ಸರ್ಕಾರದ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಶರವಣ ವಿರೋಧ

Public TV
2 Min Read
SHARAVANA

ಬೆಂಗಳೂರು: ಬಿಜೆಪಿ ಸರ್ಕಾರದ ಬಹು ನಿರೀಕ್ಷಿತ ಸಾಮೂಹಿಕ ವಿವಾಹ ಕಾರ್ಯಕ್ರಮ “ಸಪ್ತಪದಿ”ಗೆ ವಿರೋಧಗಳು ಪ್ರಾರಂಭವಾಗಿದೆ. ದೇವಾಲಯಕ್ಕೆ ಜನರು ಕೊಡೋ ಹಣದಲ್ಲಿ ಬಿಜೆಪಿ ಸರ್ಕಾರದ ಕಾರ್ಯಕ್ರಮ ಮಾಡೋದು ಬೇಡ ಅಂತ ವಿಧಾನ ಪರಿಷತ್ ಸದಸ್ಯ ಶರವಣ ನೇರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.

BJP SULLAI

ವಿಧಾನ ಪರಿಷತ್‍ನ ಅಧಿವೇಶನದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಶರವಣ, ದೇವಾಲಯದ ಅಭಿವೃದ್ಧಿಗೆ ಜನ ಹುಂಡಿಗಳಲ್ಲಿ ಹಣ ಹಾಕ್ತಾರೆ. ಅ ಹಣವನ್ನು ದೇವಾಲಯ ಅಭಿವೃದ್ಧಿಗೆ ಮಾತ್ರ ಬಳಸಬೇಕು. ಅದು ಬಿಟ್ಟು ನಿಮ್ಮ ಯೋಜನೆಗೆ ಹಣ ಬಳಸಿಕೊಳ್ಳೋದು ಸರಿಯಲ್ಲ ಅಂತ ಸರ್ಕಾರದ ಕ್ರಮವನ್ನ ವಿರೋಧಿಸಿದರು. ಅಲ್ಲದೆ ದೇವಾಲಯದ ದುಡ್ಡನ್ನ ಬಳಸಿಕೊಂಡರೆ ಅರ್ಚಕರಿಗೆ ಸಂಬಳ ಕೊಡೋದು ಹೇಗೆ ಅಂತ ಪ್ರಶ್ನೆ ಮಾಡಿದ್ರು. ಉಚಿತ ಸಾಮೂಹಿಕ ವಿವಾಹ ಮಾಡೋದಾದ್ರೆ ಸರ್ಕಾರವೇ ಹಣ ಬಿಡುಗಡೆ ಮಾಡಲಿ ಅಂತ ಸರ್ಕಾರವನ್ನ ಒತ್ತಾಯಿಸಿದರು. ಇದನ್ನೂ ಓದಿ: ಸರ್ಕಾರದಿಂದ ಸಾಮೂಹಿಕ ವಿವಾಹ ಯೋಜನೆಗೆ ಅನುಷ್ಠಾನ

marriage 2

ಪರಿಷತ್ ಸದಸ್ಯ ಶರವಣರ ವಿರೋಧಕ್ಕೆ ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಬಡವರ ಕಲ್ಯಾಣ ಕಾರ್ಯಕ್ರಮಕ್ಕೆ ಹೀಗೆ ವಿರೋಧ ಮಾಡೋದು ಸರಿಯಲ್ಲ ಅಂತ ತಿಳಿಸಿದರು. ಸಾಮೂಹಿಕ ವಿವಾಹಕ್ಕಾಗಿ ರಾಜ್ಯದ “ಎ” ದರ್ಜೆಯ 100 ದೇವಾಲಯಗಳನ್ನ ಗುರುತಿಸಲಾಗಿದೆ. ಆರ್ಥಿಕವಾಗಿ ಸಧೃಡವಾಗಿರೋ ದೇವಾಲಯಗಳಲ್ಲಿ ವಿವಾಹ ಕಾರ್ಯಕ್ರಮ ಮಾಡಲಾಗ್ತಿದೆ. ದೇವಾಲಯ ಅಭಿವೃದ್ಧಿಗೆ ಇದರಿಂದ ಯಾವುದೇ ತೊಂದರೆ ಆಗೋದಿಲ್ಲ. ಒಂದು ವೇಳೆ ಹಣ ಸಮಸ್ಯೆ ಬಂದರೆ ಸರ್ಕಾರವೇ ಹಣ ನೀಡಲಿದೆ ಅಂತ ಸ್ಪಷ್ಟಪಡಿಸಿದರು. ಇದನ್ನೂ ಓದಿ: ಬಿಎಸ್‍ವೈ ಸರ್ಕಾರದಿಂದ `ಬಡವರ ಕಲ್ಯಾಣ’ – ಸರ್ಕಾರಿ ಮದ್ವೆಗೆ ಷರತ್ತುಗಳು ಅನ್ವಯ

marriage 1

ಸಾಮೂಹಿಕ ವಿವಾಹ ಕಾರ್ಯಕ್ರಮ ಏಪ್ರಿಲ್ 26 ಮತ್ತು ಮೇ 24 ರಂದು ನಡೆಯಲಿದೆ. ಹೀಗಾಗಿ ಮದುವೆ ಆಗೋ ಜೋಡಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸಾಮೂಹಿಕ ವಿವಾಹಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಒಂದೊಂದು ದೇವಾಲಯಗಳಲ್ಲಿ 2 ಸಾವಿರಕ್ಕೂ ಹೆಚ್ಚು ಅರ್ಜಿ ಬಂದಿವೆ ಅಂತ ಸಚಿವರು ಮಾಹಿತಿ ಕೊಟ್ಟರು. ಮದುವೆ ಆದ ತಕ್ಷಣದ ದೇವಾಲಯದಲ್ಲೆ ಮದುವೆ ರಿಜಿಸ್ಟರ್ ಮಾಡೋ ಕ್ರಮವನ್ನು ಸರ್ಕಾರ ತೆಗೆದುಕೊಂಡಿದೆ. ವಿವಾಹವಾಗೋ ಪ್ರತಿ ಜೋಡಿಗೆ 55 ಸಾವಿರ ಪ್ರೊತ್ಸಾನ ಧನ ಸರ್ಕಾರ ನೀಡುತ್ತಿದೆ. ವರನಿಗೆ ಹೂವಿನ ಹಾರ, ಪಂಚೆ, ಶರ್ಟ್ ಮತ್ತು ಶಲ್ಯಕ್ಕಾಗಿ 5 ಸಾವಿರ ಪ್ರೋತ್ಸಾಹ ಧನ ನೀಡಲಾಗ್ತಿದೆ. ವಧುವಿಗೆ ಹೂವಿನ ಹಾರ, ಧಾರೆ ಸೀರೆ ಮತ್ತು ರವಿಕೆಗೆ 10 ಸಾವಿರ ನೀಡಲಾಗುತ್ತಿದೆ. ವಧುವಿಗೆ 8 ಗ್ರಾಂ ತೂಕ ಚಿನ್ನದ ತಾಳಿ ಮತ್ತು ಎರಡು ಚಿನ್ನದ ಗುಂಡುಗಳನ್ನ 40 ಸಾವಿರ ವೆಚ್ಚದಲ್ಲಿ ನೀಡಲಾಗುತ್ತಿದೆ. ಇದನ್ನೂ ಓದಿ: ‘ಸಪ್ತಪದಿ’ ಸಾಮೂಹಿಕ ವಿವಾಹಕ್ಕೆ ಪೂರ್ವ ಸಿದ್ಧತೆ- ‘ಎ’ ದರ್ಜೆಯ ದೇವಸ್ಥಾನಗಳಿಗೆ ಸಚಿವರ ಭೇಟಿ

Share This Article
Leave a Comment

Leave a Reply

Your email address will not be published. Required fields are marked *