Connect with us

ಸೋಶಿಯಲ್ ಮೀಡಿಯಾಗೆ ಎಚ್‍ಡಿಕೆ ಎಂಟ್ರಿ: ಏನ್ ಮಾಡ್ತಾರೆ? ಎಷ್ಟು ಜನ ಇದ್ದಾರೆ?

ಸೋಶಿಯಲ್ ಮೀಡಿಯಾಗೆ ಎಚ್‍ಡಿಕೆ ಎಂಟ್ರಿ: ಏನ್ ಮಾಡ್ತಾರೆ? ಎಷ್ಟು ಜನ ಇದ್ದಾರೆ?

ಬೆಂಗಳೂರು: ಮುಂದಿನ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಇಂದು ಸಾಮಾಜಿಕ ಜಾಲತಾಣಕ್ಕೆ ಎಂಟ್ರಿ ಕೊಟ್ಟಿದ್ದಾರೆ.

`ನಮ್ಮ ಕುಮಾರಣ್ಣ’ ಅನ್ನೋ ಶೀರ್ಷಿಕೆಯಲ್ಲಿ ಅಧಿಕೃತವಾಗಿ 5 ಸಾಮಾಜಿಕ ಜಾಲತಾಣಕ್ಕೆ ಎಂಟ್ರಿ ಕೊಟ್ಟಿರುವ ಅವರು, ಇನ್ಮುಂದೆ ಫೇಸ್ ಬುಕ್, ಟ್ವೀಟರ್, ಗೂಗಲ್ ಪ್ಲಸ್, ಯೂಟ್ಯೂಬ್, ಸೌಂಡ್ ಕ್ಲೌಡ್‍ಗಳಲ್ಲಿ ಸಕ್ರಿಯನಾಗಿರುವುದಾಗಿ ತಿಳಿಸಿದ್ದಾರೆ.

ಇಂದಿನಿಂದಲೇ ಜನರ ನಡುವೆ ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕ, ಸಂವಹನ ಮಾಡುತ್ತೇನೆ. ಈ ಜಾಲತಾಣದಲ್ಲಿ ಹಿಂದೆ 20 ತಿಂಗಳು ಮುಖ್ಯಮಂತ್ರಿಯಾಗಿ ಮಾಡಿದ ಕೆಲಸ ಸೇರಿದಂತೆ ಅನೇಕ ವಿಚಾರಗಳನ್ನು ಹಂಚಿಕೊಳ್ತೇನೆ. ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ಗ್ರಾಮವಾಸ್ತವ್ಯಗಳನ್ನು ಮಾಡಿದ್ದೆ. ಈ ಬಗ್ಗೆಯೂ ಜನರ ಜತೆ ಹಂಚಿಕೊಳ್ತೇನೆ ಅಂತಾ ಹೇಳಿದ್ದಾರೆ.

ಯುಪಿಯಂತೇ ಇಲ್ಲೂ ಪ್ರಚಾರ: ಯುಪಿ ಎಲೆಕ್ಷನ್ ನಲ್ಲಿ ಮೋದಿ ಬೆಂಬಲಿಗರು ವಾಟ್ಸಪ್ ಮೂಲಕ ಪ್ರಚಾರ ನಡೆಸಿದರು. ಅದೇ ರೀತಿ ರಾಜ್ಯದಲ್ಲೂ ನಾವು ಪ್ರಚಾರ ಮಾಡ್ತೇವೆ. ಆದ್ರೆ ಇದು ಮೋದಿ ಅನುಕರಣೆ ಅಲ್ಲ. ತಿಂಗಳಲ್ಲಿ ಒಂದು ದಿನ 3ರಿಂದ 4 ಗಂಟೆ ನಾನು ಫೇಸ್ ಬುಕ್, ಗೂಗಲ್ ಫ್ಲಸ್ ನಲ್ಲಿ ಜನ್ರ ಜೊತೆ ನಾನೇ ನೇರ ಸಂಪರ್ಕದಲ್ಲಿ ಇರುತ್ತೇನೆ. ನಾನು ಜನಪ್ರತಿನಿಧಿ ಆಗಿರೋವರೆಗೋ ನಾನು ಸೋಷಿಯಲ್ ಮೀಡಿಯಾದಲ್ಲಿ ಇರುತ್ತೇನೆ. ಸೋಷಿಯಲ್ ಮೀಡಿಯಾದ ಮಹತ್ವ ನನಗೆ ಅರ್ಥ ಆಗಿದೆ. ಈಗಾಗಲೇ ನನ್ನ ಜತೆ ಸಾಮಾಜಿಕ ಜಾಲತಾಣದ ಕಾರ್ಯನಿರ್ವಹಣೆಗೆ 35 ಮಂದಿ ಟೀಂ ಇದೆ ಅಂತಾ ನುಡಿದ್ರು.

ಮೊದಲ ಟ್ವೀಟ್: ಎರಡು ದಾರಿಗಳು ಎದುರಾದವು, ಆ ದಟ್ಟನೆಯ ಕಾಡಿನಲ್ಲಿ ನಾನು ಆಯ್ದುಕೊಂಡೆ ಹೆಚ್ಚು ಜನರು ನಡೆಯದ ಹಾದಿಯನ್ನು ಅದೇ ಅದೇ ವ್ಯತ್ಯಾಸ ಎಲ್ಲದಕ್ಕೂ ಅಂತಾ ರಾಬರ್ಟ್ ಫ್ರಾಸ್ಟ್ ಅವರ ಕವಿತೆಯ ಉಲ್ಲೇಖೀಸಿ ಟ್ವೀಟ್‍ಗೆ ಮುಂದಡಿಯಿಟ್ಟರು.

ಇದನ್ನೂ ಓದಿ: ಮೋದಿ ಅಶ್ವಮೇಧ ಕುದುರೆಯನ್ನು ಕಟ್ಟಿ ಹಾಕೋದೇ ಜೆಡಿಎಸ್: ಎಚ್‍ಡಿಕೆ

Advertisement
Advertisement