ಮಂಡ್ಯ: ಜೆಡಿಎಸ್ ಎಂಎಲ್‍ಸಿ ಕೆ.ಟಿ.ಶ್ರೀಕಂಠೇಗೌಡ ಗೂಡಾಂಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪು ಒಪ್ಪಿಕೊಳ್ಳದೇ ಪತ್ರಕರ್ತರ ವಿರುದ್ಧವೇ ದೂರು ದಾಖಲಿಸಿದ್ದಾರೆ.
ಎಂಎಲ್‍ಸಿ ಕೆ.ಟಿ.ಶ್ರೀಕಂಠೇಗೌಡ ಹಾಗೂ ಪುತ್ರ ನಾಲ್ವರು ಪತ್ರಕರ್ತರ ವಿರುದ್ಧ ದೂರು ದಾಖಲಿಸಿದ್ದಾರೆ. ಮಂಡ್ಯದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಪತ್ರಕರ್ತರಿಗೆ ಕೋವಿಡ್ ಟೆಸ್ಟ್ ಮಾಡಲಾಗುತ್ತಿತ್ತು. ಈ ವೇಳೆ ಎಂಎಲ್‍ಸಿ ಕೆ.ಟಿ.ಶ್ರೀಕಂಠೇಗೌಡ ಹಾಗೂ ಪುತ್ರ ಬಂದು ಇಲ್ಲಿ ಕೋವಿಡ್ ಟೆಸ್ಟ್ ಮಾಡಬಾರದು ಎಂದು ಗಲಾಟೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಶ್ರೀಕಂಠೇಗೌಡರಿಂದ ನಾಲ್ವರು ಪತ್ರಕರ್ತರ ವಿರುದ್ಧ ಪ್ರತಿ ದೂರು ದಾಖಲಿಸಿದ್ದಾರೆ.
Advertisement
Advertisement
ಹಲ್ಲೆ ಮತ್ತು ತೇಜೋವಧೆ ಮಾಡಲು ಯತ್ನಿಸಿದರೆಂದು ಶ್ರೀಕಂಠೇಗೌಡರು ದೂರು ನೀಡಿದ್ದಾರೆ. ಪಶ್ಚಿಮ ಠಾಣೆಯಲ್ಲಿ ಎಂಎಲ್‍ಸಿ ಶ್ರೀಕಂಠೇಗೌಡ ದೂರು ಆಧರಿಸಿ ಪತ್ರಕರ್ತರ ಮೇಲೆ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.
Advertisement
ಸದ್ಯಕ್ಕೆ ಪತ್ರಕರ್ತರ ಸಂಘ ಕೋರ್ಟ್ ಮೊರೆ ಹೋಗಲು ಚಿಂತನೆ ನಡೆಸಿದೆ. ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಸೆಕ್ಷನ್‍ಗಳ ಅಡಿ ದೂರು ದಾಖಲಿಸಿಕೊಳ್ಳಲು ಕೋರ್ಟಿಗೆ ಮನವಿ ಮಾಡಲಿದ್ದಾರೆ. ಮಂಡ್ಯ ಪತ್ರಕರ್ತರ ಸಂಘದಿಂದ ಖಾಸಗಿ ದೂರು ಸಲ್ಲಿಕೆಗೆ ಚಿಂತನೆ ಮಾಡಲಾಗಿದ್ದು, ಜಿಲ್ಲಾಡಳಿತದ ಮೌನ ನಡೆಯಿಂದ ಬೇಸತ್ತು ಪತ್ರಕರ್ತರು ಕೋರ್ಟ್ ಮೊರೆಹೋಗಲಿದ್ದಾರೆ.
Advertisement
ಪೊಲೀಸರು ದೂರು ದಾಖಲಿಸಿಕೊಳ್ಳುವ ವಿಚಾರದಲ್ಲೂ ನಿರ್ಲಕ್ಷ್ಯ ತೋರಿದ್ದರು. ಈ ಘಟನೆ ನಡೆದ ದಿನ ನಾಲ್ವರು ಪರ್ತಕರ್ತರ ದೂರು ನೀಡಿದ್ದರು. ಆದರೆ ಈ ಪೈಕಿ ಓರ್ವ ಪತ್ರಕರ್ತನ ದೂರು ಆಧರಿಸಿ ಎಂಎಲ್‍ಸಿ ಮತ್ತು ಅವರ ಪುತ್ರನ ವಿರುದ್ಧ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದಕ್ಕೆ ಎಫ್‍ಐಆರ್ ದಾಖಲಿಸಿದ್ದರು.
ಕೊರೊನಾ ವಾರಿಯರ್ಸ್ ಮೇಲೆ ದಾಳಿಗಳು ನಡೆದ್ರೆ, ಅವ್ರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ರೆ ಆರು ತಿಂಗಳಿಂದ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತ್ತು. ರಾಜ್ಯ ಸರ್ಕಾರ ಕೂಡ 3 ವರ್ಷ ಜೈಲು ಶಿಕ್ಷೆ ಅಂತ ಸುಗ್ರೀವಾಜ್ಞೆ ಹೊರಡಿಸಿದೆ. ಆದ್ರೆ ಇದು ಗೊತ್ತಿದ್ದರೂ ಜನರಿಗೆ ತಿಳುವಳಿಕೆ ಹೇಳಬೇಕಾದ ವಿಧಾನ ಪರಿಷತ್ ಸದಸ್ಯ ಶ್ರೀಕಂಠೇಗೌಡ ಗಲಾಟೆ ಮಾಡಿದ್ದಕ್ಕೆ ಎಲ್ಲೆಡೆ ವಿರೋಧ ವ್ಯಕ್ತವಾಗಿತ್ತು. ಗಲಾಟೆ ಮಾಡಿದ ದಿನವೇ ಶ್ರೀಕಂಠೇಗೌಡ ಮತ್ತು ಪುತ್ರ ಕೃಷಿಕ್ ಗೌಡನಿಗೆ ಜೆಎಂಎಫ್‍ಸಿ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು.
ಆರೋಪಿಗಳು ಯಾರು?
ಎ1 – ಇತರರು (ಅಪರಿಚಿತರು ಎಂದು ಉಲ್ಲೇಖಿಸಲಾಗಿದೆ)
ಎ2 – ಶ್ರೀಕಂಠೇಗೌಡ, ಎಂಎಲ್‍ಸಿ
ಎ3 – ಕೃಷಿಕ್ ಗೌಡ, ಶ್ರೀಕಂಠೇಗೌಡರ ಪುತ್ರ
ಎ4 – ಚಂದ್ರಕಲಾವತಿ, ಶ್ರೀಕಂಠೇಗೌಡರ ಬೆಂಬಲಿಗ
ಎ5 – ಜಗದೀಶ್, ಶ್ರೀಕಂಠೇಗೌಡರ ಬೆಂಬಲಿಗ
ಎ6 – ರಾಜು@ ಪಿಳ್ಳೆ, ಶ್ರೀಕಂಠೇಗೌಡರ ಬೆಂಬಲಿಗ
ಯಾವ್ಯಾವ ಸೆಕ್ಷನ್ ಮೇಲೆ ಕೇಸ್?
* 143 – ಅಕ್ರಮವಾಗಿ ಗುಂಪು ಸೇರುವಿಕೆ
* 149 – ಉದ್ದೇಶಪೂರ್ವಕವಾಗಿ ದೊಂಬಿ
* 341 – ಉದ್ದೇಶಪೂರ್ವಕವಾಗಿ ಕರ್ತವ್ಯಕ್ಕೆ ಅಡ್ಡಿಪಡಿಸುವುದು
* 323 – ಉದ್ದೇಶಪೂರ್ವಕವಾಗಿ ಹಾನಿ ಯತ್ನ
* 501 – ಜನರನ್ನು ಪ್ರಚೋದಿಸುವ ರೀತಿಯ ನಡವಳಿಕೆ
* 269 – ಜೀವ ಹಾನಿ ಉಂಟು ಮಾಡುವ ರೋಗ ಹರಡಲು ಯತ್ನ
* 270 – ರೋಗ ಹರಡುವ ಉದ್ದೇಶದಿಂದ ತಪ್ಪು ಮಾಹಿತಿ
* 504 – ಜೀವ ಬೆದರಿಕೆ
* ಎನ್‍ಡಿಎಂಎ ಕಾಯ್ದೆ(ವಿಪತ್ತು ನಿರ್ವಹಣಾ ಕಾಯ್ದೆ 2005) ಸೆಕ್ಷನ್ 51 – ಸಕಾರಣ ಇಲ್ಲದೇ ಕರ್ತವ್ಯಕ್ಕೆ ಅಡ್ಡಿ ಯತ್ನ