Bengaluru CityDistrictsKarnatakaLatest

ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಶ್ವನಾಥ್ ರಾಜೀನಾಮೆ? ಹೆಚ್ಚಿನ ಅಧಿಕಾರ ಕೋಡೋಣ ಅಂದ್ರು ಎಚ್‍ಡಿಕೆ

ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್ ಅವರು, ಆರೋಗ್ಯ ಸರಿಯಿಲ್ಲದ ಕಾರಣ ಅಧ್ಯಕ್ಷ ಸ್ಥಾನದಿಂದ ರಿಲೀವ್ ಮಾಡುವಂತೆ ಪಕ್ಷದ ವರಿಷ್ಠರಲ್ಲಿ ಮನವಿ ಮಾಡಿದ್ದಾಗಿ ಎನ್ನಲಾಗಿದೆ.

ಈ ಕುರಿತು ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಸಿಎಂ ಕುಮಾರಸ್ವಾಮಿ, ಆರೋಗ್ಯ ಸರಿ ಇಲ್ಲದ ಕಾರಣ ಹೀಗೆ ಹೇಳಿರಬಹುದೇ ಹೊರತು ಅಧಿಕಾರಕ್ಕಾಗಿ ಅಲ್ಲ. ಅಧಿಕಾರಕ್ಕೆ ಅವರ ಬೇಡಿಕೆ ಇದ್ದಲ್ಲಿ ಹೆಚ್ಚಿನ ಅಧಿಕಾರ ನೀಡೋಣ ಅಂದಿದ್ದಾರೆ.

hdk

ಕೇಂದ್ರ ಸಚಿವರ ಭೇಟಿ ಬಳಿಕ ಮಾತನಾಡಿದ ಸಿಎಂ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಆಗಲು ನಾನು ಸಮಯ ಕೇಳಿಲ್ಲ. ರಾಜ್ಯದ ಕೆಲಸಗಳ ಬಗ್ಗೆ ಕೇಂದ್ರ ಚರ್ಚಿಸಲು ಬಂದಿದ್ದೆ. ಇದೇ ವೇಳೆ ಸಮ್ಮಿಶ್ರ ಸರ್ಕಾರ ಖಾತೆ ಹಂಚಿಕೆ ತಡವಾಗುತ್ತಿರುವ ಬಗ್ಗೆ ಕಾಂಗ್ರೆಸ್ ಮುಖಂಡರಿಗೆ ಕೇಳಿ. ಜೆಡಿಎಸ್ ಪಾಲಿನ ಎರಡು ಸ್ಥಾನಗಳನ್ನು ಸೂಕ್ತ ಸಮಯದಲ್ಲಿ ಭರ್ತಿ ಮಾಡುತ್ತೇವೆ. ಆದರೆ ಲೋಕಸಭೆ ಸ್ಥಾನಗಳ ಹಂಚಿಕೆ ಬಗ್ಗೆ ಇನ್ನು ಯಾವುದೇ ಮಾತುಕತೆ ನಡೆದಿಲ್ಲ. ಈ ಕುರಿತು ಕಾಂಗ್ರೆಸ್ ನಾಯಕರ ಜೊತೆ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದರು.

ಇತ್ತ ರಾಜ್ಯ ಕಾಂಗ್ರೆಸ್‍ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ದೂರಗಳ ಪಟ್ಟಿ ಹೊತ್ತು ದೆಹಲಿಗೆ ತೆರಳಿದ್ದ ಸಿಎಂ ಕುಮಾರಸ್ವಾಮಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿಯಾಗದೆ ವಾಪಾಸ್ ಆಗಿದ್ದು, ಬಿಕ್ಕಟ್ಟಿನ ವೇಳೆ ರಾಹುಲ್ ಭೇಟಿ ಸರಿಯಲ್ಲ ಎಂದು ಹಿಂದಿರುಗಿದ್ದಾರೆ ಎನ್ನಲಾಗಿದೆ. ಅಲ್ಲದೇ ಮೂರು ರಾಜ್ಯಗಳ ಸಂಪುಟ ರಚನೆ ಹಾಗೂ ಸಂಸತ್ ಅಧಿವೇಶನದಲ್ಲಿ ಕಾರ್ಯದಲ್ಲಿ ನಿರತರಾಗಿರುವ ರಾಹುಲ್ ಗಾಂಧಿ ಕೂಡ ಕುಮಾರಸ್ವಾಮಿ ಭೇಟಿಯನ್ನ ನಿರ್ಲಕ್ಷ್ಯ ಮಾಡಿದ್ದಾರೆ ಎನ್ನಲಾಗಿದೆ.

H Vishwanath

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Related Articles

Leave a Reply

Your email address will not be published. Required fields are marked *