ಹಾಸನ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಾಗಲೇ ಹಾಸನ ಜಿಲ್ಲೆಯಲ್ಲಿ ಪಕ್ಷಾಂತರ ಪಾಲಿಟಿಕ್ಸ್ ಮಾತು ಕೇಳಿಬರುತ್ತಿದೆ. ಅರಸೀಕೆರೆಯ ಜೆಡಿಎಸ್ (JDS) ಶಾಸಕ ಕೆ.ಎಂ.ಶಿವಲಿಂಗೇಗೌಡ (Shivalingegowda) ಅವರು ಪಕ್ಷ ತೊರೆಯುವುದು ಗ್ಯಾರಂಟಿ ಎನ್ನಲಾಗುತ್ತಿದೆ.
ಗ್ರಾಮ ಪಂಚಾಯಿತಿ ಸದಸ್ಯೆ ಪತಿ ವಾಸು ಎಂಬವರಿಗೆ ಹಣಕ್ಕಾಗಿ ಧಮ್ಕಿ ಹಾಕಿರುವ ಆಡಿಯೋ ವೈರಲ್ ಆಗಿದೆ. ಇದರಲ್ಲಿ ಶಿವಲಿಂಗೇಗೌಡರು ಜೆಡಿಎಸ್ ತೊರೆಯುವ ಬಗ್ಗೆ ಸೂಚನೆ ಕೊಟ್ಟಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಮೋದಿ ಮೆಗಾ ರೋಡ್ ಶೋಗೆ ಪ್ಲಾನ್
ಜಕ್ಕನಹಳ್ಳಿ ಗ್ರಾಪಂ ಸದಸ್ಯೆ ಸೌಮ್ಯ ಪತಿ ವಾಸು ಜೊತೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿರುವ ಆಡಿಯೋದಲ್ಲಿ, “ನಾನು ಕೊಟ್ಟಿದ್ದ 50 ಸಾವಿರ ಹಣವನ್ನು ವಾಪಸ್ ಕೊಡು. ನೀನು ಆ ಕಡೆ (ಜೆಡಿಎಸ್) ಇದ್ದೀಯಾ. ನನ್ನ ಪರವಾಗಿ ಇಲ್ಲ. ಹೀಗಾಗಿ ಹಣ ತಂದು ಕೊಡು” ಎಂದು ಧಮ್ಕಿ ಹಾಕಿದ್ದಾರೆ.
ಅದಕ್ಕೆ ವಾಸು, “ನಾನೇನಾದ್ರೂ ನಿನ್ ಹತ್ರ ಹಣ ಕೇಳಿದ್ನಾ ಅಣ್ಣ. ಈಗ ನನ್ ಹತ್ರ ಇಲ್ಲ. ಏನ್ ಮಾಡ್ಕೋತೀಯಾ ನೀನು? ಜೈಲಿಗೆ ಕಳಿಸ್ತೀಯಾ, ಕೊಲೆ ಮಾಡಿಸ್ತೀಯಾ? ಮಾಡಿಸ್ಕೊ. ಈಗ ನನ್ನ ಬಳಿ ಹಣ ಇಲ್ಲ” ಎಂದು ಎದುರುತ್ತರ ನೀಡಿದ್ದಾರೆ. ಇದಕ್ಕೆ ಶಿವಲಿಂಗೇಗೌಡರು ಮಾತನಾಡಿ, “ನೀನು ದೊಡ್ಡ ಮನುಷ್ಯ ಅಂತಾ ಜೈಲಿಗೆ ಕಳಿಸ್ತಾರಾ? ಅದೆಲ್ಲ ನನಗೆ ಗೊತ್ತಿಲ್ಲ, ನನ್ ಹಣ ನನಗೆ ತಂದು ಕೊಡು” ಎಂದು ಕೇಳಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿ ಅಂಕಲ್ ನಮ್ಗೆ ಮೇಲ್ಸೇತುವೆ ಬೇಡ- ಸಿಎಂಗೆ 2 ಸಾವಿರ ವಿದ್ಯಾರ್ಥಿಗಳಿಂದ ಪತ್ರ
ನಾನು ಯಾವ ಪಕ್ಷದಲ್ಲಿ ಇದ್ದರೂ ನೀನು ನನ್ನ ಜೊತೆ ಇರಬೇಕು ಅಂತಾ ವಾಸುಗೆ ಶಿವಲಿಂಗೇಗೌಡರು ದುಡ್ಡು ಕೊಟ್ಟಿದ್ದರು ಎನ್ನಲಾಗಿದೆ. ಈಗ ವಾಸು ಜೆಡಿಎಸ್ ಪರವೇ ಇದ್ದು, ಶಿವಲಿಂಗೇಗೌಡರು ಪಕ್ಷ ಬಿಡಲು ತೀರ್ಮಾನಿಸಿದ್ದಾರೆ. ವಾಸು ತನ್ನ ಪರ ಇಲ್ಲ ಎಂದು ಹಣ ವಾಪಸ್ ನೀಡುವಂತೆ ಕೇಳಿದ್ದಾರೆ. ಈ ಸಂಭಾಷಣೆಯ ಆಡಿಯೋ ವೈರಲ್ ಆಗಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k