ಬೆಂಗಳೂರು: ವಿಧಾನಸೌಧದಲ್ಲಿ (Vidhanasoudha) ನಮಾಜ್ ಮಾಡಲು ಅವಕಾಶ ಮಾಡಿಕೊಡಿ ಎಂದು ಜೆಡಿಎಸ್ ಪರಿಷತ್ (JDS Parishad) ಸದಸ್ಯ ಫಾರೂಕ್ (Farooq) ಒತ್ತಾಯ ಮಾಡಿದ್ದಾರೆ.
ವಿಧಾನಸೌಧದಲ್ಲಿ ನಮಗೆ ನಮಾಜ್‍ಗೆ ಕೊಠಡಿ ವ್ಯವಸ್ಥೆ ಮಾಡಿಕೊಡಿ ಎಂದು ವಿಧಾನ ಪರಿಷತ್‍ನಲ್ಲಿ ಸಭಾಪತಿಗಳ ಗಮನಕ್ಕೆ ತಂದಿದ್ದಾರೆ.
ಈ ವೇಳೆ ಪ್ರತಿಕ್ರಿಯಿಸಿದ ಸಚಿವ ಹೆಚ್.ಕೆ ಪಾಟೀಲ್, ಸಭಾದ್ಯಕ್ಷರ ಕೊಠಡಿಯಲ್ಲಿ ಸಭೆ ಕರೆದ ವೇಳೆ ನಾಯಕರ ಮಾತುಗಳನ್ನು ಕೇಳಿ, ಅಧ್ಯಕ್ಷರು ಏನು ಅಪೇಕ್ಷೆ ಮಾಡುತ್ತಾರೆ ಎಂದು ಒಂದು ನಿರ್ಣಯ ಮಾಡಲು ಸರ್ಕಾರ ತೀರ್ಮಾನಿಸುತ್ತದೆ ಎಂದರು. ಇದನ್ನೂ ಓದಿ: ಸರ್ಕಾರಿ ಶಾಲಾ ಶಿಕ್ಷಕರಿಗೆ ಡ್ರೆಸ್ ಕೋಡ್ ಚರ್ಚಿಸಿ ತೀರ್ಮಾನ: ಮಧು ಬಂಗಾರಪ್ಪ
ಇತ್ತ ಶಾಲಾ ಪಠ್ಯದಲ್ಲಿ ಜಾತ್ಯಾತೀತ ಪಠ್ಯ ತರಬೇಕು ಎಂದ ಅಬ್ದುಲ್ ಜಬ್ಬರ್ ಮಾತಿಗೆ ವಿರೋಧ ವ್ಯಕ್ತಪಡಿಸಿದ ಬಿಜೆಪಿ ಎಂಎಲ್‍ಸಿ ನಾರಾಯಣಸ್ವಾಮಿ. ಯಾರು ಜಾತ್ಯಾತೀತ ಪಠ್ಯ ತಂದಿದ್ದರು. ಯಾರು ಏನು ಸೇರಿಸಿದ್ರು ಅಂತ ಚರ್ಚೆ ಆಗಲಿ ಎಂದು ಒತ್ತಾಯಿಸಿದ್ರು. ಇದಕ್ಕೆ ಪ್ರತಿಕ್ರಿಯಿಸಿದ ಅಬ್ದುಲ್ ಜಬ್ಬರ್, ಜಾತ್ಯಾತೀತ ಅಂದ್ರೆ ನಿಮಗೆ ಯಾಕೆ ಚುರ್ ಅನ್ನುತ್ತೆ. ಜಾತ್ಯಾತೀತ ಕಂಡರೆ ಆಗೊಲ್ಲವಾ ಅಂದಿದ್ದಾರೆ. ಇಬ್ಬರನ್ನೂ ಸಭಾಪತಿ ಸಮಾಧಾನ ಪಡಿಸಿದ್ದಾರೆ.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]