ಬೆಂಗಳೂರು: ರಾಜ್ಯ ಜೆಡಿಎಸ್ ಪಾಳಯದಲ್ಲಿ ಮತ್ತೆ ಆಪರೇಷನ್ ಭೀತಿ ಶುರುವಾಗಿದೆ. ಆಪರೇಷನ್ ಕಮಲಕ್ಕೆ ಸರ್ಕಾರ ಕಳೆದುಕೊಂಡ ಜೆಡಿಎಸ್ಸಿಗೆ ಈಗ ಆಪರೇಷನ್ ಹಸ್ತದ ಭೀತಿ ಎದುರಾಗಿದೆ.
ಪಕ್ಷದ ಘಟಾನುಘಟಿ ನಾಯಕರೇ ಕಾಂಗ್ರೆಸ್ ಹೆಬ್ಬಾಗಿಲಿಗೆ ಹೋಗಿ ನಿಲ್ಲಲು ಸಿದ್ದತೆ ಆರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರ ಜೊತೆ ತೆರೆಮರೆಯ ಮಾತುಕತೆ ಆರಂಭಿಸಿದ್ದಾರೆ ಬಂಡಾಯ ದಳಪತಿಗಳು.
Advertisement
Advertisement
ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಒಟ್ಟು 18 ಮಾಜಿ ಶಾಸಕರು ಹಾಗೂ ಮಾಜಿ ಸಚಿವರ ದಂಡು ಕೈ ಪಾಳಯದತ್ತ ಮುಖ ಮಾಡಿದ್ದು, ಯುಗಾದಿ ನಂತರ ಅಧಿಕೃತವಾಗಿ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರುವ ಸಂಬಂಧ ಮಾತುಕತೆ ನಡೆದಿದೆ ಎನ್ನಲಾಗುತ್ತಿದೆ.
Advertisement
ಬಸವರಾಜ ಹೊರಟ್ಟಿ, ಮಧು ಬಂಗಾರಪ್ಪ, ರಮೇಶ್ ಬಾಬು, ಗುಬ್ಬಿ ಶ್ರೀನಿವಾಸ್, ಸುರೇಶ್ ಬಾಬು ಸೇರಿದಂತೆ ಒಟ್ಟು 18 ಮುಖಂಡರ ಪಟ್ಟಿ ಸಿದ್ಧವಾಗಿದೆ. ಹೋಗೋರು ಹೋಗಲಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ಬೆನ್ನಲ್ಲೆ ಆಕ್ಟಿವ್ ಆಗಿದ್ದಾರೆ ಬಂಡಾಯ ದಳಪತಿಗಳು.
Advertisement
ಯುಗಾದಿ ಕಳೆಯುತ್ತಿದ್ದಂತೆ ಅಧಿಕೃತ ಕೈ ಪಾಳಯ ಸೇರ್ಪಡೆಗೆ ಅಂತಿಮ ಸುತ್ತಿನ ಮಾತುಕತೆ ನಡೆಸುತ್ತಿರುವ ಹೊರಟ್ಟಿ ಅಂಡ್ ಟೀಂ. ಯುಗಾದಿಗೆ ಜೆಡಿ ಎಸ್ ಕಾಳಯದಲ್ಲಿ ಇನ್ನೊಂದು ಸುತ್ತಿನ ಬಂಡಾಯ ಏಳುವುದು ಬಹುತೇಕ ಖಚಿತವಾಗಿದೆ.