ಮಂಡ್ಯ: ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಜೆಡಿಎಸ್‍ನಿಂದ ದಬ್ಬಾಳಿಕೆ ಮಾಡಲಾಗುತ್ತಿದ್ದು, ರಾಜ್ಯದ ಅಭಿವೃದ್ಧಿಗಾಗಿ ದಬ್ಬಾಳಿಕೆ ಸಹಿಸಿಕೊಲ್ಳುವುದು ಅನಿವಾರ್ಯವಾಗಿದೆ ಎಂದು ಮಂಡ್ಯ ಮಾಜಿ ಶಾಸಕ ಚೆಲುವರಾಯ ಸ್ವಾಮಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕ್ಷೇತ್ರದಲ್ಲಿ ಕೆಲ ಗ್ರಾಮಗಳಿಗೆ ಭೇಟಿ ನೀಡಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಂಡ್ಯ ಸೇರಿದಂತೆ ರಾಜ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಆದರೆ ಜನರ ಒಳಿತಿಗಾಗಿ ಎಲ್ಲವನ್ನು ಸಹಿಸಿಕೊಂಡು ಇದ್ದೇವೆ. ಈ ಕುರಿತು ನಮ್ಮ ಕಾರ್ಯಕರ್ತರಿಗೆ ನೋವು ಸಹಿಸಿಕೊಳ್ಳಲು ಹೇಳಿದ್ದೇನೆ ಎಂದರು.
Advertisement
Advertisement
ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಅವರು ಕಾವೇರಿ ನಿರ್ವಹಣಾ ಮಂಡಳಿ ವಿಚಾರವಾಗಿ ಪ್ರಧಾನಿಗಳೊಂದಿಗೆ ಕೂತು ಮಾತನಾಡಿ ಸಮಸ್ಯೆ ನಿವಾರಣೆ ಮಾಡಿದರೆ ಉತ್ತಮ. ಕಾಂಗ್ರೆಸ್, ಜೆಡಿಎಸ್ ನಾಯಕರಿಗೆ ಉತ್ತಮ ಸರ್ಕಾರ ರಚಿಸಲು ಅವಕಾಶ ನೀಡಿದೆ. ಇದರಿಂದ ರೈತರ ಸಾಲಮನ್ನಾ, ಮಹಿಳೆಯರ ಆರ್ಥಿಕ ಪರಿಸ್ಥಿತಿ ಉತ್ತಮ ಪಡಿಸುವ ಅಶ್ವಾಸನೆಯನ್ನು ಈಡೇರಿಸಬೇಕಿದೆ. ಆದರೆ ಈ ವೇಳೆ ನಾವು ಜೆಡಿಎಸ್ ದಬ್ಬಾಳಿಕೆ ಮಾಡಿದರು ಎಂದು ಬೀದಿಗಿಳಿದು ಹೋರಾಟ ಮಾಡಿದರೆ ರಾಜ್ಯದ ಜನತೆಗೆ ಬೇರೆಯದ್ದೆ ಅರ್ಥ ಕಲ್ಪಿಸುತ್ತೆ. ಅದ್ದರಿಂದ ಎಲ್ಲಾ ಕಾರ್ಯಕರ್ತರಿಗೂ ತಮ್ಮ ನೋವು ಸಹಿಸಿಕೊಂಡು ಹೋಗುವಂತೆ ಮನವಿ ಮಾಡಿದ್ದೇನೆ. ಇಂದು ಸಹ ಮಾಧ್ಯಮದ ಮೂಲಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡುತ್ತೇನೆ ಎಂದರು.
Advertisement
ದೇವೇಗೌಡರಿಗೆ ಪ್ರಧಾನಿ ಅವರೊಂದಿಗೆ ಉತ್ತಮ ಬಾಂಧವ್ಯವಿದೆ. ರಾಜ್ಯದಲ್ಲಿ ಅವರದ್ದೇ ಸರ್ಕಾರವಿದ್ದು, ಅವರು ಸಮಸ್ಯೆ ನಿವಾರಿಸುವ ವಿಶ್ವಾಸವಿದೆ. ಸಿಎಂ ಕುಮಾರಸ್ವಾಮಿ ಅವರಿಗೂ ನೇರ ಮೋದಿ ಅವರನ್ನು ಭೇಟಿ ಮಾಡಲು ಅವಕಾಶ ಸಿಕ್ಕಿದೆ. ಆದರೆ ಕೇರಳದವರಿಗೆ ಭೇಟಿ ಅವಕಾಶ ನೀಡಿಲ್ಲ. ಅದ್ದರಿಂದ ಉತ್ತಮ ಅವಕಾಶವಿದ್ದು ಸಮಸ್ಯೆ ನಿವಾರಣೆ ಮಾಡಲು ಮಾಜಿ ದೇವೇಗೌಡ ಅವರಿಗೆ ಮಾತ್ರ ಸಾಧ್ಯ. ಅದ್ದರಿಂದ ಅವರಿಗೆ ಕಾಂಗ್ರೆಸ್ ಸೇರಿದಂತೆ ರಾಜ್ಯದ ಜನತೆ ಅವರಿಗೆ ಬೆಂಬಲ ನೀಡುತ್ತಾರೆ. ಮಂಡ್ಯ ಜಿಲ್ಲೆಯಲ್ಲಿ ಸಂಪೂರ್ಣ ಬೆಂಬಲ ನೀಡಿದ್ದಾರೆ. ಹಾಗಾಗಿ ಮಂಡ್ಯ ಜಿಲ್ಲೆಯ ಜನ್ರಿಗೆ ದೇವೆಗೌಡರು ನ್ಯಾಯ ಒದಗಿಸಿಕೊಡಲಿದ್ದಾರೆ ಎಂಬ ವಿಶ್ವಾಸವಿದೆ ಎಂದರು.
Advertisement
ಜಮೀರ್ ಕೋರ್ಸ್ ಅಗತ್ಯ: ಸಿಎಂ ಕುಮಾರಸ್ವಾಮಿ ಅವರನ್ನು ಸಚಿವ ಜಮೀರ್ ನಮ್ಮ ಸಿಎಂ ಎಂದಿದ್ದು ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಜಮೀರ್ ಸೀದಾ ಸೀದಾ ಹೇಳಿಕೆ ನೀಡಿದ್ದು ಅವರಿಗೆ ಕಷ್ಟವಾಗಿದೆ. ಅವರಿಗೆ ಮಾಧ್ಯಮಗಳನ್ನು ನಿರ್ವಹಿಸಲು ಬರುವುದಿಲ್ಲ. ಅದ್ದರಿಂದ ಅವರಿಗೆ ಮಾಧ್ಯಮ ಕೋರ್ಸ್ ಅಗತ್ಯವಿದೆ ಎಂದು ನಗೆ ಬೀರಿದರು.
ಹೈಕಮಾಂಡ್ ನಿರ್ಧರಿಸುತ್ತೆ: ಮುಂದಿನ ಚುನಾವಣೆಯಲ್ಲಿ ಮಂಡ್ಯದಲ್ಲಿ ಮೈತ್ರಿ ಮಾಡುವುದು ಬಿಡುವುದು ಹೈಕಮಾಂಡ್ ನಿರ್ಧಾರ ಮಾಡುತ್ತೆ. ನಾವು ಅವರ ತೀರ್ಮಾನಕ್ಕೆ ಬದ್ಧರಾಗಿದ್ದೇವೆ. ನಮ್ಮ ಸೋಲು, ನೋವು ಯಾವುದು ಮುಖ್ಯವಲ್ಲ. ಅದ್ದರಿಂದ ನಾಯಕರ ತೀರ್ಮಾನಕ್ಕೆ ನಮ್ಮ ಸಮ್ಮತ ಇರುತ್ತೆ, ಈ ವೇಳೆ ಚರ್ಚೆ ಬೇಡ ಎಂದರು.