲ್ಲಿ ಸಹಾಯಕ ಹಣಕಾಸು ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
ಕಳೆದ ಎರಡು ಬಾರಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‍ನಿಂದ ರಮ್ಯಾ ಮತ್ತು ಜೆಡಿಎಸ್ ನಿಂದ ಪುಟ್ಟರಾಜು ಮುಖಾಮುಖಿ ಆಗಿದ್ದರು. ಒಂದು ರಮ್ಯಾವರು ಗೆಲುವು ಕಂಡಿದ್ದರೆ, 2014ರಲ್ಲಿ ಪುಟ್ಟರಾಜು ಗೆಲುವು ಕಂಡಿದ್ದಾರೆ. ಈ ಬಾರಿ ವಿಧಾನಸಭಾ ಕ್ಷೇತ್ರದಿಂದಲೂ ಸ್ಪರ್ಧಿಸಿದ್ದ ಪುಟ್ಟರಾಜು ಅವರು ಶಾಸಕರಾಗಿ ಆಯ್ಕೆಗೊಂಡಿದ್ದರಿಂದ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪುಟ್ಟರಾಜು ಅವರಿಂದ ತೆರವಾದ ಸ್ಥಾನಕ್ಕೆ ನವೆಂಬರ್ 3ರಂದು ಉಪ ಚುನಾವಣೆ ನಡೆಯಲಿದೆ. ಇದನ್ನೂ ಓದಿ: ಮಂಡ್ಯ ಲೋಕಸಭಾ ಉಪಚುನಾವಣೆ: ಜೆಡಿಎಸ್ ಟಿಕೆಟ್‍ಗೆ ಬೆಂಗ್ಳೂರಿಗೆ ದೌಡಾಯಿಸಿದ ಶಿವರಾಮೇಗೌಡ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv