ಎರಡು ರಾಷ್ಟ್ರೀಯ ಪಕ್ಷಗಳಿಂದ ಅನ್ಯಾಯ, ಕುಮಾರಣ್ಣನನ್ನು ಗೆಲ್ಲಿಸಿದ್ರೆ ಬೆಂಗ್ಳೂರು ಅಭಿವೃದ್ಧಿ: ಶರವಣ

Public TV
1 Min Read
MLC Saravana 2

ಬೆಂಗಳೂರು: ಎರಡು ರಾಷ್ಟ್ರೀಯ ಪಕ್ಷಗಳಿಂದ ಬೆಂಗಳೂರಿಗೆ ಅನ್ಯಾಯವಾಗಿದ್ದು, ಕುಮಾರಸ್ವಾಮಿ ಅವರನ್ನು ಗೆಲ್ಲಿಸಿದರೆ ನಗರವನ್ನು ಅಭಿವೃದ್ಧಿ ಮಾಡುತ್ತೇವೆ ಎಂದು ಜೆಡಿಎಸ್ ವಿಧಾನಪರಿಷತ್ ಸದಸ್ಯ ಶರವಣ ಅವರು ಹೇಳಿದ್ದಾರೆ.

ಚುನಾವಣೆಯ ಹಿನ್ನೆಲೆಯಲ್ಲಿ ಮಂಗಳವಾರ ಜೆಡಿಎಸ್‍ನ “ವಿಕಾಸ ಪರ್ವ ಪಾದಯಾತ್ರೆ” ಬಸವನಗುಡಿಯ ದೊಡ್ಡ ಗಣಪತಿ ದೇವಾಲಯದಿಂದ ಆರಂಭವಾಯಿತು. ಈ ವೇಳೆ ಮಾತನಾಡಿದ ಅವರು ರಾಜ್ಯದಲ್ಲಿ 5 ವರ್ಷ ಬಹುಮತದ ಸರ್ಕಾರ ಇದ್ದರೂ ರಾಜ್ಯ ಅಭಿವೃದ್ಧಿಯಾಗಲಿಲ್ಲ. ಈ ಹಿಂದೆ ಎರಡು ರಾಷ್ಟ್ರೀಯ ಪಕ್ಷಗಳಿಗೆ ಮತ ನೀಡಿದ್ದೀರಿ. ಹೀಗಾಗಿ ಈ ಬಾರಿ ನಮಗೆ ಮತಗಳನ್ನು ನೀಡಿ ಎಂದು ಅವರು ಜನರಲ್ಲಿ ಮನವಿ ಮಾಡಿದರು.

ಬೆಂಗಳೂರು ಅಭಿವೃದ್ಧಿಗಾಗಿ ಜೆಡಿಎಸ್ ವಿಶೇಷ ಪ್ರಣಾಳಿಕೆಯನ್ನು ತರಲು ಮುಂದಾಗುತ್ತಿದೆ. ಕಾನೂನು ವ್ಯವಸ್ಥೆ ಹದಗೆಟ್ಟು ಹೋಗಿದೆ. ರಾತ್ರೋರಾತ್ರಿ ಟೆಂಡರ್ ಕರೆಯುವ ಮೂಲಕ ನಗರದ ಜನರಿಗೆ ಮೋಸ ಆಗಿದೆ. ಈ ಕಾರಣಕ್ಕಾಗಿ ಕುಮಾರಸ್ವಾಮಿ ಅವರ ಅಧಿಕಾರ ನೀಡಿ ಎಂದು ಜನರಲ್ಲಿ ವಿನಂತಿಸಿಕೊಂಡರು.

MLC Saravana

ಬುಧವಾರ ನಿರ್ಧಾರ:  ರೈತರ ಜಮೀನು ಲೂಟಿ ಹೊಡೆದ ಭ್ರಷ್ಟಾಚಾರಿಗಳನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಹೀಗಾಗಿ ಜೆಡಿಎಸ್ ವರಿಷ್ಠ ದೇವೇಗೌಡರ ನೇತೃತ್ವದಲ್ಲಿ ಪಾರ್ಲಿಮೆಂಟರಿ ಬೋರ್ಡ್ ಸಭೆ ಇದ್ದು, ಬಿಬಿಎಂಪಿಯಲ್ಲಿ ಬೆಂಬಲ ವಾಪಸ್ ಪಡೆಯುವ ಕುರಿತು ಬುಧವಾರ ನಿರ್ಧಾರ ಮಾಡಲಾಗುತ್ತದೆ ಎಂದು ಹೇಳಿದರು.

ಬಸವನಗುಡಿ ದೇವಾಲಯದಿಂದ ಆರಂಭಗೊಂಡ ಮೊದಲ ದಿನದ ಪಾದಯಾತ್ರೆ ಕತ್ರಿಗುಪ್ಪೆ ಮೂಲಕ ಸಾಗಿ ಶ್ರೀನಗರದಲ್ಲಿ ಅಂತ್ಯಗೊಂಡಿತು. ಇಂದಿನಿಂದ ಆರಂಭಗೊಂಡ ಈ ಪಾದಯಾತ್ರೆ 30 ದಿನಗಳ ಕಾಲ ಬೆಂಗಳೂರಿನ ಎಲ್ಲ ವಿಧಾನ ಸಭಾ ಕ್ಷೇತ್ರದಲ್ಲಿ ನಡೆಯಲಿದೆ.

MLC Saravana 3

Share This Article
Leave a Comment

Leave a Reply

Your email address will not be published. Required fields are marked *