ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯ ಇವತ್ತು ಜೆಡಿಎಸ್ ಬೈಯ್ಯಬೇಕಂದ್ರೆ, ಅವರ ಮೂಲ ಎಲ್ಲಿದೆ? ಅವರು ಜೆಡಿಎಸ್ ನಿಂದ ಬಂದವರು. ಹಣೆಬರಹ ಅದು, ಯಾವುದರಿಂದ ಲೀಡರ್ ಆಗ್ತಾರೆ ಅದನ್ನು ತುಳಿತ್ತಾರೆ. ಬಹಳ ದೊಡ್ಡದೊಡ್ಡದು ಮಾತಡ್ತಾರಲ್ಲ, ಒಂದು ಸಾರಿ ಅವರ ಇತಿಹಾಸ ನೋಡಿ. ಈ ರಾಜ್ಯದಲ್ಲಿ ಇಂದಿರಾ ಗಾಂಧಿ ಅವರನ್ನು ಕೆಟ್ಟ ಶಬ್ದಗಳಿಂದ ಬೈಯ್ದಿದ್ದು, ಇದೇ ಸಿದ್ರಾಮಣ್ಣ. ಹೌದೋ ಅಲ್ವೋ ಹೇಳಿ, ನಮ್ಮ ಹತ್ರನೂ ರೆಕಾರ್ಡ್ ಇವೆ, ಹಾಕ್ತೀವಿ ಎಂದು ಬಾಗಲಕೋಟೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸಿದ್ದರಾಮಯ್ಯ ಅವರಿಗೆ ಸವಾಲ್ ಹಾಕಿದ್ದಾರೆ.
Advertisement
ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಟಲ್ ಬಿಹಾರಿ ವಾಜಪೇಯಿ ಅವರು, ವಿರೋಧ ಪಕ್ಷದ ನಾಯಕರಾಗಿದ್ದಾಗ ಇಂದಿರಾಗಾಂಧಿ ಅವರಿಗೆ ಬೆಂಬಲ ಕೊಟ್ಟಿದ್ರು. ಆದರೆ ಇದೇ ಸಿದ್ದರಾಮಯ್ಯ ಅವರು ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಅವರನ್ನು ಏಕವಚನದಲ್ಲಿ ಬೈಯ್ದಿದ್ದರು. ಅಧಿಕಾರಕ್ಕಾಗಿ ಇವತ್ತು ಅವರ ಕಾಲಿಗೆ ಅಡ್ಡ ಬಿದ್ದು, ನಮಸ್ಕಾರ ಮಾಡ್ತಾರೆ. ನಾಚಿಕೆಯಾಗಲ್ಲ ಇವರಿಗೆ ದೊಡ್ಡ ಸಮಾಜವಾದದ ಬಗ್ಗೆ ಮಾತಡ್ತಾರೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಗಾಂಧಿವಾದಿ ಎಸ್.ಎನ್.ಸುಬ್ಬರಾವ್ ನಿಧನಕ್ಕೆ ಸಿಎಂ ಸಂತಾಪ
Advertisement
Advertisement
ಏಕ ವಚನದಲ್ಲಿ ಬೈಯ್ದಿದ್ದ ಸಿದ್ರಾಮಣ್ಣ, ತಾನು ಸಿಎಂ ಆಗಬೇಕು ಎನ್ನುವ ಹುಚ್ಚಿಗೆ ಇವತ್ತು ಕಾಲಿಗೆ ಬಿದ್ದಿದ್ದಾರೆ. ಇವತ್ತು ನಾನು ಕಾಂಗ್ರೆಸ್ ನಾಯಕ ಅಂತಿದ್ದಾರೆ. ಜೆಡಿಎಸ್ ಬಿಜೆಪಿಯ ಬಿ ಟೀಂ ಎಂಬ ಸಿದ್ದರಾಮಯ್ಯ ಆರೋಪ ವಿಚಾರವಾಗಿ ಮಾತನಾಡಿದ ಅವರು, ಯಾರು ಸ್ವಾಮಿ ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದ್ದು? ಯಾರು ಸ್ವಾಮಿ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದು ಎಂದು ಪ್ರಶ್ನಿಸಿದ್ದಾರೆ.
Advertisement
ದೇವೇಗೌಡರ ಜೊತೆ ಹೊಂದಾಣಿಕೆ ಮಾಡಿಕೊಂಡು ಪ್ರಧಾನಿ ಮಾಡಿದ್ದು, ನೀವೇ ತಾನೆ. ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದ್ದು ನೀವು ತಾನೆ. ಮೈಸೂರು ನಗರಸಭೆಯಲ್ಲಿ ಹೊಂದಾಣಿಕೆ ಮಾಡಿಕೊಂಡವರು ನೀವು ತಾನೆ. ಹಾಗಾಗಿ ಜೆಡಿಎಸ್ ಕಾಂಗ್ರೆಸ್ ನ ಬಿ ಟೀಂ. ಕಾಂಗ್ರೆಸ್ ನಲ್ಲಿ ಇರೋರೆಲ್ಲ ಜೆಡಿಎಸ್ ನಲ್ಲಿ ಇರ್ತಾರೆ. ಆಚೆ ಈಚೆ ಮಾಡುತ್ತಿರುತ್ತಾರೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ನನ್ನನ್ನು ಅವಮಾನ ಮಾಡಲಾಗಿದೆ – ಸಿಎಂ ಸ್ಥಾನಕ್ಕೆ ಅಮರೀಂದರ್ ಸಿಂಗ್ ರಾಜೀನಾಮೆ