ವಿಜಯಪುರ: ದೇವರಹಿಪ್ಪರಗಿ (Devarahipparagi) ಕ್ಷೇತ್ರದ ಜೆಡಿಎಸ್ (JDS) ಶಾಸಕ ರಾಜುಗೌಡ ಪಾಟೀಲ್ (Rajugouda Patil) ಅವರ ತಾಯಿ ವಯೋಸಹಜ ಕಾಯಿಲೆಗಳಿಂದ ನಿಧನರಾಗಿದ್ದಾರೆ.
ಶಾಸಕ ರಾಜೂಗೌಡ ತಾಯಿ ನೀಲಮ್ಮಗೌಡತಿ ಪಾಟೀಲ್ (NeelammaGoudti Patil) ತಮ್ಮ 70ನೇ ವಯಸ್ಸಿನಲ್ಲಿ ನಿಧನ ಹೊಂದಿದರು. ವಯೋ ಸಹಜ ಖಾಯಿಲೆಗಳಿಂದ ಬಳಲುತ್ತಿದ್ದ ಅವರು ಇಂದು ಬಸವನ ಬಾಗೇವಾಡಿ (Basavana Bagewad) ತಾಲೂಕಿನ ಸ್ವಗ್ರಾಮ ಕುದರಿಸಾಲವಾಡಗಿ (Kudari Salawadgi) ನಿವಾಸದಲ್ಲಿ ಕೊನೆಯುಸಿರೆಳೆದರು.ಇದನ್ನೂ ಓದಿ: ಜಗಳವಾಡಿಕೊಂಡು ತವರು ಮನೆ ಸೇರಿದ್ದ ಹೆಂಡತಿ – ಅತ್ತೆಯನ್ನೇ ಕೊಂದು ಅಳಿಯ ಎಸ್ಕೇಪ್
ಶಾಸಕ ರಾಜುಗೌಡ ಸೇರಿದಂತೆ ಮೂವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ವಿವಿಧ ಮಠಾಧೀಶರು, ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ್ (MB Patil), ಸಚಿವ ಶಿವಾನಂದ ಪಾಟೀಲ್ (Shivanand Patil) ಇತರೆ ಜನಪ್ರತಿನಿಧಿಗಳ ಸಂತಾಪ ಸೂಚಿಸಿದ್ದಾರೆ.
ಗುರುವಾರ ಮಧ್ಯಾಹ್ನ 2 ಗಂಟೆಗೆ ಸ್ವಗ್ರಾಮ ಕುದರಿಸಾಲವಾಡಗಿ ಗ್ರಾಮದ ತೋಟದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.ಇದನ್ನೂ ಓದಿ: ಜಾಮೀನು ನಿರೀಕ್ಷೆಯಲ್ಲಿದ್ದ ದರ್ಶನ್‌ಗೆ ಮತ್ತೆ ಶಾಕ್ – ವಿಚಾರಣೆ ನಾಳೆಗೆ ಮುಂದೂಡಿಕೆ