ಮೈಸೂರು: ಕೆ.ಆರ್.ನಗರ ಪುರಸಭೆ ಚುನಾವಣೆಯ ಸೋಲಿಗೆ ಸಚಿವ ಸಾ.ರಾ.ಮಹೇಶ್ ಅವರ ನಡೆಯೇ ಕಾರಣ. ಕುರುಬ ಸಮುದಾಯದವರಿಗೆ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಪಕ್ಷಕ್ಕೆ ಸೋಲಾಯ್ತು. ರಾಜ್ಯಧ್ಯಕ್ಷನಾಗಿದ್ದರೂ ಪಕ್ಷದ ನಾಯಕರು, ಸಚಿವರು ನಾನು ಹೇಳಿದವರಿಗೆ ಟಿಕೆಟ್ ನೀಡಲಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಕಿಡಿಕಾರಿದ್ದಾರೆ.
Advertisement
ಕೆ.ಆರ್. ನಗರದಲ್ಲಿ ಕುರುಬ ಸಮುದಾಯಕ್ಕೆ ಟಿಕೆಟ್ ನೀಡದಿದ್ದರೂ ನಾಲ್ಕು ವಾರ್ಡ್ ಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಕಂಡಿದ್ದಾರೆ. ಆ ಗೆಲುವಿನ ರೂವಾರಿಗಳು ನನ್ನ ಜೊತೆ ಜೆಡಿಎಸ್ ಗೆ ಬಂದ ಕಾರ್ಯಕರ್ತರ ಪರಿಶ್ರಮವಿದೆ. ಎಲ್ಲವನ್ನು ಸಮುದಾಯಗಳನ್ನು ಧಿಕ್ಕರಿಸಿ ಈ ಬಾರಿ ಟಿಕೆಟ್ ನೀಡಿದ್ದರಿಂದ ಕೆ.ಆರ್.ನಗರದಲ್ಲಿ ಸೋಲು ಕಂಡಿದ್ದೇವೆ. ರಾಜ್ಯದ ಮಂತ್ರಿಗಳಾದವರು ಒಂದು ಸಮುದಾಯವನ್ನು ದ್ವೇಷ ಮಾಡಬಾರದು. ಚುನಾವಣೆಯಲ್ಲಿ ನಮಗೆ ಮತ ನೀಡಲಿ ಅಥವಾ ನೀಡದರಿಲಿ ಗೆದ್ದ ಮೇಲೆ ಎಲ್ಲರನ್ನು ಒಂದೇ ಭಾವನೆಯಿಂದ ಕಾಣಬೇಕು ಎಂದು ಸಚಿವ ಸಾ.ರಾ.ಮಹೇಶ್ ಅವರನ್ನು ಕುಟುಕಿದರು.
Advertisement
Advertisement
ಚುನಾವಣೆಯಲ್ಲಿ ಜಯಶಾಲಿಯಾದ ನಾಯಕರು ಎಲ್ಲರನ್ನು ಒಂದೇ ಎಂಬ ಭಾವನೆಯಿಂದ ನೋಡಿಕೊಂಡು ಬಂದ ಇತಿಹಾಸವನ್ನು ಕೆ.ಆರ್.ನಗರ ಕ್ಷೇತ್ರ ಹೊಂದಿದೆ. ದ್ವೇಷ ರಾಜಕಾರಣ ಮಾಡಿ ಅಧಿಕಾರಕ್ಕೆ ಬಂದ ಉದಾಹರಣೆಗಳು ನಮ್ಮ ಮುಂದಿಲ್ಲ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅರಿತು ಕೆಲಸ ಮಾಡಿ ಎಂದು ಸಚಿವರಲ್ಲಿ ಹೆಚ್.ವಿಶ್ವನಾಥ್ ಮನವಿ ಮಾಡಿಕೊಂಡರು.
Advertisement
ಜೆಡಿಎಸ್ ನಾಯಕರ ಅತಿಯಾದ ಮಾತು ಮತ್ತು ಹಣದ ಮತ್ತಿನಿಂದ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೆಲುವು ಸಾಧಿಸಿದ್ದಾರೆ. ದುಡ್ಡು ಇಲ್ಲದೆ ಗುಡಿಸಲಲ್ಲಿ ವಾಸ ಮಾಡಿಕೊಂಡು, ರಸ್ತೆ ಬದಿಯ ಬೋರ್ ವೆಲ್ ನಲ್ಲಿ ಸ್ನಾನ ಮಾಡುತ್ತಿದ್ದ ಪ್ರತಾಪ್ ಚಂದ್ರ ಸಾರಂಗಿ ಮೋದಿ ಸಂಪುಟದಲ್ಲಿ ಸಚಿವರಾಗಿದ್ದಾರೆ. ಜನರನ್ನು ದುಡ್ಡಿನಿಂದ ಅಳೆಯಬಾರದು. ದುಡ್ಡಿನಿಂದ ಕೇವಲ ತಾತ್ಕಾಲಿಗೆ ಗೆಲುವು ನಮ್ಮದಾಗಿರುತ್ತದೆ ಎಂಬುದನ್ನು ಅರಿತು ಕೆಲಸ ಮಾಡಬೇಕಿದೆ. ದುಡ್ಡಿನಿಂದ ಎಲ್ಲವನ್ನು ಅಳೆದು, ಗೆಲ್ಲುತ್ತೇವೆ ಎಂಬ ದುರಂಹಕಾರ ಒಳ್ಳೆಯದಲ್ಲ ಎಂಬುದನ್ನು ಕೆಲವರು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಪಕ್ಷದ ಸಚಿವರ ಮೇಲೆಯೇ ಗುಡುಗಿದರು.
ಕೇವಲ ಒಂದು ಜಾತಿಯ ಬೆಂಬಲ ಇದ್ದರೆ ಪಂಚಾಯ್ತಿ ಸದಸ್ಯ ಕೂಡ ಆಗಲ್ಲ. ಇದನ್ನು ಕೊನೆ ಮಾಡಿ ದ್ವೇಷ ಒಳ್ಳೆಯದಲ್ಲ. ದ್ವೇಷದಿಂದ ರಾಜಕಾರಣ ಮಾಡಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಎಲ್ಲಾ ಜಾತಿ ಜನಾಂಗದವರು ಸೇರಿದರೆ ಅಧಿಕಾರ ಬರಲು ಸಾಧ್ಯ ಎಂದು ಆಗ್ರಹಿಸುತ್ತಿಲ್ಲ. ಸಚಿವರಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ ಎಂದು ತಿಳಿಸಿದರು.