ಹಾಸನ: ರಾಷ್ಟದಲ್ಲಿಯೇ ಚುನಾವಣೆಗೆ ಒಂದು ಕುಟುಂಬದವರೇ ಹೆಚ್ಚು ಮಂದಿ ಸ್ಪರ್ಧಿಸಿರುವ ಪಕ್ಷ ಜೆಡಿಎಸ್ ಎಂದು ಕೆಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
Advertisement
ಹಾಸನದ ಖಾಸಗಿ ಕಾಲೇಜಿನಲ್ಲಿ ನಡೆದ ಜನಸ್ವರಾಜ್ ಸಮಾವೇಶದಲ್ಲಿ ದೇವೇಗೌಡರ ಕುಟುಂಬದ ಬಗ್ಗೆ ವ್ಯಂಗ್ಯವಾಡಿದ ಅವರು, ದೇವೇಗೌಡರ ಕುಟುಂಬದಲ್ಲಿ ಎಷ್ಟು ಜನ ಇದ್ದಾರೆ ನಿಮಗೆ ಗೊತ್ತಾ? ದೇವೇಗೌಡರು, ರೇವಣ್ಣ, ಭವಾನಿ ರೇವಣ್ಣ, ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಇನ್ನೂ ಯಾರಾದರು ಉಳಿದಿದ್ದಾರಾ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಜೆಡಿಎಸ್ ಅವ್ರನ್ನ ಮತ್ತೆ ಆಯ್ಕೆ ಮಾಡಿದ್ರೆ, ನಿಮಗೆ ಅಪಕೀರ್ತಿ: ಸದಾನಂದ ಗೌಡ
Advertisement
Advertisement
ಎಂಎಲ್‌ಸಿ ಚುನಾವಣೆಗೆ ದೇವೇಗೌಡರ ಮೊಮ್ಮಗ ಸೂರಜ್ ರೇವಣ್ಣ ಅಭ್ಯರ್ಥಿ ಆಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಈ ಬಾರಿ ನಮ್ಮ ಅಭ್ಯರ್ಥಿ ವಿಶ್ವನಾಥ್ ಅವರನ್ನು ಗೆಲ್ಲಿಸಬೇಕು. ರಾಷ್ಟದಲ್ಲಿಯೇ ಚುನಾವಣೆಗೆ ಒಂದು ಕುಟುಂಬದವರೇ ಸ್ಪರ್ಧಿಸಿರುವ ಪಕ್ಷ ಜೆಡಿಎಸ್. ವಿಶ್ವದಲ್ಲಿಯೇ ಮೊದಲನೆಯ ಸ್ಥಾನದ ನಾಯಕ ಪಟ್ಟಿಯಲ್ಲಿರುವುದು ಮೋದಿ ಅವರು. ವಿಶ್ವದಲ್ಲಿಯೇ ಎಂಟು ಜನ ಒಂದೇ ಕುಟುಂಬದವರು ಪಕ್ಷದಲ್ಲಿರುವುದು ಜೆಡಿಎಸ್‌ನಲ್ಲಿ. ಆದ್ದರಿಂದ ಸೂರಜ್ ರೇವಣ್ಣ ವಿರುದ್ಧ ಸ್ಪರ್ಧಿಸಿರುವ ನಮ್ಮ ಪಕ್ಷದ ಎಂಎಲ್‌ಸಿ ಅಭ್ಯರ್ಥಿ ವಿಶ್ವನಾಥ್ ಅವರನ್ನು ಗೆಲ್ಲಿಸುವ ಮೂಲಕ ಕುಟುಂಬ ರಾಜಕಾರಣಕ್ಕೆ ಬ್ರೇಕ್ ಹಾಕಿ. ಮುಂಬರುವ ದಿನಗಳಲ್ಲಿ ಈ ಜಿಲ್ಲೆ ಭಾರತೀಯ ಜನತಾ ಪಕ್ಷದ ಜಿಲ್ಲೆ ಆಗುತ್ತೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಭಾರತೀಯ ಸೇನೆಯ ಹುತಾತ್ಮ ಯೋಧನ ಪತ್ನಿ ಈಗ ಸೇನಾಧಿಕಾರಿ