ಮಂಡ್ಯ: ರಾಜ್ಯ ರಾಜಕಾರಣಕ್ಕೆ ಮಾಜಿ ಸಂಸದೆ ರಮ್ಯಾ ವಾಪಾಸ್ಸಾಗುವ ಸುದ್ದಿಯಲ್ಲಿಯೇ ಮಂಡ್ಯದಲ್ಲಿ ಸ್ಯಾಂಡಲ್‍ವುಡ್ ಕ್ವೀನ್ ವಿರುದ್ಧ ಚುನಾವಣಾ ಕಣಕ್ಕೆ ಇಳಿಸಲು ಜೆಡಿಎಸ್ ಹೊಸ ಅಭ್ಯರ್ಥಿಯನ್ನು ಸಿದ್ಧಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಕ್ರಮಣಕಾರಿ ಟ್ವೀಟ್ ಗಳ ಮೂಲಕ ಎಲ್ಲಡೆ ಗುರುತಿಸಿಕೊಂಡಿರೋ ನಾಗಮಂಗಲ ಮೂಲದ ಐಆರ್‍ಎಸ್ ಅಧಿಕಾರಿ ಲಕ್ಷ್ಮೀ ಅಶ್ವಿನ್ ಗೌಡ ಎಂಬವರನ್ನು ರಮ್ಯಾ ವಿರುದ್ಧ ಕಣಕ್ಕೀಳಿಸಲು ಜೆಡಿಎಸ್ ಚಿಂತನೆ ಮಾಡಿದೆ. ಲಕ್ಷ್ಮೀ ಅಶ್ವಿನ್ ಗೌಡ ಸದ್ಯ ಮಧ್ಯ ಭಾರತದಲ್ಲಿ ರೈಲ್ವೆ ಅಧಿಕಾರಿಯಾಗಿ ಕೆಲಸ ಮಾಡಿಕೊಂಡಿದ್ದಾರೆ. ಲಕ್ಷ್ಮೀ ಅವರ ಪತಿ ಅಶ್ವಿನ್ ಗೌಡ ತೆರಿಗೆ ಇಲಾಖೆಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ.
Advertisement
ಸದ್ಯ ಲಕ್ಷ್ಮೀ ಗೌಡ ರಾಜಕೀಯದತ್ತ ಒಲವು ತೋರಿದ್ದಾರೆ. ಈಗಾಗಲೇ ನಾಗಮಂಗಲದಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ಪಾಂಡವಪುರ ವಿಧಾನಸಭಾಗೆ ಹಾಲಿ ಸಂಸದ ಪುಟ್ಟರಾಜು ಸ್ಪರ್ಧಿಸಲಿದ್ದು, ಪುಟ್ಟರಾಜು ಗೆದ್ದರೆ ತೆರವಾಗುವ ಸ್ಥಾನಕ್ಕೆ ಲಕ್ಷ್ಮೀ ಅಶ್ವಿನ್‍ಗೌಡ ಅಭ್ಯರ್ಥಿಯಾಗಲಿದ್ದಾರೆ. ಚಲುವರಾಯಸ್ವಾಮಿ ವಿರುದ್ಧವೇ ನಾಗಮಂಗಲದಲ್ಲಿ ಕಣಕ್ಕೆ ಇಳಿಸಲು ಪ್ಲಾನ್ ಆಗಿತ್ತು ಆದ್ರೆ ಚಲುವರಾಯಸ್ವಾಮಿಯ ಎದುರಾಳಿ ಶಿವರಾಮೇಗೌಡ, ಸುರೇಶ್‍ಗೌಡರು ಜೆಡಿಎಸ್ ಸೇರಿದ್ದಕ್ಕೆ ಪ್ಲಾನ್ ಡ್ರಾಪ್ ಆಯ್ತು. ಹಾಗಾಗಿ ಎಂಪಿ ಚುನಾವಣೆಗೆ ಟಿಕೆಟ್ ನೀಡೋದಾಗಿ ಲಕ್ಷ್ಮೀ ಅವರಿಗೆ ಜೆಡಿಎಸ್ ವರಿಷ್ಠರು ಭರವಸೆ ನೀಡಿದ್ದಾರೆ ಎನ್ನಲಾಗಿದೆ.