ಮಂಡ್ಯ: ಸುಮಲತಾ ಅಂಬರೀಶ್ ಅವರಿಗೆ ಜೆಡಿಎಸ್ ಪಕ್ಷದಿಂದಲೇ ಲೋಕಸಭಾ ಚುನಾವಣೆಗೆ ಮಂಡ್ಯದಿಂದ ಸ್ಪರ್ಧಿಸಿ ಎಂದು ಪಕ್ಷದ ವರಿಷ್ಠರು ಟಿಕೆಟ್ ನೀಡಿದ್ರು ನೀಡಬಹುದು ಎಂದು ಕಾಂಗ್ರೆಸ್ ಮುಖಂಡ ಚಲುವರಾಯಸ್ವಾಮಿ ಹೇಳಿದ್ದಾರೆ. ಚಲುವರಾಯಸ್ವಾಮಿ ಅವರ ಈ ಹೇಳಿಕೆ ಮಂಡ್ಯ ಕ್ಷೇತ್ರದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಜಿಲ್ಲೆಯ ನಾಗಮಂಗಲದಲ್ಲಿ ಮಾತನಾಡಿದ ಚಲುವರಾಯಸ್ವಾಮಿ ಅವರು, ಸುಮಲತಾ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಮಂಡ್ಯ ಲೋಕಸಭೆಗೆ ಟಿಕೆಟ್ ನೀಡುವಂತೆ ಹೈಕಮಾಂಡ್ ಬಳಿ ಕೇಳಿಕೊಂಡಿದ್ದೇವೆ. ಪಕ್ಷದ ಕಾರ್ಯಕರ್ತರು ಕೂಡ ಸುಮಲತಾ ಅವರಿಗೆ ಟಿಕೆಟ್ ಕೊಡಿಸುವಂತೆ ಮನವಿ ಮಾಡಿದ್ದಾರೆ. ಅಂತಿಮವಾಗಿ ಏನು ಆಗುತ್ತೆ ಎಂದು ಕಾದು ನೋಡಬೇಕಾಗಿದೆ ಎಂದರು.
Advertisement
Advertisement
ಇದೇ ವೇಳೆ ಫೆಬ್ರವರಿ 28 ರಂದು ಸುಮಲತಾ ಅವರು ನಾಗಮಂಗಲದ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಚಲುವರಾಯಸ್ವಾಮಿ ಬೆಂಬಲಿಗರು, ನೀವು ಚುನಾವಣೆಗೆ ನಿಲ್ಲಿ. ನಾವು ಮತ್ತು ಚಲುವರಾಯಸ್ವಾಮಿ ಅವರು ನಿಮಗೆ ಸಪೋರ್ಟ್ ಮಾಡುತ್ತೇವೆ ಎಂಬ ಹೇಳಿಕೆ ಬಗ್ಗೆ ಚಲುವರಾಯ ಸ್ವಾಮಿ ಸ್ಪಷ್ಟನೆ ನೀಡಿದರು. ನನ್ನ ಮೇಲಿನ ನಂಬಿಕೆಯಿಂದ ಬೆಂಬಲಿಗರು ಆ ರೀತಿ ಹೇಳಿರಬಹುದು. ಆ ಬಗ್ಗೆ ನನಗೆ ಗೊತ್ತಿಲ್ಲ ಎಂದರು.
Advertisement
ಮುಖ್ಯಮಂತ್ರಿ ಕುಮಾರಸ್ವಾಮಿಯವರು ಅಂಬರೀಶ್ ಅವರು ಜಿಲ್ಲೆಗೆ ಕೆಲಸ ಮಾಡಿಲ್ಲ ಎಂಬಂತೆ ಮಾತನಾಡಿದ್ದು ನನಗೆ ಆಶ್ಚರ್ಯ ತಂದಿದೆ. ಅಂಬರೀಶ್ ಅವರು ಜೆಡಿಎಸ್‍ಗೆ ಪರೋಕ್ಷವಾಗಿ ಬೆಂಬಲ ನೀಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿ ಎಂದು ಬಯಸಿದ್ದರು. ಆದರೆ ಅಂದು ಕುಮಾರಸ್ವಾಮಿ, ಜೆಡಿಎಸ್‍ಗೆ ಅಂಬರೀಶ್ ಬೇಕಿತ್ತು. ಈಗ ಬೇಡ ಎಂದು ವ್ಯಂಗ್ಯವಾಡಿದ್ರು. ಅಲ್ಲದೇ ಅಂಬರೀಶ್ ಅವರ ಮೇಲಿನ ಗೌರವ ಹೊಂದಿದ್ದರೆ ಸುಮಲತಾ ಅವರಿಗೆ ಜೆಡಿಎಸ್ ಟಿಕೆಟ್ ನೀಡಿದರೂ ನೀಡಬಹುದು ಎಂದು ಚಲುವರಾಯಸ್ವಾಮಿ ಎಂದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv