ಕೋಲಾರ: ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್ ಅಡ್ಡ ಮತದಾನ ಆರೋಪ ಪ್ರಕರಣದ ಬಳಿಕ ಎಸ್.ಆರ್ ಶ್ರೀನಿವಾಸ್ ಮತ್ತು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅಭಿಮಾನಿಗಳ ಮಧ್ಯೆ ತಿಥಿ ಕಾರ್ಡ್ ಪೋಸ್ಟ್ ವಾರ್ ಆರಂಭವಾಗಿದೆ.
ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್ ಅಡ್ಡ ಮತದಾನ ಮಾಡಿದ ಬಳಿಕ ಜೆಡಿಎಸ್ ಅಭಿಮಾನಿಗಳು ಶ್ರೀನಿವಾಸ್ ಫೋಟೋ ಬಳಸಿಕೊಂಡು ತಿಥಿ ಕಾರ್ಡ್ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದರು. ಇದನ್ನು ಗಮನಿಸಿದ ಶ್ರೀನಿವಾಸ್ ಅಭಿಮಾನಿಗಳು ಹೆಚ್.ಡಿ ಕುಮಾರಸ್ವಾಮಿ ಅವರ ತಿಥಿಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಹಗೆ ತೀರಿಸಿಕೊಂಡಿದ್ದಾರೆ. ಇದೀಗ ಇವರಿಬ್ಬರ ತಿಥಿ ಕಾರ್ಡ್ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಸಾವರ್ಕರ್ ಫೋಟೋ ವಿವಾದ – ಮಂಗಳೂರಲ್ಲಿ 6 ವಿದ್ಯಾರ್ಥಿಗಳ ವಿರುದ್ಧ ಕೇಸ್
ಇತ್ತ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ ಆರೋಪದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್.ಆರ್ ಶ್ರೀನಿವಾಸ್, ಕುಮಾರಸ್ವಾಮಿ ಏನು ಉತ್ತಮನಾ. ಯಾವುದರಲ್ಲಿ ಅವನು ಉತ್ತಮ. ಬೆಳಗ್ಗೆ ಒಂದು ಹೇಳ್ತಾನೆ, ಮಧ್ಯಾಹ್ನ ಒಂದು ಹೇಳ್ತಾನೆ, ಸಂಜೆ ಒಂದು ಹೇಳ್ತಾನೆ. ನಾನು ಮತ ಹಾಕುವಾಗ ಕ್ಲಿಯರ್ 3 ರಿಂದ 4 ನಿಮಿಷ ಪೇಪರ್ ಇಡ್ಕೊಂಡು ತೋರಿಸಿದ್ದೇನೆ.
ಅವಾಗ ನೋಡ್ಬೇಕಿತ್ತು. ಅವನೇನು ಕತ್ತೆ ಕಾಯ್ತಿದ್ದನಾ. ತೆಗಿ ಹೆಬ್ಬಟ್ಟನ್ನು ಅನ್ನಬೇಕಿತ್ತು. ನಾನು ಸರಿಯಾಗಿಯೇ ಪೇಪರ್ ತೊರಿಸಿದ್ದೇನೆ. ಅವನು ಎಜುಕೇಟೆಡ್ ಅಲ್ವಾ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಕ್ಷಮೆ ಕೇಳುವ ಅಗತ್ಯವಿಲ್ಲ, ನೂಪುರ್ ಶರ್ಮಾರನ್ನು ಕಾನೂನಿನ ಪ್ರಕಾರ ಬಂಧಿಸಿ: ಓವೈಸಿ
ಹೆಚ್‍ಡಿಕೆ ಮನೆಯವರೇ ನಾಟಕ ಮಾಡ್ಕೊಂಡು ನನ್ನನ್ನು ಮುಗಿಸ್ಬೇಕು ಅಂತ ಅವರ ಹಿತೈಶಿಗಳಿಂದ ಕ್ರಾಸ್ ವೋಟ್ ಮಾಡ್ಸಿ. ನನ್ನ ಮೇಲೆ ಗೂಬೆ ಕುರ್ಸೋ ಕೆಲಸ ಮಾಡಿದ್ದಾರೆ. ನನಗೂ ಕುಮಾರಸ್ವಾಮಿಗೂ ಆಗಲ್ಲ. ನನ್ನ ವಿರುದ್ಧ ಬೇರೆ ಅಭ್ಯರ್ಥಿಗಳನ್ನು ಹಾಕಿ. ಬೇರೆ ಕಸರತ್ತು ಮಾಡಿದ್ದಾರೆ. ನನ್ನನ್ನ ಸೋಲಿಸ್ಲೇಬೇಕು ಅಂತ ಸಂಚು ರೂಪಿಸಿದ್ದಾರೆ ಎಂದು ಕುಮಾರಸ್ವಾಮಿ ವಿರುದ್ಧ ತಿರುಗಿ ಬಿದ್ದಿದ್ದಾರೆ.