ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಮ್ ಸಮುದಾಯ (Muslim Community) ತಮ್ಮ ಪಕ್ಷದ ಕೈಹಿಡಿಯಲಿಲ್ಲ ಎಂಬ ಕಾರಣಕ್ಕೆ ಬೇಸತ್ತಿದ್ದ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಇತ್ತೀಚಿಗೆ ಬಿಜೆಪಿ (BJP) ಜೊತೆ ಅಧಿಕೃತವಾಗಿ ಮೈತ್ರಿ ಮಾಡಿಕೊಂಡಿದ್ದರು. ಬಿಜೆಪಿ (BJP) ಸಖ್ಯದ ಪರಿಣಾಮವೋ ಏನೋ ಇದೀಗ ಮಾಜಿ ಸಿಎಂ ಕುಮಾರಸ್ವಾಮಿ ಹಿಂದುತ್ವದ (Hindutva) ಹಾದಿ ಹಿಡಿದಿದ್ದಾರೆ.
ಒಕ್ಕಲಿಗ+ಲಿಂಗಾಯತ ಸಮುದಾಯದ ಜೊತೆಗೆ ಎಲ್ಲಾ ಹಿಂದೂಗಳ ಮತಗಳು ಲಭಿಸಿದರೆ ಚುನಾವಣೆಯಲ್ಲಿ ಲಾಭವಾಗಬಹುದು ಎಂಬ ಲೆಕ್ಕಾಚಾರದೊಂದಿಗೆ ದತ್ತಮಾಲೆ ಧರಿಸುವ ಸುಳಿವನ್ನು ಭಾನುವಾರ ಕುಮಾರಸ್ವಾಮಿ ನೀಡಿದ್ದರು. ಈಗ ಕುಮಾರಸ್ವಾಮಿ ಅಷ್ಟೇ ಅಲ್ಲ, ಜೆಡಿಎಸ್(JDS) ಶಾಸಕರೆಲ್ಲಾ ದತ್ತಮಾಲೆ (Datta Mala) ಧರಿಸುವುದು ಖಚಿತವಾಗಿದೆ. ಇದನ್ನೂ ಓದಿ: ಹಾಸನ ತಹಶೀಲ್ದಾರ್ ಶ್ವೇತಾ ವರ್ಗಾವಣೆಗೆ ಕೆಎಟಿ ತಡೆ
Advertisement
Advertisement
ಡಿ.6 ರಂದು ದತ್ತಮಾಲೆ ಧರಿಸಲಿರುವ ಜೆಡಿಎಸ್ ಶಾಸಕರು ದತ್ತಪೀಠಕ್ಕೆ ಭೇಟಿ ನೀಡಲು ಪ್ಲಾನ್ ಮಾಡಿದ್ದಾರೆ. ಇತ್ತೀಚಿಗೆ ಪಕ್ಷದ ಶಾಸಕರೊಂದಿಗೆ ಕುಮಾರಸ್ವಾಮಿ ಹಾಸನಾಂಬೆಯ ದರ್ಶನ ಪಡೆದಿದ್ದರು. ಇದನ್ನೂ ಓದಿ: ಮುಸ್ಲಿಂ ಸಮುದಾಯದ 4% ಮೀಸಲಾತಿಯನ್ನೂ ತೆಗೆದುಹಾಕ್ತೀವಿ – ಅಮಿತ್ ಶಾ
Advertisement
ಕುಮಾರಸ್ವಾಮಿಯ ಹಿಂದುತ್ವ ಜಪ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ವಿಚಾರ ಕಾಂಗ್ರೆಸ್‌ಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಇದನ್ನು ವಿರೋಧಿಸುವಂತೆಯೂ ಇಲ್ಲ, ವಿರೋಧಿಸದೇ ಇರುವಂತೆಯೂ ಇಲ್ಲ ಎಂಬ ಪರಿಸ್ಥಿತಿಗೆ ಬಂದಿದೆ.
Advertisement
ಕುಮಾರಸ್ವಾಮಿ ದತ್ತಮಾಲೆ ಧರಿಸುವ ನಿಲುವನ್ನು ಬಿಜೆಪಿ ಜೊತೆಗೆ ವಿಶ್ವಹಿಂದೂ ಪರಿಷತ್, ಬಜರಂಗದಳ ಸ್ವಾಗತಿಸಿವೆ. ಬಜರಂಗದಳ ಮತ್ತು ವಿಹೆಚ್‌ಪಿ ಅಧಿಕೃತವಾಗಿ ದತ್ತಮಾಲಾ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಕುಮಾರಸ್ವಾಮಿಗೆ ಆಹ್ವಾನ ನೀಡುವ ಸಂಭವ ಇದೆ. ಇದಕ್ಕೆ ಪೂರಕವಾಗಿ, ಧರ್ಮ ರಕ್ಷಣೆಗೆ ಹೋರಾಡುವ ಸುಳಿವನ್ನು ಕುಮಾರಸ್ವಾಮಿ ನೀಡಿದ್ದರು.