ಬೆಂಗಳೂರು: ಚನ್ನಪಟ್ಟಣ ಫಲಿತಾಂಶದ (Channapatna) ನಂತರ ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಆಗಬಹುದು. ಜೆಡಿಎಸ್ ಬಿಜೆಪಿ ಜೊತೆ ಮರ್ಜ್ ಆಗಬಹುದು. ನನ್ನ ಪ್ರಕಾರ ಅದೇ ಬದಲಾವಣೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
ಈ ಕುರಿತು ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ನಮ್ಮ ಸರ್ಕಾರ ಪತನ ಅನ್ನೋದು ಭ್ರಮೆ. ಸಾಮ್ರಾಜ್ಯ ಮುಳುಗಿರುವುದು ನನಗೂ ಗೊತ್ತು. ಉದಯಿಸಿದ ಸೂರ್ಯ ಕೆಳಗೆ ಬರಲೇಬೇಕು. ಶ್ರೇಯಸ್ಸಾಗಬೇಕಾದರೆ ಧರ್ಮರಾಯನ ಧರ್ಮತ್ವ ಇರಬೇಕು. ವಿಧುರನ ನೀತಿ, ಕೃಷ್ಣನ ತಂತ್ರ ಇರಬೇಕು. ಕರ್ಣನ ದಾನತ್ವ ಇರಬೇಕು, ಭೀಮನ ಬಲ ಇರಬೇಕು. ಇದು ಯಾವುದು ಕುಮಾರಸ್ವಾಮಿಗೆ ಇಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: Bengaluru| ಹಸುಗೂಸನ್ನು ನೀರಿನ ಸಿಂಟೆಕ್ಸ್ ಟ್ಯಾಂಕ್‌ಗೆ ಎಸೆದು ಕೊಲೆ
ಒಂದು ದೇವಸ್ಥಾನ ಕಟ್ಟಿಲ್ಲ, ಒಂದು ಸೈಟ್ ಕೊಟ್ಟಿಲ್ಲ, ಬಡವರಿಗೆ ಒಂದು ಮನೆ ಕೊಟ್ಟಿಲ್ಲ. ಜನ ಯಾಕೆ ವೋಟ್ ಹಾಕುತ್ತಾರೆ? ಕುಮಾರಸ್ವಾಮಿ ಕಣ್ಣೀರು ಒರೆಸಿದ ಅಂತ ಯಾವ ರೈತ ಹೇಳುತ್ತಾನೆ ತೋರಿಸಿ. ನೀನು ಅಧಿಕಾರದಲ್ಲಿ ಇದ್ದಾಗ ಏನು ಮಾಡಿದೆ ದಯವಿಟ್ಟು ತೋರಿಸಪ್ಪ ಎಂದು ಹರಿಹಾಯ್ದರು. ಇದನ್ನೂ ಓದಿ: ಕೆನಡಾದಲ್ಲಿ ಹಿಂದೂ ದೇವಾಲಯದ ಮೇಲೆ ದಾಳಿಗೆ ಪ್ರಧಾನಿ ಮೋದಿ ಖಂಡನೆ