ಬೆಂಗಳೂರು : ಸಿಎಎ, ಎನ್.ಆರ್.ಸಿ. ಮತ್ತು ಎನ್.ಪಿ.ಆರ್.ಗೆ ಜೆಡಿಎಸ್ ಯಾವತ್ತು ವಿರೋಧ ಮಾಡುತ್ತೆ. ಕಾಯ್ದೆ ಜಾರಿಗೆ ಜೆಡಿಎಸ್ ಪ್ರಬಲ ವಿರೋಧ ಮಾಡುತ್ತೆ ಅಂತ ಮಾಜಿ ಸಿಎಂ ಕುಮಾರಸ್ವಾಮಿ ಮತ್ತೆ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನ ಖುದಾಸ್ ಸಾಹೇಬ್ ಈದ್ಗಾ ಹಾಲ್ ನಲ್ಲಿ ಜಾಯಿಂಟ್ ಆಕ್ಷನ್ ಕಮಿಟಿ ಕರ್ನಾಟಕ ಆಯೋಜನೆ ಮಾಡಿದ್ದ ಸಿಎಎ ವಿರೋಧಿ ಸಭೆಯಲ್ಲಿ, ಮುಸ್ಲಿಂ ಮುಖಂಡರು ಜೊತೆ ಸಭೆ ಬಳಿಕ ಅವರು ನಾವು ಕೊನೆವರೆಗೂ ಮುಸ್ಲಿಂ ಸಮುದಾಯದ ಜೊತೆ ಇರುತ್ತೇವೆ ಅಂತ ಹೇಳಿದರು.
Advertisement
ಸಾರ್ವಕರ್ ಬದಲು ಗೋಡ್ಸೆಗೆ ಭಾರತ ರತ್ನ ಕೊಡಿ: ಹೆಚ್‍ಡಿಕೆ ವಿವಾದhttps://t.co/CX3X6nAyGU#HDKumaraswamy #JDS #CAA_NRC #BJP #veersavarkar #NathuramGodse
— PublicTV (@publictvnews) January 18, 2020
Advertisement
ಇಡೀ ಸಭೆಯಲ್ಲಿ ಕುಮಾರಸ್ವಾಮಿ ಬಿಜೆಪಿ ವಿರುದ್ಧ ಕಿಡಿಕಾರಿದರು. ದೇಶದ ಸ್ವಾತಂತ್ರ್ಯಕ್ಕೆ ಬಿಜೆಪಿ, ಆರ್.ಎಸ್.ಎಸ್ ಕೊಡುಗೆ ಏನು ಇಲ್ಲ. ಕೇವಲ ಹಿಂದುತ್ವ ಅಜೆಂಡಾ ಇಟ್ಟುಕೊಂಡು ಬಿಜೆಪಿ ಕೆಲಸ ಮಾಡ್ತಿದೆ. ಈಗ ಬಿಜೆಪಿ ಸಿಎಎ ಜಾರಿಗೆ ತರೋ ಮೂಲಕ ಮುಸ್ಲಿಂ ವಿರುದ್ಧ ಕೆಲಸ ಮಾಡುತ್ತಿದೆ ಅಂತ ಆಕ್ರೋಶ ಹೊರ ಹಾಕಿದ್ರು.
Advertisement
ಈ ಕಾಯ್ದೆ ವಿರುದ್ಧ ಎಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕು. ಮುಸ್ಲಿಂ ಸಮುದಾಯದ ಮೇಲೆ ಕೆಟ್ಟು ಹೆಸರು ತರುವ ಕೆಲಸ ಬಿಜೆಪಿ ಮಾಡುತ್ತಿದೆ. ಬಿಜೆಪಿ ಒಂದು ಸಮುದಾಯವನ್ನ ಟಾರ್ಗೆಟ್ ಮಾಡಲು ಹೀಗೆ ಮಾಡುತ್ತಿದೆ ಎಂದು ಆರೋಪಿಸಿದರು.
Advertisement
ಪ್ರಧಾನಿ ಮೋದಿ ಅವರು ಜಿಯಾ ವುಲ್ಲಾ ಮಾದರಿಯಲ್ಲಿ ಕೆಲಸ ಮಾಡ್ತಿದ್ದಾರೆ. ಈ ಕಾಯ್ದೆ ಜಾರಿಯಾದ್ರೆ ದೇಶದಾದ್ಯಂತ 7.5 ಕೋಟಿ ಜನರಿಗೆ ಅನ್ಯಾಯ ಆಗುತ್ತೆ. ಸಂವಿಧಾನವನ್ನು ತಿರುಚುವ ಕೆಲಸ ಬಿಜೆಪಿ ಮಾಡುತ್ತಿದ್ದು, ಇದಕ್ಕೆ ಜೆಡಿಎಸ್ ಬೆಂಬಲ ಕೊಡಲ್ಲ. ಸಿಎಎ ವಿರೋಧಿ ಹೋರಾಟಕ್ಕೆ ಜೆಡಿಎಸ್ ಸದಾ ಬೆಂಬಲ ನೀಡುತ್ತೆ ಅಂತ ಭರವಸೆ ನೀಡಿದರು.