ಮಂಡ್ಯ: ಕೆ.ಆರ್ ಪೇಟೆ ಕ್ಷೇತ್ರದ ಉಪಚುನಾವಣೆ ಅಖಾಡ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಅದರಲ್ಲೂ ಜೆಡಿಎಸ್ ಪಕ್ಷದ ಮಂಡ್ಯ ಜಿಲ್ಲೆಯ ಶಾಸಕರು, ಮುಖಂಡರನ್ನು ಹೊರತುಪಡಿಸಿ ಕೆ.ಆರ್ ಪೇಟೆ ಹಾಗೂ ಕೆಲ ರಾಜ್ಯದ ನಾಯಕರು ಫುಲ್ ಆಕ್ಟಿವ್ ಆಗಿದ್ದಾರೆ. ಆದರೆ ಜಿಲ್ಲೆ ನಾಯಕರು ಈ ಕಡೆ ತಲೆನೆ ಹಾಕ್ತಿಲ್ಲ.
ಕೆ.ಆರ್ ಪೇಟೆ ಕ್ಷೇತ್ರವನ್ನು ಮತ್ತೆ ತಮ್ಮ ತೆಕ್ಕೆಗೆ ಹಾಕಿಕೊಳ್ಳಬೇಕು ಎಂಬ ಉದ್ದೇಶದಿಂದ ದಳಪತಿಗಳು ಫುಲ್ ಸ್ಟ್ರಾಟರ್ಜಿ ಮಾಡುತ್ತಿದ್ದಾರೆ. ಆದರೆ ಮಂಡ್ಯ ಜಿಲ್ಲೆಯ ಶಾಸಕರು ಹಾಗೂ ಕೆಲ ಮುಖಂಡರು ಪ್ರಚಾರಕ್ಕೆ ಇಲ್ಲಿವರೆಗೂ ಬಂದಿಲ್ಲ. ಸೋಮವಾರ ನಾಮಪತ್ರ ಸಲ್ಲಿಸುವ ಜೆಡಿಎಸ್ ಮೆರವಣಿಗೆ ಮಾಡುವ ವೇಳೆ ಮಾಜಿ ಸಚಿವ ಪುಟ್ಟರಾಜು ಕಾಣಿಸಿಕೊಂಡಿದರು. ಬಳಿಕ ನಾಮಪತ್ರ ಸಲ್ಲಿಸುವ ವೇಳೆ ಪುಟ್ಟರಾಜು ಕಾಣಿಸಿಕೊಂಡಿರಲಿಲ್ಲ.
Advertisement
Advertisement
ಜಿಲ್ಲೆಯಲ್ಲಿ 6 ಮಂದಿ ಜೆಡಿಎಸ್ ಶಾಸಕರು ಇದರೂ ಪ್ರಚಾರ ಕೆಲಸಕ್ಕೆ ಮಾತ್ರ ಇದುರೆಗೂ ಬಂದಿಲ್ಲ. ಸದ್ಯ ಜೆಡಿಎಸ್ ಅಭ್ಯರ್ಥಿ ಬಿ.ಎಲ್ ದೇವರಾಜು ಪರ ಪಕ್ಕದ ಶ್ರವಣಬೆಳಗೊಳ ಕ್ಷೇತ್ರದ ಬಾಲಕೃಷ್ಣ ಹಾಗೂ ಕೆ.ಆರ್ ಪೇಟೆ ನಾಯಕರು ಮಾತ್ರ ಪ್ರಚಾರದ ವೇಳೆ ಸಾಥ್ ನೀಡುತ್ತಿದ್ದಾರೆ.
Advertisement
Advertisement
ಕೆ.ಆರ್ ಪೇಟೆ ಉಪಚುನಾವಣೆಗೆ ಜೆಡಿಎಸ್‍ನಿಂದ ಜಿಲ್ಲಾ ಪಂಚಾಯತಿ ಸದಸ್ಯ ಹೆಚ್.ಡಿ ಮಂಜು ಅವರಿಗೆ ಟಿಕೆಟ್ ನೀಡಬೇಕೆಂದು ಮಾಜಿ ಸಿಎಂ ಕುಮಾರಸ್ವಾಮಿ, ಮಾಜಿ ಸಚಿವ ಪುಟ್ಟರಾಜು ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರುಗಳಿಗೆ ಮುಖಂಡರಿಗೆ ಒಲವಿತ್ತು. ಆದರೆ ಜೆಡಿಎಸ್ ವರಿಷ್ಠರಾದ ಹೆಚ್.ಡಿ ದೇವೇಗೌಡ ಜೆಡಿಎಸ್ ಅಭ್ಯರ್ಥಿ ಬಿ.ಎಲ್ ದೇವರಾಜು ಅವರಿಗೆ ಟಿಕೆಟ್ ನೀಡಿದರು. ಇದರಿಂದ ಬೇಸರಗೊಂಡ ಹಿನ್ನೆಲೆಯಲ್ಲಿ ಇಲ್ಲಿವರೆಗೂ ಮಂಡ್ಯ ಮುಖಂಡರು ಕೆಆರ್‍ಪೇಟೆಗೆ ಬಂದಿಲ್ಲ ಎನ್ನಲಾಗುತ್ತಿದೆ.
ಒಂದೆಡೆ ಜಿಲ್ಲೆಯ ನಾಯಕರು ಪ್ರಚಾರದ ವೇಳೆ ಕಾಣಿಸಿಕೊಳ್ಳುತ್ತಿಲ್ಲ, ಇನ್ನೊಂದೆಡೆ ಈ ಡ್ಯಾಮೆಜ್‍ನ್ನು ಕಂಟ್ರೋಲ್ ಮಾಡಲು ಇಂದು ಮಾಜಿ ಸಚಿವ ರೇವಣ್ಣ ಜೆಡಿಎಸ್ ಅಭ್ಯರ್ಥಿ ಪರ ಮತ ಭೇಟೆ ಮಾಡಲು ಅಖಾಡಕ್ಕೆ ಧುಮ್ಮುಕುತ್ತಿದ್ದಾರೆ.