– ಪಕ್ಷ ಸಂಘಟನೆಗೆ ಹೊಸ ಸೂತ್ರ ಮುಂದಿಟ್ಟ ನಾಯಕರು
ಬೆಂಗಳೂರು: ನಿಖಿಲ್ ಕುಮಾರಸ್ವಾಮಿಗೆ (Nikhil Kumaraswamy) ರಾಜ್ಯಾಧ್ಯಕ್ಷ ಪಟ್ಟ ಕಟ್ಟೋ ವಿಚಾರ ಜೆಡಿಎಸ್‌ನಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ನಿಖಿಲ್ ಪಟ್ಟಕ್ಕೆ ಪಕ್ಷದ ಹಿರಿಯ ನಾಯಕರು ಅಸಮಾಧಾನಗೊಂಡಿದ್ದಾರೆ ಎನ್ನಲಾಗ್ತಿದ್ದು, ಪಕ್ಷ ಸಂಘಟನೆಗೆ ಹೊಸ ಸೂತ್ರವನ್ನು ದಳಪತಿಗಳ ಮುಂದೆ ಇಟ್ಟಿದ್ದಾರೆ ಎಂಬ ಚರ್ಚೆ ಪಕ್ಷದಲ್ಲಿ ಶುರುವಾಗಿದೆ.
Advertisement
ಸಂಕ್ರಾಂತಿ ಬಳಿಕ ನಿಖಿಲ್ ಕುಮಾರಸ್ವಾಮಿ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಮಾಡುವ ವಿಚಾರಕ್ಕೆ ಪಕ್ಷದ ಒಳಗಡೆ ಭಿನ್ನಾಭಿಪ್ರಾಯ ಸೃಷ್ಟಿಸಿದೆ. ಜೆಡಿಎಸ್‌ನ ಹಿರಿಯ ನಾಯಕರು ನಿಖಿಲ್‌ಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡುವ ಬಗ್ಗೆ ಕೊಂಚ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ರಾಜಕೀಯದಲ್ಲಿ ಹೆಚ್ಚು ಅನುಭವ ಇಲ್ಲದ ನಿಖಿಲ್ ಕೈ ಕೆಳಗೆ ಕೆಲಸ ಮಾಡೋಕೆ ಕೆಲ ಹಿರಿಯರಿಗೆ ಇಷ್ಟ ಇಲ್ಲ. ಅಲ್ಲದೇ, ನಿಖಿಲ್ ಕುಮಾರಸ್ವಾಮಿಗೆ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟರೆ ಮತ್ತೆ ಕುಟುಂಬ ರಾಜಕೀಯ ಹಣೆಪಟ್ಟಿ ಪಕ್ಷಕ್ಕೆ ಬರಲಿದ್ದು, ಇದನ್ನ ಹೊರತುಪಡಿಸಿ ಪಕ್ಷ ಸಂಘಟನೆಗೆ ಹೊಸ ಸೂತ್ರವನ್ನ ದೇವೇಗೌಡ, ಕುಮಾರಸ್ವಾಮಿ ಮುಂದೆ ಹಿರಿಯ ನಾಯಕರು ಇಟ್ಟಿದ್ದಾರೆ ಎನ್ನಲಾಗಿದೆ.
Advertisement
Advertisement
ಹಿರಿಯರ ಜೆಡಿಎಸ್ ನಾಯಕರು ದಳಪತಿಗಳ ಮುಂದೆ ಸೂತ್ರವನ್ನು ಇಟ್ಟಿದ್ದಾರೆ. ಜೆಡಿಎಸ್ ಶಾಸಕಾಂಗ ಸ್ಥಾನ ಕೊಡದಿದ್ದಕ್ಕೆ ಅಸಮಾಧಾನಗೊಂಡಿರುವ ಜಿ.ಟಿ.ದೇವೇಗೌಡರ ಮನವೊಲಿಕೆ ಮಾಡಿ, ಅವರಿಗೆ ಜೆಡಿಎಸ್ ಶಾಸಕಾಂಗ ನಾಯಕ ಸ್ಥಾನ ನೀಡಿ ವಿಧಾನಸಭೆ ಒಳಗೆ ಪಕ್ಷ ಬಲಿಷ್ಠ ಮಾಡೋದು. ಪಕ್ಷದ ನಿಷ್ಠ, ಕುರುಬ ಸಮುದಾಯದ ನಾಯಕ ಬಂಡೆಪ್ಪ ಕಾಶಂಪೂರ್‌ಗೆ ರಾಜ್ಯಾಧ್ಯಕ್ಷ ಸ್ಥಾನ ನೀಡೋದು. ಈಗ ಜೆಡಿಎಸ್ ನಾಯಕ ಆಗಿರುವ ಸುರೇಶ್ ಬಾಬುನನ್ನು ಕೋರ್ ಕಮಿಟಿ ಅಧ್ಯಕ್ಷ ಮಾಡೋದು, ನಿಖಿಲ್ ಕುಮಾರಸ್ವಾಮಿಗೆ ಕಾರ್ಯಾಧ್ಯಕ್ಷ ಸ್ಥಾನ ನೀಡಿ ಪಕ್ಷದ ಸಂಘಟನೆ ಜವಾಬ್ದಾರಿ ಕೊಟ್ಟರೆ ಎಲ್ಲವೂ ಸರಿ ಹೋಗುತ್ತದೆ ಎಂಬ ಲೆಕ್ಕಾಚಾರ ದಳಪತಿಗಳ ಮುಂದೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ.
Advertisement
ಕುಮಾರಸ್ವಾಮಿ ಕೇಂದ್ರದ ಮಂತ್ರಿ ಆಗಿರುವುದರಿಂದ ರಾಜ್ಯದಲ್ಲಿ ಜೆಡಿಎಸ್ ಸಂಘಟನೆಗೆ ಹೆಚ್ಚು ಅವಕಾಶ ಆಗುತ್ತಿಲ್ಲ. ಹೀಗಾಗಿ, ನಿಖಿಲ್‌ಗೆ ಪಟ್ಟ ಕಟ್ಟುವುದಕ್ಕೆ ದಳಪತಿಗಳು ನಿರ್ಧಾರ ಮಾಡಿದ್ದಾರೆ. ಆದರೆ ಇದೇ ವಿಚಾರ ಈಗ ಪಕ್ಷದಲ್ಲಿ ಅಸಮಾಧಾನಕ್ಕೆ ಕಾರಣವಾಗಿದ್ದು, ಹಿರಿಯ ನಾಯಕರು ಕೊಟ್ಟ ಸೂತ್ರವನ್ನ ದಳಪತಿಗಳು ಒಪ್ಪುತ್ತಾರಾ ಎಂಬುದು ಪ್ರಶ್ನೆಯಾಗಿದೆ.