ಬೆಂಗಳೂರು: ಸಮ್ಮಿಶ್ರ ಸರ್ಕಾರ ಪತನದ ನಂತರ ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡರ ವಿರುದ್ಧ ಜೆಡಿಎಸ್ ವರಿಷ್ಠ ದೇವೇಗೌಡರು ಆಕ್ರೋಶಗೊಂಡಿದ್ದಾರೆ. ಪಕ್ಷದಿಂದ ದೂರ ಉಳಿದ ಪಕ್ಷಕ್ಕೆ ದ್ರೋಹ ಬಗೆಯುತ್ತಿರುವ ಜಿಟಿ ದೇವೇಗೌಡರಿಗೆ ಪಾಠ ಕಲಿಸೋಕೆ ನಿರ್ಧಾರ ಮಾಡಿದ್ದು, ಪಕ್ಷದಿಂದಲೇ ಉಚ್ಛಾಟನೆ ಮಾಡೋ ಚಿಂತನೆಯಲ್ಲಿದ್ದಾರೆ.
Advertisement
ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದ ಜಿಟಿ ದೇವೇಗೌಡರಿಗೆ ಸರಿಯಾಗಿ ಖಾತೆ ಸಿಗಲಿಲ್ಲ ಅಂತ ಅಸಮಾಧಾನ ಇತ್ತು. ಮಂತ್ರಿ ಆಗಿದ್ದರು, ಸಮ್ಮಿಶ್ರ ಸರ್ಕಾರದಲ್ಲಿ ಸಿದ್ದರಾಮಯ್ಯ ಪಾತ್ರದ ಬಗ್ಗೆ ಜಿಟಿಡಿಗೆ ಅಸಮಾಧಾನ ಇತ್ತು. ಹೀಗಾಗಿ ಆಗಲೇ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದರು. ಇನ್ನು ಸಮ್ಮಿಶ್ರ ಸರ್ಕಾರ ಪತನ ಆದ ನಂತರವಂತೂ ಸಂಪೂರ್ಣ ಜೆಡಿಎಸ್ ಪಕ್ಷದಿಂದ ದೂರ ಉಳಿದಿದ್ದರು. ಯಾವುದೇ ಸಭೆ, ಪಕ್ಷದ ಸಮಾವೇಶಕ್ಕೆ ಹೋಗದೆ ತಟಸ್ಥವಾಗಿದ್ದರು. ಹೀಗಾಗಿ ಪಕ್ಷದಲ್ಲಿ ಇದ್ದರು ಸಕ್ರಿಯವಾಗಿ ಇಲ್ಲದೇ ಇರೋದಕ್ಕೆ ವರಿಷ್ಠ ದೇವೇಗೌಡರು ಆಕ್ರೋಶಗೊಂಡಿದ್ದಾರೆ ಅಂತ ಜೆಡಿಎಸ್ ಮೂಲಗಳು ಹೇಳುತ್ತಿವೆ.
Advertisement
Advertisement
ಪಕ್ಷದಿಂದ ದೂರ ಉಳಿದಿದ್ದು ಒಂದು ಕಡೆಯಾದ್ರೆ ಬಹಿರಂಗವಾಗಿ ಬಿಜೆಪಿ ನಾಯಕರ ಜೊತೆ ಜಿಟಿ ದೇವೇಗೌಡ ಕಾಣಿಸಿಕೊಳ್ತಿರೋದು ವರಿಷ್ಠ ದೇವೇಗೌಡರ ಕೆಂಗಣ್ಣಿಗೆ ಗುರಿಯಾಗಿದೆ. ಸಿಎಂ, ಸಚಿವರ ಜೊತೆ ಜಿಟಿ ದೇವೇಗೌಡ ಅನೇಕ ಬಾರಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಸೂಚನೆ ವಿರುದ್ಧವೇ ಬಿಜೆಪಿ ಅಭ್ಯರ್ಥಿ ಪರ ಮತ ಹಾಕಿದ್ರು. ಇವೆಲ್ಲ ಪಕ್ಷ ವಿರೋಧಿ ಚಟುವಟಿಕೆ ಅಂತ ಜೆಡಿಎಸ್ ವರಿಷ್ಠ ದೇವೇಗೌಡರು ನಿರ್ಧಾರ ಮಾಡಿದ್ದಾರೆ. ಹೀಗಾಗಿ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಅವರಿಗೆ ವಿವರಣೆ ಕೋರಿ ನೋಟಿಸ್ ನೀಡುವಂತೆ ದೇವೇಗೌಡರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ನೋಟಿಸ್ ಗೆ ಜಿಟಿ ದೇವೇಗೌಡರ ಉತ್ತರ ನೋಡಿಕೊಂಡು ಉಚ್ಛಾಟನೆ ಮಾಡೋ ಸಾಧ್ಯತೆ ಇದೆ ಅಂತಿದೆ ಜೆಡಿಎಸ್ ಮೂಲಗಳು. ಜೆಡಿಎಸ್ ನೋಟಿಸ್ ಗೆ ಉತ್ತರ ಕೊಡ್ತಾರಾ ಜಿಟಿ ದೇವೇಗೌಡ. ಉತ್ತರ ಕೊಡದೇ ಹೋದರೆ ವರಿಷ್ಠ ದೇವೇಗೌಡರು ಯಾವ ಕ್ರಮ ತಗೋತಾರೆ ಕಾದುನೋಡಬೇಕು.